ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಸ್ರೋ ಗಗನಯಾತ್ರೆ; ಮೈಸೂರಲ್ಲಿ ಆಹಾರ ತಯಾರಿಕೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 7: ಭಾರತೀಯ ಬಾಹ್ಯಾಕಾಶ ಸಂಸ್ಥೆ ( ಇಸ್ರೋ) ಗಗನಯಾತ್ರೆ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ. ಗಗನಯಾತ್ರಿಗಳಿಗೆ ಮೈಸೂರು ನಗರದಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್)ನಲ್ಲಿ ಆಹಾರ ತಯಾರಾಗುತ್ತಿದೆ.

ಭಾರತದ ಚೊಚ್ಚಲ ಗಗನಯಾತ್ರೆಗೆ ನಾಲ್ವರನ್ನು ಆಯ್ಕೆ ಮಾಡಿ ಅವರಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗಿದೆ. ಒಟ್ಟು 5 ರಿಂದ 7 ದಿನಗಳ ಕಾಲ ಗಗನಯಾತ್ರಿಗಳು ಅಂತರಿಕ್ಷದಲ್ಲಿ ಕಾಲ ಕಳೆಯಲಿದ್ದಾರೆ.

ವೈರಲ್ ವಿಡಿಯೋ ; ಭೂಮಿಗೆ ಬಂದ ಗಗನ ಯಾತ್ರಿಗೆ ಎಂಥ ಸ್ವಾಗತ ವೈರಲ್ ವಿಡಿಯೋ ; ಭೂಮಿಗೆ ಬಂದ ಗಗನ ಯಾತ್ರಿಗೆ ಎಂಥ ಸ್ವಾಗತ

ಈ ಅವಧಿಯಲ್ಲಿ ಬಾಹ್ಯಾಕಾಶಕ್ಕೆ ಹೊಂದಾಣಿಕೆಯಾಗುವಂತಹ ಆಹಾರವನ್ನು ತಯಾರಿಸುವ ಹೊಣೆಗಾರಿಕೆಯನ್ನು ಡಿಎಫ್‌ಆರ್‌ಎಲ್ ಹೊತ್ತುಕೊಂಡಿದೆ. ಈಗಾಗಲೇ ಹಲವು ಆಹಾರ ಪದಾರ್ಥಗಳನ್ನು ತಯಾರು ಮಾಡಿದೆ.

ಇಸ್ರೋ ಖಾಸಗೀಕರಣ ವಿವಾದ: ಅಧ್ಯಕ್ಷ ಕೆ. ಶಿವನ್ ಹೇಳಿದ್ದೇನು?ಇಸ್ರೋ ಖಾಸಗೀಕರಣ ವಿವಾದ: ಅಧ್ಯಕ್ಷ ಕೆ. ಶಿವನ್ ಹೇಳಿದ್ದೇನು?

Mysuru DFRL Preparing Food For Indias First Manned Space Mission

ಗಗನಯಾನಿಗಳಿಗೋಸ್ಕರ ವಿಶೇಷವಾದ ಆಹಾರ ಪದಾರ್ಥಗಳು ಮತ್ತು ಆಹಾರ ಹೀಟರ್‌ಗಳನ್ನು ಸಿದ್ಧಪಡಿಸಲಾಗಿದೆ. ಎಗ್‌ರೋಲ್ಸ್, ವೆಜ್‌ರೋಲ್ಸ್, ಇಡ್ಲಿ, ವೆಜ್ ಪಲಾವ್, ಹೆಸರುಬೇಳೆ ಹಲ್ವಾ, ತೆಂಗಿನ ಕಾಯಿ ಚಟ್ನಿ ಸೇರಿದಂತೆ ಹಲವು ಬಗೆಯ ಆಹಾರಗಳನ್ನು ತಯಾರಿಸಿದೆ.

