• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಎಂ ಬದಲಾವಣೆ ಕಟೀಲ್ ಗುಂಪಿನ ಕೆಲಸ ; ಧ್ರುವನಾರಾಯಣ್

By ಮೈಸೂರು ಪ್ರತಿನಿಧಿ
|

ಮೈಸೂರು, ಜನವರಿ 31; " ನಳಿನ್ ಕುಮಾರ್ ಕಟೀಲ್ ಒಬ್ಬ ಪೆದ್ದನ ರೀತಿ ಮಾತನಾಡುತ್ತಾರೆ. ಒಬ್ಬ ರಾಜ್ಯಾಧ್ಯಕ್ಷನಾಗಿ ಗಂಭೀರತೆ ಇಲ್ಲದೆ ಹೇಳಿಕೆ ಕೊಡುತ್ತಾರೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ್ ಹೇಳಿದರು.

ಭಾನುವಾರ ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಧ್ರುವನಾರಾಯಣ್, "ಬಿಜೆಪಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರದ್ದೇ ಒಂದು ಗುಂಪಿದೆ. ಸಿಎಂ ಬದಲಾವಣೆ, ಯತ್ನಾಳ್ ಹೇಳಿಕೆಗಳೆಲ್ಲಾ ಆ ಗುಂಪಿನಂದಲೇ ಬರುವುದು" ಎಂದರು.

ನಾಯಕತ್ವ ಬದಲಾವಣೆ ಹೊಸ ಗಡುವು ಕೊಟ್ಟ ಸಿದ್ದರಾಮಯ್ಯ! ನಾಯಕತ್ವ ಬದಲಾವಣೆ ಹೊಸ ಗಡುವು ಕೊಟ್ಟ ಸಿದ್ದರಾಮಯ್ಯ!

"ಯತ್ನಾಳ್ ಆ ರೀತಿ ಹೇಳಿಕೆ ನೀಡಿದರೂ ಅವರ ಮೇಲೆ ಕ್ರಮ ಯಾಕೆ ಕೈಗೊಳ್ಳುವುದಿಲ್ಲ. ಬಿಜೆಪಿಯಲ್ಲೇ ವಿರೋಧ ಪಕ್ಷದವರಂತೆ ಮಾತನಾಡುವ ವ್ಯಕ್ತಿಗಳಿದ್ದಾರೆ. ಅವರೆಲ್ಲರಿಗೂ ನಳಿನ್ ಕುಮಾರ್ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ" ಎಂದು ದೂರಿದರು.

ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟನೆ ಕೊಟ್ಟ ಡಿಸಿಎಂ ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟನೆ ಕೊಟ್ಟ ಡಿಸಿಎಂ

"ಯಡಿಯೂರಪ್ಪ ಬಗ್ಗೆ ಮಾತನಾಡಿದರೂ ಕ್ರಮ ಇಲ್ಲ ಎಂದರೆ ಏನರ್ಥ?. ಇಂತಹ ಕೆಟ್ಟ ಸರ್ಕಾರವನ್ನು ಯಾವತ್ತೂ ನೋಡಿಲ್ಲ. ಸಂಪುಟದಲ್ಲಿ ಸಾಮರಸ್ಯವಿಲ್ಲ. ಮಂತ್ರಿಗಳ ಖಾತೆ ಕ್ಷಣ ಕ್ಷಣಕ್ಕೆ ಬದಲಾಗುತ್ತೆ. ಕೊಟ್ಟ ಖಾತೆಗಳಲ್ಲಿ ಪ್ರಗತಿ ತೋರಿಸಬೇಕು. ಒಳ್ಳೆ ಆಡಳಿತ ತೋರುವಲ್ಲಿ ಸಿಎಂ ವಿಫಲವಾಗಿದ್ದಾರೆ" ಎಂದು ಆರೋಪಿಸಿದರು.

ಸಿದ್ದರಾಮಯ್ಯ ಮಾತನಾಡದಿದ್ದರೆ ಕಳೆದು ಹೋಗ್ತಾರೆ; ಕಟೀಲ್ ಸಿದ್ದರಾಮಯ್ಯ ಮಾತನಾಡದಿದ್ದರೆ ಕಳೆದು ಹೋಗ್ತಾರೆ; ಕಟೀಲ್

"ಒಳ್ಳೆ ಆಡಳಿತ ಕೊಡುವ ಅವಕಾಶವನ್ನು ಬಿಜೆಪಿ ಕಳೆದು ಕೊಂಡಿದೆ. ಜೆಡಿಎಸ್ ಕೂಡ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಿದೆ. ಕಾಂಗ್ರೆಸ್ ನಿಂದ ಒಂದು ಅಂಶವೂ ಜೆಡಿಎಸ್‌ಗೆ ಅನ್ಯಾಯವಾಗಿಲ್ಲ" ಎಂದು ಸ್ಪಷ್ಟಪಡಿಸಿದರು.

"ಶಾಸಕರ ವಿಶ್ವಾಸ ಗಳಿಸಿದ್ದರೆ ಎಚ್. ಡಿ. ಕುಮಾರಸ್ವಾಮಿ ಅವರು 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಿದ್ದರು. ಜೆಡಿಎಸ್ ಹಾಗೂ ಬಿಜೆಪಿ ಇಬ್ಬರು ಸಹ ಗೋಲ್ಡನ್ ಅವಕಾಶ ಕಳೆದುಕೊಂಡಿದ್ದಾರೆ" ಎಂದು ಹೇಳಿದರು.

English summary
Former MP and KPCC working president R. Dhruvanarayana verbally attacked BJP state president Nalin Kumar Kateel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X