ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡಿ ದರ್ಶನಕ್ಕೆ ಹರಿದು ಬಂತು ಭಕ್ತ ಸಾಗರ

By Ashwath
|
Google Oneindia Kannada News

ಮೈಸೂರು, ಜು.4: ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಸಂಖ್ಯೆ ಜನ ಹರಿದು ಬರುತ್ತಿದ್ದಾರೆ. ಆಷಾಢ ಮಾಸದ ಮೊದಲ ಶುಕ್ರವಾರವನ್ನು ಸ್ವಾಗತಿಸಲು ದೇವಸ್ಥಾನದ ಒಳಗಿನ ಆವರಣವನ್ನು ಹೂವಿನ ಅಲಂಕಾರದ ಜೊತೆಗೆ 1,500 ನೇತಾಡುವ ತೋತಾಪುರಿ ಮಾವಿನ ಹಣ್ಣುಗಳನ್ನು ಸೇರಿಸಿ ಶೃಂಗರಿಸಲಾಗಿತ್ತು.

ಎಂದಿನಂತೆ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತರು ಅಮ್ಮನವರ ದರ್ಶನ ಪಡೆದರು. ದರ್ಶನಕ್ಕೆ ಶುಲ್ಕ ಪಾವತಿಸಿದ ಹಾಗೂ ಗಣ್ಯ ಭಕ್ತರಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಶೇಷವಾಗಿ ಮೊದಲ ಬಾರಿಗೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಸಂಸದ ಪ್ರತಾಪ್‌ ಸಿಂಹ ಮುಂಜಾನೆ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.[ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರಕ್ಕೆ ಸಕಲ ಸಿದ್ಧತೆ]

mp pratap simha
ಜೆಡಿಎಸ್‌ ಮುಖಂಡ ಎಚ್‌ಡಿ ರೇವಣ್ಣ ಮತ್ತು ಪತ್ನಿ ಭವಾನಿ, ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ, ವಿಧಾನಪರಿಷತ್‌ ಸದಸ್ಯ ಅಶ್ವತ್ಥನಾರಾಯಣ, ನಗರ ಪೊಲೀಸ್‌ ಕಮೀಷನರ್‌ ಡಾ. ಎಂ.ಎ ಸಲೀಂ ಭೇಟಿ ನೀಡಿದ್ದರು.[ಮೈಸೂರು : ಬೆಟ್ಟದ ತಾಯಿ ನೇರ ದರ್ಶನಕ್ಕೆ ವಿಶೇಷ ಟಿಕೆಟ್]

ಜುಲೈ 11, ಜುಲೈ 18 ಹಾಗೂ ಜುಲೈ 25 ರಂದು ಆಷಾಢ ಶುಕ್ರವಾರಗಳಿದ್ದು ಮೂರನೇ ಶುಕ್ರವಾರ ಚಾಮುಂಡಿ ದೇವಿ ವರ್ಧಂತಿಯೂ ಇರುವುದರಿಂದ ಹೆಚ್ಚಿನ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ನಿರೀಕ್ಷೆ ಇದೆ.

English summary
The precincts of Chamundi Hill atop which is the temple of Sri Chamundeshwari, the presiding deity of Mysore, was steeped in divinity today as thousands of devotees, including women and children thronged the venue and offered pujas on the occasion of this year’s first Ashada Friday (the remaining three Ashada Fridays fall on July 11, 18 and 25).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X