ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಸಿಗರಿಗೆ ಡಬಲ್ ಡೆಕ್ಕರ್ ಬಸ್ ನಲ್ಲಿ ಮೈಸೂರು ಸುತ್ತುವ ಮೋಜು...

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 25: ಮೈಸೂರು ಪ್ರವಾಸಿಗರಿಗೆ ಖುಷಿಯ ವಿಚಾರವೊಂದಿದೆ. ಮೈಸೂರು ಪ್ರವಾಸಿ ತಾಣಗಳನ್ನು ಇನ್ನು ಮುಂದೆ ಡಬಲ್ ಡೆಕ್ಕರ್ ಬಸ್‌ ನಲ್ಲಿ ಕುಳಿತು ವೀಕ್ಷಣೆ ಮಾಡಬಹುದಾಗಿದೆ. ಮಾರ್ಚ್‌ ಅಂತ್ಯದ ವೇಳೆಗೆ ಡಬಲ್ ಡೆಕ್ಕರ್ ಬಸ್‌ ಗಳು ಮೈಸೂರಿನಲ್ಲಿ ರಸ್ತೆಗಿಳಿಯಲಿವೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮೈಸೂರು ಹಾಗೂ ಹಂಪಿಯಲ್ಲಿ ಪ್ರವಾಸಿ ತಾಣ ವೀಕ್ಷಣೆಗೆ ಬರುವವರಿಗೆ ಅನುಕೂಲ ಕಲ್ಪಿಸಲು ಡಬಲ್ ಡೆಕ್ಕರ್ ಬಸ್‌ ಗಳನ್ನು ಪರಿಚಯಿಸಲು ಯೋಜನೆ ರೂಪಿಸಿತ್ತು. 2019ರ ಜುಲೈ ತಿಂಗಳಲ್ಲಿ ಅಂದಿನ ಸಿಎಂ ಕುಮಾರಸ್ವಾಮಿ ಇದಕ್ಕೆ 5 ಕೋಟಿ ರೂಪಾಯಿ ಅನುದಾನ ನೀಡಿದ್ದರು. ಇದೀಗ ಒಂದು ಬಸ್‌ ಸಿದ್ಧವಾಗಿದೆ. ಉಳಿದ ಐದು ಬಸ್‌ ಗಳು ಮಾರ್ಚ್‌ ಅಂತ್ಯಕ್ಕೆ ಸಿದ್ಧಗೊಳ್ಳಲಿವೆ.

Double Decker Bus To See Tourists Places

 ಚಿತ್ರದುರ್ಗದಿಂದ ಶಿರಡಿಗೆ ನೂತನ ಸರ್ಕಾರಿ ಬಸ್ ಸೇವೆ ಚಿತ್ರದುರ್ಗದಿಂದ ಶಿರಡಿಗೆ ನೂತನ ಸರ್ಕಾರಿ ಬಸ್ ಸೇವೆ

ಬೆಂಗಳೂರು ಮೂಲದ ಕೆಎಂಎಸ್ ಕೋಚ್ ಬಿಲ್ಡರ್ಸ್ ಸಂಸ್ಥೆ 6 ಡಬಲ್ ಡೆಕ್ಕರ್ ಬಸ್‌ ಗಳನ್ನು ತಯಾರು ಮಾಡುತ್ತಿದೆ. ಪ್ರಾಯೋಗಿಕವಾಗಿ ಒಂದು ಬಸ್‌ ಸಿದ್ಧವಾಗಿದ್ದು, ಇದರಲ್ಲಿ ಒಟ್ಟು 40 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇಂಟರ್ ನ್ಯಾಷನಲ್‌ ಸೆಂಟರ್‌ ಫಾರ್‌ ಆಟೋಮೋಟಿವ್ ಟೆಕ್ನಾಲಜಿ ತಂಡ ಫೆಬ್ರವರಿ ಮೊದಲ ವಾರದಲ್ಲಿ ಸಿದ್ಧವಾಗಿರುವ ಬಸ್‌ ನ ಪರಿಶೀಲನೆ ನಡೆಸಿದೆ. ಅದರ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದೇವೆ. ಜೊತೆಗೆ ನೋದಂಣಿಗೂ ಅರ್ಜಿ ಸಲ್ಲಿಸಲಾಗಿದೆ ಎಂದು ಕೆಎಸ್ ‌ಟಿಡಿಸಿ ಎಂಡಿ ಕುಮಾರ್‌ ಪುಷ್ಕರ್ ತಿಳಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲು ಬಿಎಂಟಿಸಿಯ 2 ಹೊಸ ರೂಟ್ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲು ಬಿಎಂಟಿಸಿಯ 2 ಹೊಸ ರೂಟ್

ಮೈಸೂರಿಗೆ ನಾಲ್ಕು ಹಾಗೂ ಹಂಪಿಗೆ ಎರಡು ಡಬಲ್ ಡೆಕ್ಕರ್ ಬಸ್‌ ಗಳನ್ನು ನೀಡಲಾಗುತ್ತದೆಂದು ತಿಳಿದುಬಂದಿದೆ.

English summary
Mysuru Tourists now have a special double decker bus to see places in Mysuru. This buses will hit Mysuru by the end of this March
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X