ಮಂಗಳ ಗ್ರಹದ ಅತಿದೊಡ್ಡ ಚಂದ್ರನಾದ ಫೋಬೊಸ್‌ ಫೋಟೊ ಬಿಡುಗಡೆ ಮಾಡಿದ ಇಸ್ರೋಮಂಗಳ ಗ್ರಹದ ಅತಿದೊಡ್ಡ ಚಂದ್ರನಾದ ಫೋಬೊಸ್‌ ಫೋಟೊ ಬಿಡುಗಡೆ ಮಾಡಿದ ಇಸ್ರೋ

ಶೂನ್ಯ ಗುರುತ್ವವಿರುವ ಬಾಹ್ಯಾಕಾಶದಲ್ಲಿ ದ್ರವ ಪದಾರ್ಥಗಳನ್ನು ಸೇವಿಸಲು ಅನುಕೂಲವಾಗುವಂತೆ ನೀರು ಮತ್ತು ಜ್ಯೂಸ್ ನಂತಹ ಪಾಕೆಟ್‌ಗಳನ್ನು ಸಹ ತಯಾರಿಸಲಾಗಿದೆ. ಇದಕ್ಕಾಗಿ ವಿಶೇಷ ಕಂಟೈನರ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಗಗನಯಾತ್ರಿಗಳ ಜತೆಗೆ ಸುಮಾರು 60 ಕೆಜಿಯಷ್ಟು ಆಹಾರ ಹಾಗೂ 100 ಲೀಟರ್ ನೀರು ರವಾನೆಯಾಗಲಿದೆ.

Mysuru DFRL Preparing Food For Indias First Manned Space Mission

ಡಿಎಫ್‌ಆರ್‌ಎಲ್‌ನಲ್ಲಿ ಒಟ್ಟು 20 ವಿಜ್ಞಾನಿಗಳು ಗಗನಯಾತ್ರಿಗಳಿಗೆ ಆಹಾರ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೇ ಅಮೆರಿಕದ ನಾಸ ಯಶಸ್ವಿಯಾಗಿ ಗಗನಾಯಾತ್ರೆ ಪೂರ್ಣಗೊಳಿಸಿದೆ.

ಅಮೆರಿಕದ ಗಗನಯಾತ್ರಿಗಳಿಗೆ ನೀಡಿದ ಗುಣಮಟ್ಟದಷ್ಟೇ ಆಹಾರ ಹಾಗೂ ಅತ್ಯುತ್ತಮ ದರ್ಜೆಯ ಪ್ಯಾಕಿಂಗ್ ತಯಾರಿಸಲು ಡಿಎಫ್‌ಆರ್‌ಎಲ್ ಶ್ರಮಿಸುತ್ತಿದೆ. ಗಗಯಾತ್ರಿಗಳು 5 ರಿಂದ 7 ದಿನಗಳ ಕಾಲ ಬಾಹ್ಯಾಕಾಶದಲ್ಲಿ ವಾಸ್ತವ್ಯ ಹೂಡಲಿದ್ದು, ಅಧ್ಯಯನಗಳನ್ನು ನಡೆಸಲಿದ್ದಾರೆ.

ಗಗನ ಯಾತ್ರಿಗಳು ಭೂಮಿಗೆ ಹಿಂದಿರುಗುವ ದಿನ ಬಂದಾಗ ಅವರು ಕುಳಿತ ಕ್ಯಾಪ್ಸೂಲ್ ಮುಖ್ಯ ಸೇವಾ ಘಟಕದಿಂದ ಭೂಮಿಗೆ 120 ಕಿ. ಮೀ. ಇರುವಾಗಲೇ ಬೇರ್ಪಡಲಿದೆ. ಆಗ ಪ್ಯಾರಾಚೂಟ್ ಕಟ್ಟಿಕೊಂಡು ಗಗನಯಾತ್ರಿಗಳು ಹೊರಕ್ಕೆ ಜಿಗಿದು ಭೂಮಿಗೆ ಮರಳುತ್ತಾರೆ. ಖಾಲಿ ಕ್ಯಾಪ್ಸೂಲ್ ಗುಜರಾತ್ ಬಳಿ ಅರಬ್ಬಿ ಸಮುದ್ರಕ್ಕೆ ಬೀಳಲಿದೆ.

English summary
Mysuru Defence Food Research Laboratory (DFRL) preparing food for the India's first manned space mission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X