ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಫೆ. 9, 10 ರಂದು ದೇಸಿ ಅಕ್ಕಿ ಮೇಳ ವಸ್ತು ಪ್ರದರ್ಶನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 8: ದೇಸಿ ಅಕ್ಕಿ ಮೇಳ ವಸ್ತು ಪ್ರದರ್ಶನ ಹಾಗೂ ಕಾರ್ಯಾಗಾರ ಫೆ. 9 ಮತ್ತು 10 ರಂದು ಮೈಸೂರಿನ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ನಡೆಯಲಿದೆ.

ಕೃಷಿ ಬೆಳೆ ಆಯೋಗ, ಕೃಷಿ ಇಲಾಖೆ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಸಹಜ ಸಮೃದ್ಧ, ಭತ್ತ ಉಳಿಸಿ ಆಂದೋಲನ ಹಾಗೂ ಕೆಲ ಸಾವಯವ ಸಂಘಗಳ ಒಕ್ಕೂಟ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಫೆ.9ರಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಮೇಳಕ್ಕೆ ಚಾಲನೆ ನೀಡುವರು.

ಸಾವಯವ ಮತ್ತು ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಳ: ಕುಮಾರಸ್ವಾಮಿಸಾವಯವ ಮತ್ತು ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಳ: ಕುಮಾರಸ್ವಾಮಿ

ವಸ್ತುಪ್ರದರ್ಶನ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ನೆರವೇರಿಸುವರು. ಪ್ರವಾಸೋದ್ಯಮ ಹಾಗೂ ರೇಷ್ಮೆ ಖಾತೆ ಸಚಿವ ಸಾರಾ ಮಹೇಶ್ ದೇಸಿ ಅಕ್ಕಿ ಪುಸ್ತಕ ಬಿಡುಗಡೆಗೊಳಿಸುವರು.

Desi Akki Mela exhibition and workshop will be held at Mysuru

ಕಾರ್ಯಕ್ರಮದಲ್ಲಿ ಶಾಸಕ ರಾಮದಾಸ್ , ತನ್ವೀರ್ ಸೇಠ್ , ಸಂಸದ ಧ್ರುವನಾರಾಯಣ್, ಪ್ರತಾಪ್ ಸಿಂಹ, ಶಿವರಾಮೇಗೌಡ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ರೈತರ ಸ್ನೇಹಿ : ಸೋಲಾರ್ ಕೀಟನಾಶಕ ಯಂತ್ರರೈತರ ಸ್ನೇಹಿ : ಸೋಲಾರ್ ಕೀಟನಾಶಕ ಯಂತ್ರ

ಕೃಷಿ ಇಲಾಖೆ, ಜಂಟಿ ಕೃಷಿ ನಿರ್ದೇಶಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ ಅವರ ಅಧ್ಯಕ್ಷತೆಯಲ್ಲಿ ರಾಜಮುಡಿ ಮತ್ತು ಇತರೆ ಸಾಂಪ್ರದಾಯಿಕ ದೇಸಿ ಭತ್ತ ದಾಳಿಗಳ ಭೌಗೋಳಿಕ ಸ್ಥಿತಿ, ಸದೃಢ ಮಾರುಕಟ್ಟೆ ಮತ್ತು ಲಾಭದಾಯಕಧಾರಣೆ ಒದಗಿಸಲು ತಾಂತ್ರಿಕ ಕಾರ್ಯಾಗಾರ ನಡೆಯಲಿದೆ.

 ಚಿಕ್ಕಮಗಳೂರಿನಲ್ಲಿ ಮಂಗಳಮುಖಿಯರಿಂದ ಕೃಷಿ, ಹೈನುಗಾರಿಕೆ ಚಿಕ್ಕಮಗಳೂರಿನಲ್ಲಿ ಮಂಗಳಮುಖಿಯರಿಂದ ಕೃಷಿ, ಹೈನುಗಾರಿಕೆ

ಹಾಸನ ಕೃಷಿ ಕಾಲೇಜಿನ ಡೀನ್ ದೇವಕುಮಾರ್, ಮಂಡ್ಯ ವಿಸಿ ಫಾರಂನ ಪ್ರಾಧ್ಯಾಪಕ ರಾಜಣ್ಣ, ಜೈವಿಕ ಕೃಷಿಕ ಸೊಸೈಟಿ ಅಧ್ಯಕ್ಷ ರಾಮಕೃಷ್ಣಪ್ಪ ಸೇರಿದಂತೆ ಮತ್ತಿತರರು ವಿವಿಧ ತಾಂತ್ರಿಕ ವಿಷಯಗಳನ್ನು ಮಂಡಿಸಲಿದ್ದಾರೆ. ಇನ್ನು ಮೇಳದ ಅಂಗವಾಗಿ ಸಾಂಪ್ರದಾಯಿಕ ದೇಸಿ ಅಕ್ಕಿ ಅಡುಗೆ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿದೆ.

English summary
Desi Akki Mela exhibition and workshop will be held on February 9th and 10th at the premises of Joint Director Agriculture Office in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X