ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದ ರೈತರಿಂದ ಸಚಿವ ಡಿಕೆ ಶಿವಕುಮಾರ್ ಕಾರಿಗೆ ಮುತ್ತಿಗೆ

|
Google Oneindia Kannada News

ಮೈಸೂರು, ಜೂನ್ 24 : ತಮ್ಮ ನಾಲೆಗಳಿಗೆ ನೀರು ಹರಿಸುವಂತೆ ಹಾಗೂ ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಸಂಬಂಧಿಸಿದಂತೆ ಇಂದು ಮಂಡ್ಯದ ಬಳಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾರಿಗೆ ರೈತರು ಮುತ್ತಿಗೆ ಹಾಕಿದ್ದಾರೆ.

ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ರೈತರು ಸಚಿವರ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಡಿ. ಕೆ ಶಿವಕುಮಾರ್ ಅವರು ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದರು. ರೈತರು ಈ ಮಾರ್ಗವಾಗಿ ಡಿಕೆಶಿ ಬರುವುದನ್ನು ತಿಳಿದು ಹೆದ್ದಾರಿಗಿಳಿದಿದ್ದರು. ಅದರಂತೆಯೇ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಶಿವಕುಮಾರ್ ಕಾರು ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಗಾಂಧಿ ಅನುಯಾಯಿ, ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ: ಡಿಕೆಶಿ ನಾನು ಗಾಂಧಿ ಅನುಯಾಯಿ, ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ: ಡಿಕೆಶಿ

ಚುನಾವಣೆಗೂ ಮುಂಚೆ ಮಂಡ್ಯ ರೈತರ ಜಮೀನಿಗೆ ಪ್ರಾಧಿಕಾರವನ್ನು ಕೇಳದೆ ನೀರು ಬಿಟ್ಟಿದ್ದೀರಿ. ಆದರೆ ಚುನಾವಣೆ ಮುಗಿದ ಮೇಲೆ ನೀರು ಬಿಡಿ ಅಂದರೆ ಪ್ರಾಧಿಕಾರದ ಕಡೆ ಕೈ ತೋರಿಸುತ್ತೀರಾ ಎಂದು ಶಿವಕುಮಾರ್ ಅವರ ಕಾರಿಗೆ ರೈತರು ಮುತ್ತಿಗೆ ಹಾಕಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಕೆಆರ್​ಎಸ್​ನಿಂದ ನೀರು ಬಿಡಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

DK Shivakumar car stopped by Mandya farmers

ಕುಂದಗೋಳ: ಕಾಂಗ್ರೆಸ್ ನಲ್ಲಿ ಗಂಡಸರಿಲ್ಲ, ಅದಕ್ಕೆ ಡಿಕೆಶಿಯನ್ನು ಕರೆತಂದಿರೋದು ಕುಂದಗೋಳ: ಕಾಂಗ್ರೆಸ್ ನಲ್ಲಿ ಗಂಡಸರಿಲ್ಲ, ಅದಕ್ಕೆ ಡಿಕೆಶಿಯನ್ನು ಕರೆತಂದಿರೋದು

ಅಲ್ಲದೇ ಮೂರು ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಕಿಡಿಕಾರಿದರು. ಇನ್ನು ಇದೇ ವೇಳೆ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯಿಸಿ, ಪ್ರತಿಭಟನೆ ವಿಚಾರವೇ ಗೊತ್ತಿಲ್ಲ. ಗೊತ್ತಿದ್ದರೆ ನಾನೇ ರೈತರ ಬಳಿ ಮಾತನಾಡುತ್ತಿದ್ದೆ. ಸಮಸ್ಯೆ ಬಗ್ಗೆ ಗಮನಹರಿಸುತ್ತೇನೆ. ಕಾವೇರಿ ನದಿ ನೀರನ್ನು ಹರಿಸುವ ಅಧಿಕಾರ ನಮ್ಮ ಅಧಿಕಾರಿಗಳಿಗೆ ಇಲ್ಲ. ಈ ಬಗ್ಗೆ ಜೂನ್ 25ರಂದು ಸಭೆ ಕರೆದಿದ್ದು, ಈ ಸಂಬಂಧವಾಗಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

English summary
DK Shivakumar car stopped by Mandya farmers. They got angry over minister. They made appeal that, do not flow the water to Tamilnadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X