ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ 2019; ಕಾರ್ಯಕ್ರಮಗಳ ಸಂಪೂರ್ಣ ವಿವರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 8: ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ಮೆರವಣಿಗೆಗಾಗಿ ಸಿಂಗಾರಗೊಂಡಿರುವ ಮೈಸೂರಿನಲ್ಲಿ ಜನತೆಯ ಸಂಭ್ರಮ ಸಡಗರ ಮುಗಿಲು ಮುಟ್ಟಿದೆ. ಜಂಬೂಸವಾರಿಯ ವೈಭವವನ್ನು ಕಣ್ತುಂಬಿಕೊಳ್ಳಲು, ಚಾಮುಂಡೇಶ್ವರಿ ದೇವಿಯ ಕಣ್ತುಂಬಿಕೊಂಡು ಭಕ್ತಿ ಭಾವದಲ್ಲಿ ಮಿಂದೇಳಲು ಜನ ಕಾತರದಿಂದ ಕಾದಿದ್ದಾರೆ.

* ಬೆಳಿಗ್ಗೆ 10 ಗಂಟೆಗೆ ವಜ್ರ ಮುಷ್ಟಿ ಕಾಳಗ ಆರಂಭಗೊಂಡಿದ್ದು ಇದರಲ್ಲಿ ಜಟ್ಟಿಯೊಬ್ಬನ ತಲೆಯಿಂದ ರಕ್ತ ಚಿಮ್ಮಿತೆಂದರೆ ದಸರಾಗೆ ಚಾಲನೆ ದೊರೆತಂತಾಗಿದೆ.

ಐತಿಹಾಸಿಕ ಮೈಸೂರು ದಸರಾ ನಡೆದು ಬಂದ ಹಾದಿಐತಿಹಾಸಿಕ ಮೈಸೂರು ದಸರಾ ನಡೆದು ಬಂದ ಹಾದಿ

* ಜಂಬೂ ಸವಾರಿಗೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸಿಎಂ ಯಡಿಯೂರಪ್ಪ ಅವರು ಮಧ್ಯಾಹ್ನ 2.30ರ ಸುಮಾರಿಗೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ನಂದಿ ಧ್ವಜಕ್ಕೆ 9 ದಿನಗಳಿಂದ ಪೂಜೆ ಮಾಡುವ ಮೂಲಕ ಇಂದಿನ ನಂದಿ ಧ್ವಜ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹುಡಿಗಾಲದ ಮಹದೇವಪ್ಪ ಹಾಗೂ ಅವರ ಕುಟುಂಬ ಹಲವು ವರ್ಷಗಳಿಂದ ನಂದಿ ಧ್ವಜಕ್ಕೆ ಪೂಜೆ ಮಾಡಿಕೊಂಡು ಬಂದಿದೆ. ದಸರಾ ಮೆರವಣಿಗೆಯ ವೇಳೆ ನಂದಿ ಧ್ವಜವನ್ನು ತರಲಾಗುತ್ತದೆ. ಈಗಾಗಲೇ ಮಹದೇವಪ್ಪ ಅವರ ಮನೆಯಲ್ಲಿ ನಂದಿ ಧ್ವಜಕ್ಕೆ ಪೂಜೆ ಮಾಡಿ ಸಿದ್ಧತೆಗೊಳಿಸಲಾಗಿದೆ.

Details Of Mysuru Dasara Celebration In Mysuru

* ಬಳಿಕ ವಿಜಯದಶಮಿ ಮೆರವಣಿಗೆ ಆರಂಭವಾಗಲಿದೆ. ಅಂಬಾರಿಯಲ್ಲಿ ಪ್ರತಿಷ್ಠಾಪನೆಯಾಗುವ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಂಜೆ 4.31ರಿಂದ 4.57ರ ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುಷ್ಪಾರ್ಚನೆ ಮಾಡಲಿದ್ದಾರೆ.

* ನಂತರ ಮೈಸೂರಿನ ರಾಜಮಾರ್ಗದಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಅರ್ಜುನ ಸಾಗಲಿದ್ದಾನೆ. ಅರ್ಜುನನ ಹಿಂದೆ ಗಜ ಪಡೆ ಸಾಗಲಿದೆ. ರಾಜ್ಯದ 30 ಜಿಲ್ಲೆಗಳ ಸ್ತಬ್ದಚಿತ್ರಗಳ ಜೊತೆಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 9 ಸ್ತಬ್ದಚಿತ್ರಗಳು ಸೇರಿದಂತೆ ಒಟ್ಟು 39 ಸ್ತಬ್ದ ಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಲಿವೆ.

*ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸುವ ಜನಪದ ಕಲಾವಿದರಿಂದ ಮೆರವಣಿಗೆಗೆ ಮತ್ತಷ್ಟು ರಂಗು ಸಿಗಲಿದೆ. ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿಯಲ್ಲ... ಸಾಂಸ್ಕೃತಿಕ ಸಂಗಮಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿಯಲ್ಲ... ಸಾಂಸ್ಕೃತಿಕ ಸಂಗಮ

* ಜಂಬೂ ಸವಾರಿ ಮೆರವಣಿಗೆ ಅಂತ್ಯಗೊಂಡ ನಂತರ ರಾತ್ರಿ 7 ಗಂಟೆಗೆ ಬನ್ನಿಮಂಟಪದ ಮೈದಾನದಲ್ಲಿ ದಸರಾ ಪಂಜಿನ ಕವಾಯತು ನಡೆಯಲಿದ್ದು ರಾಜ್ಯಪಾಲ ವಜುಭಾಯಿ ವಾಲಾ ಗೌರವ ವಂದನೆ ಸ್ವೀಕಾರ ಮಾಡಲಿದ್ದಾರೆ.
* ಅರಮನೆಯ ಉತ್ತರ ದಿಕ್ಕಿನಲ್ಲಿರುವ ಭುವನೇಶ್ವರಿ ಅಮ್ಮನವರ ದೇಗುಲದ ಆವರಣಕ್ಕೆ ಹಾಗೂ ಅರಮನೆಗೆ ಯದುವೀರ್ ಒಡೆಯರ್ ವಿಜಯಯಾತ್ರೆ ಹೊರಡಲಿದ್ದಾರೆ.

* ಬಳಿಕ ಬನ್ನಿ ಮರಕ್ಕೆ ಸಂಪ್ರದಾಯಬದ್ಧವಾಗಿ ವಿಶೇಷ ಪೂಜೆ ಸಲ್ಲಿಸಿ ಬನ್ನಿ ಮಹಾಕಾಳಿಯಮ್ಮನವರ ಆಶೀರ್ವಾದ ಪಡೆದುಕೊಳ್ಳಲಿದ್ದಾರೆ. ಈ ಮೂಲಕ ರಾಜಮನೆತನದ ವಿಜಯದಶಮಿ ಪೂಜೆ ಕೈಂಕರ್ಯಗಳಿಗೆ ಅಂತಿಮ ತೆರೆ ಬೀಳಲಿದೆ.

* ರಾತ್ರಿ 7 ಗಂಟೆಗೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತಿನೊಂದಿಗೆ 10 ದಿನಗಳ ಉತ್ಸವಕ್ಕೆ ತೆರೆ ಬೀಳಲಿದೆ.

English summary
People excited to see the celebration of vijayadashami and jambu savari in Mysuru. Here is a full list of programmes of vijayadashami in mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X