ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಹೆಸರು ತರಬೇಡಿ; ಸಿದ್ದರಾಮಯ್ಯ ಮೇಲೆ ಸಿಡಿದ ಪ್ರತಾಪ್ ಸಿಂಹ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 9: ಪ್ರತಿ ಬಾರಿ ನಿಮ್ಮನ್ನು ಪ್ರಶ್ನಿಸಿದಾಗ ನೀವು ಪ್ರಧಾನಿ ಹೆಸರು ಮಧ್ಯೆ ತರಬೇಡಿ ಮತ್ತು ನಿಮ್ಮ ಮಟ್ಟವನ್ನು ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ ಎಂದು ಸಂಸದ ಪ್ರತಾಪ್ ಸಿಂಹ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.

Recommended Video

Facebook , Instagram , tinder ಸೇರಿದಂತೆ ಬಾರತೀಯ ಸೇನೆಯು 89 ಆ್ಯಪ್‌ಗಳನ್ನು ನಿಷೇಧಿಸಿದೆ.| Oneindia Kannada

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮಾತೆತ್ತಿದರೆ ಪಿಎಂ ಕೇರ್ ಗೆ ಲೆಕ್ಕ ಕೊಡಿ ಎಂದು ಪ್ರಶ್ನಿಸುತ್ತಾರೆ. ಪ್ರಧಾನಿ ಮಟ್ಟಕ್ಕೆ ನಿಮ್ಮ ಗೌರವವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ನೀವೇನಾದರೂ ಈ ರೀತಿ ಪ್ರಶ್ನೆ ಕೇಳುತ್ತಿದ್ದೀರಾ? ನಿಮ್ಮ ವ್ಯಾಪ್ತಿ ಇಲ್ಲಿಯ ಕರ್ನಾಟಕದ ಬೌಂಡರಿ ಒಳಗೇ ಇರಲಿ, ಎಲ್ಲದಕ್ಕೂ ಪ್ರಧಾನಿ ಅವರನ್ನು ಮಧ್ಯ ತರಬೇಡಿ, ನಮ್ಮನ್ನ ಕೇಳಿ. ನಾವು ಉತ್ತರಿಸುತ್ತೇವೆ ಎಂದು ಕಿಡಿಕಾರಿದರು.

ಮೊದಲು ಉತ್ತರ ಕೊಡಿ, ಅಂಜಿಕೆ ಯಾಕೆ? ಸಿದ್ದರಾಮಯ್ಯಮೊದಲು ಉತ್ತರ ಕೊಡಿ, ಅಂಜಿಕೆ ಯಾಕೆ? ಸಿದ್ದರಾಮಯ್ಯ

ಸಿದ್ದರಾಮಯ್ಯನವರಿಗೆ ಪ್ರಶ್ನೆ ಹಾಗೂ ಟೀಕೆ ಮಾಡುವ ಎಲ್ಲಾ ಹಕ್ಕುಗಳಿವೆ. ಆತ್ಮನಿರ್ಭರ ಭಾರತದ ಸಲುವಾಗಿ ವರ್ಚ್ಯುವಲ್ rally ಅನ್ನು ಬಿಜಿಪಿ ಮಾಡುತ್ತಿದೆ. ಸಮಾರೋಪ ಸಮಾರಂಭದಲ್ಲಿ ಬಿ.ಎಲ್. ಸಂತೋಷ್ ಅವರ ಮಾತಿಗೆ ಸಿದ್ದರಾಮಯ್ಯ ಅವರು ಉತ್ತರ ನೀಡಿದ್ದು ವೈಯಕ್ತಿಕವಾಗಿ ಸಂತೋಷವಾಯಿತು. ಬಿ.ಎಲ್. ಸಂತೋಷ್ ಅವರ ಭಾಷಣ ಸಿದ್ದರಾಮಯ್ಯನವರನ್ನು ಆಕರ್ಷಿಸಿದೆ ಎಂದರೆ ಭಾಷಣವನ್ನು ಪೂರ್ತಿಯಾಗಿ ಕೇಳಿದ್ದಾರೆ ಎಂದರ್ಥ ಎಂದರು.

Dont Bring PM Name In Every Matter Reacted Prathap Simha To Siddaramiah

ಪಾಲಿಕೆ ಸದಸ್ಯರಿಗೆ ಸವಾಲು: ಮೈಸೂರು ಮಹಾನಗರ ಪಾಲಿಕೆ ಸದಸ್ಯರ ಆರೋಪಕ್ಕೆ ತಿರುಗೇಟು ನೀಡಿದ ಪ್ರತಾಪ್ ಸಿಂಹ, ಮಹಾನಗರ ಪಾಲಿಕೆಯ ನಿಯಮಾನುಸಾರವೇ ಯಾರೆಲ್ಲಾ ಕಟ್ಟಡ ಕಟ್ಟಿದ್ದೀರಿ? ನಿಯಮ ಉಲ್ಲಂಘನೆ ಮಾಡದೇ ಯಾರೆಲ್ಲ ಪಾಲಿಕೆ ಸದಸ್ಯರು ಕಮರ್ಷಿಯಲ್ ಹಾಗೂ ವಾಸಕ್ಕೆ ಕಟ್ಟಡ ಕಟ್ಟಿದ್ದಾರೆ ಎಂದು ಘೋಷಣೆ ಮಾಡಲಿ. ಅಂತಹವರ ಬಳಿ ನಾನೇ ಖುದ್ದಾಗಿ ಅಧಿಕಾರಿಗಳೊಂದಿಗೆ ತೆರಳಿ ಸತ್ಯಾಸತ್ಯತೆ ಪರಿಶೀಲಿಸುತ್ತೇನೆ ಎಂದು ಸವಾಲು ಹಾಕಿದರು.

ಬೆಂಗಳೂರು ಬಿಡುತ್ತಿರುವ ಜನರಿಗೆ ವಿಶ್ವಾಸ ತುಂಬಬೇಕಿತ್ತು. ಆದರೆ...ಬೆಂಗಳೂರು ಬಿಡುತ್ತಿರುವ ಜನರಿಗೆ ವಿಶ್ವಾಸ ತುಂಬಬೇಕಿತ್ತು. ಆದರೆ...

ಬಾಸ್ ಎಂದರೆ ತಪ್ಪೇನು?: ಸಿದ್ದರಾಮಯ್ಯ ಅವರನ್ನು ಟ್ಬಿಟರ್ ನಲ್ಲಿ ಬಾಸ್ ಎಂದು ಉಲ್ಲೇಖಿಸಿದ್ದಕ್ಕೆ ಸ್ಪಷ್ಟನೆ ನೀಡಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಅವರನ್ನು ಬಾಸ್ ಅನ್ನೋದ್ರಲ್ಲಿ ತಪ್ಪೇನಿದೆ?. ಅವರು ಈ ರಾಜ್ಯವನ್ನು ಆಳಿದ ನಾಯಕರು. ಅಲ್ಲದೇ ಈಗ ವಿರೋಧ ಪಕ್ಷದ ನಾಯಕರಾದರೂ ಮೈಸೂರಿನ ಮಗ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಹೀಗಾಗಿ ಬಾಸ್ ಅಂತ ಗೌರವದಿಂದಲೇ ಕರೆದಿದ್ದೇನೆ ಎಂದರು.

English summary
"Dont bring pm name in every matter. Dont compare you with pm" reacted prathap simha to siddaramaiah statement in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X