ಚಾಮುಂಡಿ ಸನ್ನಿಧಿಯಲ್ಲಿ ಮುಖಾಮುಖಿಯಾದ ನಾಯಕರು
ಮೈಸೂರು, ನವೆಂಬರ್ 8: ಇಂದು ಅನರ್ಹ ಶಾಸಕರು, ಮಾಜಿ ಸಚಿವರು ಮಾತ್ರವಲ್ಲದೆ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ ಕೂಡ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.
ರಮೇಶ್ ಜಾರಕಿಹೊಳಿಯಿಂದ ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಇಂದು ಬೆಳಿಗ್ಗೆಯೇ ಅನರ್ಹ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಚಾಮುಂಡಿಯ ದರ್ಶನ ಪಡೆದರು. ಬಳಿಕ ಮಾಜಿ ಸಚಿವ ಡಿಕೆ ಶಿವಕುಮಾರ್ ಕೂಡ ನಾಡ ಅಧಿದೇವತೆಯ ದರ್ಶನಕ್ಕೆ ಬಂದರು. ಇದೇ ವೇಳೆ ಮಾಜಿ ಸಚಿವ ಜಿ.ಟಿ ದೇವೇಗೌಡ ಡಿಕೆಎಸ್ಗೆ ಮುಖಾಮುಖಿಯಾದರು. ಉಭಯ ನಾಯಕರು ಆಗ ತಾನೆ ಪೂಜೆ ಮುಗಿಸಿ ಹೊರಬರುತ್ತಿದ್ದಂತೆ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಕೂಡ ಚಾಮುಂಡಿ ಸನ್ನಿಧಿಗೆ ಆಗಮಿಸಿದರು. ಈ ವೇಳೆ ಡಿ.ಕೆ ಶಿವಕುಮಾರ್, ಎಚ್ಡಿಡಿ ಕಾಲಿಗೆ ಬಿದ್ದು ನಮಸ್ಕಾರ ಮಾಡಿದರು.
ಡಿಕೆಶಿ 2 ದಿನ ಮೈಸೂರು, ಮಂಡ್ಯದಲ್ಲಿ ಟೆಂಪಲ್ ರನ್: ಟಿಪ್ಪು ಮಸೀದಿಗೂ ಭೇಟಿ
ಇದೇ ಸಂದರ್ಭದಲ್ಲಿ ಜಿಟಿ ದೇವೇಗೌಡ ಮತ್ತು ಡಿಕೆಶಿ ಇಬ್ಬರೂ ಮುಖಾಮುಖಿ ಆಗಿ ಕುಶಲೋಪರಿ ವಿಚಾರಿಸಿದರು. ದರ್ಶನದ ಬಳಿಕ ಮಾತನಾಡಿದ ಜಿಟಿಡಿ, "ನಾನು ಪ್ರತಿ ಶುಕ್ರವಾರ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಬರುತ್ತೇನೆ. ಇವತ್ತು ಡಿ.ಕೆ.ಶಿವಕುಮಾರ್ ಅವರು ಬಂದಿದ್ದಾರೆ. ಅವರಿಗೆ ಚಾಮುಂಡೇಶ್ವರಿ ಮೇಲೆ ಹೆಚ್ಚು ಭಕ್ತಿ, ನಂಬಿಕೆ ಇದೆ. ಅವರಿಗೆ ದೇವಿ ಒಳ್ಳೆಯದು ಮಾಡಲಿ" ಎಂದರು.