ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಬೆಂಬಲಿಗರಿಂದ ಬಿಜೆಪಿಗೆ ಮತ: ಜಿಟಿಡಿ ಹೇಳಿಕೆಗೆ ಡಿಕೆಶಿ ಏನಂದ್ರು?

|
Google Oneindia Kannada News

Recommended Video

ಎಲ್ಲದಕ್ಕೂ ಉತ್ತರ ಕೊಡೋಕೆ ನಾನೇನು......? | Oneindia Kannada

ಮೈಸೂರು, ಮೇ 02: ಇತ್ತೀಚೆಗಷ್ಟೇ ಪೂರ್ಣಗೊಂಡ ಲೋಕಸಭೆ ಚುನಾವಣೆಯ ಮತದಾನದ ಪ್ರಕ್ರಿಯೆಯಲ್ಲಿ ಜೆಡಿಎಸ್ ಬೆಂಬಲಿಗರು ಬಿಜೆಪಿಗೆ ಮತಹಾಕಿದ್ದಾರೆ ಎಂಬ ಅಚ್ಚರಿಯ ಹೇಳಿಕೆಯನ್ನು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ಕೇಳಿದ ಪತ್ರಕರ್ತರಿಗೆ ಜಲಸಂಪನ್ಮೂಲ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಖಡಕ್ ಆಗಿ ಉತ್ತರಿಸಿದ್ದಾರೆ. "ನಾನೇನು ಕಾಂಗ್ರೆಸ್ ವಕ್ತಾರನಲ್ಲ ಎಲ್ಲ ಹೇಳಿಕೆಗಳೂ ಪ್ರತಿಕ್ರಿಯೆ ನೀಡೋಕೆ. ನಾನು ಕಾಂಗ್ರೆಸ್ ನ ಒಬ್ಬ ಸಾಮಾನ್ಯ ಕಾರ್ಯಕರ್ತ" ಎಂದು ಡಿಕೆಶಿ ಹೇಳಿದ್ದಾರೆ.

ಕೊನೆಗೂ ಒಂದಾದ ಸಿದ್ದರಾಮಯ್ಯ, ಜಿಟಿಡಿ:ಇಂದು ಚಾಮುಂಡೇಶ್ವರಿಯಲ್ಲಿ ಭರ್ಜರಿ ಪ್ರಚಾರ ಕೊನೆಗೂ ಒಂದಾದ ಸಿದ್ದರಾಮಯ್ಯ, ಜಿಟಿಡಿ:ಇಂದು ಚಾಮುಂಡೇಶ್ವರಿಯಲ್ಲಿ ಭರ್ಜರಿ ಪ್ರಚಾರ

ಈ ಮೂಲಕ ಜಿಟಿಡಿ ಹೇಳಿಕೆಯಿಂದ ಮೈತ್ರಿ ಸರ್ಕಾರಕ್ಕೆ ಇರಿಸುಮುರಿಸುಂಟಾಗಿದೆ ಎಂಬುದನ್ನು ಡಿಕೆಶಿ ತಮ್ಮ ಮುಖಭಾವದ ಮೂಲಕವೇ ತೋರಿಸಿಕೊಟ್ಟಿದ್ದಾರೆ.

DK Shivakumars reaction for GTDs JDS supporters voted for BJP statement

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಜಿಟಿಡಿ, "ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸೀಟು ಹಂಚಿಕೆಯ ಕುರಿತಂತೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಉದಾಹರಣೆಗೆ ಮೈಸೂರಿನ ಉದ್ಬೂರ್ ನಲ್ಲಿ ಜನರು ಪಂಚಾಯತಿ ಚುನಾವಣೆಗೆ ಹೋರಾಡುವಂತೆ ಹೋರಾಡಿದ್ದಾರೆ. ಯಾರು ಕಾಂಗ್ರೆಸ್ ನಲ್ಲಿದ್ದಾರೋ ಅವರೆಲ್ಲ ಕಾಂಗ್ರೆಸ್ಸಿಗೆ ಮತಹಾಕಿದ್ದಾರೆ, ಆದರೆ ಯಾರು ಜೆಡಿ ಎಸ್ ಬೆಂಬಲಿಗರೋ ಅವರೆಲ್ಲ ಬಿಜೆಪಿಗೆ ಮತಹಾಕಿದ್ದಾರೆ. ಬೇರೆಲ್ಲ ಕ್ಷೇತ್ರಗಳಲ್ಲೂ ಹಾಗೆಯೇ ಆಗಿದೆ" ಎಂದಿದ್ದರು.

ಮೈಸೂರಲ್ಲಿ ಕಾಂಗ್ರೆಸ್ ಸೋತರೆ ನಾವು ಜವಾಬ್ದಾರರಲ್ಲ: ಜಿ.ಟಿ.ದೇವೇಗೌಡ ಮೈಸೂರಲ್ಲಿ ಕಾಂಗ್ರೆಸ್ ಸೋತರೆ ನಾವು ಜವಾಬ್ದಾರರಲ್ಲ: ಜಿ.ಟಿ.ದೇವೇಗೌಡ

"ಅಕಸ್ಮಾತ್ ಎಲ್ಲಾ ಕ್ಷೇತ್ರಗಳಲ್ಲೂ ಮೈತ್ರಿಪಕ್ಷಗಳು ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಹೋರಾಡಿದ್ದರೆ ಬಿಜೆಪಿಗೆ ಕರ್ನಾಟಕದ 28 ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲೂ ಗೆಲ್ಲುವುದಕ್ಕೆ ಸಾಧ್ಯವಾಗುತ್ತಿರಲ್ಲ" ಎಂದಿದ್ದರು.

ಲೋಕಸಭಾ ಚುನಾವಣೆಯ ಮತದಾನಕ್ಕೂ ಮುನ್ನವೇ, "ಮಂಡ್ಯದಲ್ಲಿಕಾಂಗ್ರೆಸ್ ನಮಗೆ ಬೆಂಬಲ ನೀಡುತ್ತಿಲ್ಲ, ಮೈಸೂರಿನಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ನಾವು ಜವಾಬ್ದಾರರಲ್ಲ" ಎಂಬಿತ್ಯಾದಿ ಹೇಳಿಕೆಯನ್ನು ಜಿಟಿಡಿ ನೀಡಿದ್ದರು.

English summary
Karnataka higher education minister and JDS MLA, GT Devegowda told, "JDS supporters voted for BJP in Karnataka in on going Lok Sabha elections 2019" Congress leader DK Shivakumar reacted to it and told, He is not Congress Spokeperson to react to it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X