ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್ಥಿಕ ಗಣತಿಗಾಗಿ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 06: 7 ನೇ ಆರ್ಥಿಕ ಗಣತಿ 2020 ಪ್ರಯುಕ್ತ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರು ಮೊಬೈಲ್‌ ಆ್ಯಪ್ ಬಿಡುಗಡೆ ಬಳಿಕ ಮಾತನಾಡಿದ ಅವರು, ಇದೇ‌ ಮೊದಲ ಬಾರಿಗೆ ಡಿಜಿಟಲ್‌ ಇಂಡಿಯಾ ಕಾರ್ಯಕ್ರಮದಡಿ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

ನಾಳೆಯಿಂದ ಮೈಸೂರು ಜಿಲ್ಲೆಯಾದ್ಯಂತ ಮಾಹಿತಿ ಸಂಗ್ರಹಿಸಲಾಗುವುದು. ಉದ್ಯಮ‌ ಸ್ಥಳಗಳಿಗೆ, ಮನೆಗಳಿಗೆ ತೆರಳಿ ಸಿಬ್ಬಂದಿಗಳು ಮಾಹಿತಿ ಸಂಗ್ರಹಿಸಲಿದ್ದಾರೆ. ಅಧಿಕೃತ ಮತ್ತು ಅನಧಿಕೃತ ಎಲ್ಲಾ ಉದ್ಯಮಗಳ ಮಾಹಿತಿ ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಪೌರತ್ವ ಕಾಯ್ದೆಗಾಗಿ ಬಿಜೆಪಿಯಿಂದ ಬೆದರಿಕೆ: ಯತೀಂದ್ರ ಸಿದ್ದರಾಮಯ್ಯಪೌರತ್ವ ಕಾಯ್ದೆಗಾಗಿ ಬಿಜೆಪಿಯಿಂದ ಬೆದರಿಕೆ: ಯತೀಂದ್ರ ಸಿದ್ದರಾಮಯ್ಯ

ಪ್ರತಿ ತಾಲ್ಲೂಕು ಹಾಗೂ ಪಂಚಾಯತ್ ವಾರು ಆರ್ಥಿಕ ಗಣತಿಗೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಪ್ರತಿ ಐದು ವರ್ಷಕ್ಕೆ ಒಮ್ಮೆ ಗಣತಿ ನಡೆಯುತ್ತಿದೆ. ಗಣತಿ ಕಾರ್ಯವು ಜನವರಿ 2020 ರಿಂದ ಮಾರ್ಚ್ 2020 ರವರೆಗೆ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದರು.

District Collector Released By Mobile App For Financial Census

ಖಾಸಗಿ ಸಂಸ್ಥೆ ಮೂಲಕವೂ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಗಣತಿದಾರರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಎಲ್ಲಾ ‌ಉದ್ಯಮ‌ದಾರರು ಗಣತಿದಾರರಿಗೆ ಸರಿಯಾದ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಕೃಷಿ ಕ್ಷೇತ್ರ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾರ್ವಜನಿಕ ಇಲಾಖೆಯ ಆಡಳಿತ ಕಚೇರಿಗಳು, ರಕ್ಷಣಾ ಮಂತ್ರಾಲಯ, ಸ್ಥಳೀಯ ಸಂಸ್ಥೆಗಳ ಆಡಳಿತ ಕಚೇರಿಗಳು ಈ ಗಣತಿಗೆ ಒಳಪಡುವುದಿಲ್ಲ. ಇದು ಕೇವಲ ಆರ್ಥಿಕ ಗಣತಿ ಮಾತ್ರವೆಂದರು.

 ಶೀಘ್ರದಲ್ಲೇ ಮೈಸೂರಿಗೆ ಸೇರ್ಪಡೆಯಾಗಲಿದೆ ಮತ್ತೊಂದು ಆಕರ್ಷಣೆ ಶೀಘ್ರದಲ್ಲೇ ಮೈಸೂರಿಗೆ ಸೇರ್ಪಡೆಯಾಗಲಿದೆ ಮತ್ತೊಂದು ಆಕರ್ಷಣೆ

ಜಿಎಸ್ ಟಿ, ಆದಾಯ ತೆರಿಗೆ ಅಥವಾ ಇತರೆ ಯಾವುದೇ ಅನ್ಯ ಉದ್ದೇಶಗಳು ಇದರಲ್ಲಿ ಇಲ್ಲ. ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಗಣತಿ ನಡೆಯಲಿದೆ. ಆದ್ದರಿಂದ ಎಲ್ಲರು ಗಣತಿದಾರರಿಗೆ ಸ್ಪಷ್ಟವಾದ ಮಾಹಿತಿ ನೀಡಿ ಎಂದು ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮನವಿ ಮಾಡಿದರು.

English summary
District Commissioner Abhiram G Shankar has released the Mobile App for collecting data through the 2020, 7th Financial Census.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X