ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುಜಿಸಿ ಮಾನ್ಯತೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಉಪವಾಸ

By Kiran B Hegde
|
Google Oneindia Kannada News

ಮೈಸೂರು, ಜ. 27: ನಗರದ ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ (ಆರ್‌ಐಇ) ಮೈಸೂರು ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ಕೋರ್ಸ್‌ಗೆ ಯುಜಿಸಿ ಮಾನ್ಯತೆ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ವಿದ್ಯಾರ್ಥಿಗಳು ಕಳೆದ ಗುರುವಾರದಿಂದ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಆದರೆ, ಬೇಡಿಕೆ ಈಡೇರಿಸುವ ಕುರಿತು ಯಾವುದೇ ಧನಾತ್ಮಕ ಪ್ರತಿಕ್ರಿಯೆ ಸಿಗದ ಕಾರಣ ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಿದರು. [ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸ್ಕಾಲರ್ ಶಿಪ್]

ಯುಜಿಸಿ ಮಾನ್ಯತೆಗೆ ವಿಳಂಬ : ಆರು ವರ್ಷಗಳ ಎಂಎಸ್‌ಸಿ, ಎಂಇಡಿ ಹಾಗೂ ನಾಲ್ಕು ವರ್ಷಗಳ ಬಿಎಸ್‌ಸಿ ಬಿಇಡಿ ಮತ್ತು ಬಿಎ ಬಿಇಡಿ ಕೋರ್ಸ್‌ಗಳಿಗೆ ಯುಜಿಸಿ ಮಾನ್ಯತೆ ದೊರಕಿಸುವಲ್ಲಿ ಆರ್‌ಇಐ ಆಡಳಿತಾಧಿಕಾರಿಗಳು ವಿಳಂಭ ಧೋರಣೆ ಅನುಸರಿಸುತ್ತಿದ್ದಾರೆ. ಆದ್ದರಿಂದ ಇವರೊಂದಿಗೆ ವಿದ್ಯಾರ್ಥಿಗಳು ತೀವ್ರ ಹೋರಾಟಕ್ಕಿಳಿದಿದ್ದಾರೆ.

rie

ಮೈಸೂರಿನ ಆರ್‌ಐಇನಲ್ಲಿ ಸುಮಾರು 700ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮೇಲೆ ಹೇಳಿದ ಕೋರ್ಸ್‌ಗಳನ್ನು ಓದುತ್ತಿದ್ದಾರೆ. ಆರು ವರ್ಷಗಳ ಎಸ್ಎಸ್ಸಿ ಎಂಇಡಿ ಕೋರ್ಸ್ ಏಳು ವರ್ಷಗಳ ಹಿಂದೆಯೇ ಆರಂಭವಾಗಿದೆ. ಮೊದಲು ಪ್ರವೇಶ ಪಡೆದ ತಂಡ ಈಗಾಗಲೇ ಕಾಲೇಜಿನಿಂದ ಹೊರಹೋಗಿದೆ. ಆದರೆ, ಯುಜಿಸಿ ಮಾನ್ಯತೆ ಗಳಿಸಲು ಯಾವುದೇ ಪ್ರಯತ್ನ ನಡೆಸಿಲ್ಲ. [ಆಂಗ್ಲ ಜ್ಞಾನ ಹೆಚ್ಚಿಸುತ್ತೆ ಸ್ಪೆಲ್ಲಿಂಗ್ ಬೀ]

700ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿ

ಯುಜಿಸಿ ಮಾನ್ಯತೆ ಇಲ್ಲದ ಕಾರಣ ಈಗ 700ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಈಗ ವಿದ್ಯಾರ್ಥಿಗಳು ಪಿಎಚ್ ಡಿ ಕೋರ್ಸ್‌ಗೆ ಪ್ರವೇಶ ಪಡೆಯುವಂತಿಲ್ಲ, ಸರ್ಕಾರಿ ಕೆಲಸಕ್ಕೂ ಸೇರುವಂತಿಲ್ಲ. [ಪಾಕಿಸ್ತಾನಿ ಶಿಕ್ಷಕರಿಗೆ ಪೆನ್ ಜೊತೆ ಗನ್]

ಜ. 6ರಂದೇ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು. ಆಗ ಎನ್‌ಸಿಇಆರ್‌ಟಿ ಜಂಟಿ ನಿರ್ದೇಶಕರು ಯುಜಿಸಿ ಮಾನ್ಯತೆ ದೊರಕಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದರು. ಆದರೆ, ನಂತರ ಯಾವುದೇ ಪ್ರಯತ್ನ ನಡೆಸಿರಲಿಲ್ಲ. ಆದ್ದರಿಂದ ಜ. 20ರಂದು ಮತ್ತೆ ಪ್ರತಿಭಟನೆ ಆರಂಭಿಸಿದರು. ಇದಕ್ಕೂ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

English summary
Students of Regional Institute of Education (RIE) Mysuru have launched a hunger strike on Tuesday, demanding University Grants Commission (UGC) recognition for their courses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X