• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಂಜಾನ್: ಮೈಸೂರಿನಲ್ಲಿ ಬಿಸಿ ಬಿಸಿ ಸಮೋಸ, ಖರ್ಜೂರಕ್ಕೆ ಭಾರೀ ಬೇಡಿಕೆ

|

ಮೈಸೂರು, ಮೇ 20: ರಂಜಾನ್‌ ಉಪವಾಸ ಎಂದರೆ ಮುಸಲ್ಮಾನರಿಗೆ ಹಬ್ಬ. ಅದರೊಟ್ಟಿಗೆ ರಂಜಾನ್ ಸ್ಪೆಷಲ್ ಎಂದೇ ಕರೆಯಲ್ಪಡುವ ಖರ್ಜೂರ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ. ಹಾಗಾಗಿ ಗ್ರಾಹಕರ ಮನ ತಣಿಸಲು ನಗರದಲ್ಲಿ ಬಗೆ ಬಗೆಯ ಖರ್ಜೂರ, ಸಮೋಸ, ಹಣ್ಣುಗಳ ಮಾರಾಟ ಭರ್ಜರಿಯಾಗಿಯೇ ನಡೆಯುತ್ತಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮೈಸೂರಲ್ಲಿ ಹೆಚ್ಚಾಗಿ ಮೀನಾ ಬಜಾರ್‌, ಮಂಡಿ ಮೊಹಲ್ಲಾ, ದೇವರಾಜ ಅರಸು ರಸ್ತೆ ಹಾಗೂ ಸಂತೆಪೇಟೆ ಬೀದಿಗಳಲ್ಲಿ ಖರ್ಜೂರದ ಅಂಗಡಿಗಳು ಕಂಡು ಬರುತ್ತವೆ. ಕೆ.ಆರ್ ಮಾರುಕಟ್ಟೆ, ಮಸೀದಿ, ಮಾಲ್‌ ಹಾಗೂ ಸೂಪರ್‌ ಮಾರ್ಕೆಟ್‌ಗಳಿಗೆ ಸೌದಿ ಅರೇಬಿಯಾ, ಇರಾನ್‌, ಇರಾಕ್‌, ಟ್ಯುನೇಶಿಯಾ, ಕೀನ್ಯಾ ಸೇರಿದಂತೆ ವಿವಿಧ ದೇಶಗಳ ಬಗೆಬಗೆಯ ಖರ್ಜೂರಗಳು ಲಗ್ಗೆ ಇಟ್ಟಿದ್ದು, ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ.

ಗುಣಮಟ್ಟ ಹಾಗೂ ಖರ್ಜೂರ ತಳಿಯ ಮೇಲೆ ಕೆ.ಜಿ.ಗೆ 40 ರಿಂದ 2,000 ವರೆಗೆ ಮಾರಾಟವಾಗುತ್ತಿದ್ದು, ವಿದೇಶದ ಖರ್ಜೂರಗೆ ಬೇಡಿಕೆ ಹೆಚ್ಚಿದೆ ಎನ್ನಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಖರ್ಜೂರ ವ್ಯಾಪಾರ ಉತ್ತಮವಾಗಿ ನಡೆಯುತ್ತಿದೆ.

ಮೈಸೂರಿನಲ್ಲಿ ರಂಜಾನ್‌ ಮಾಸಾಚರಣೆ ಆರಂಭ;ತಯಾರಿ ಹೇಗಿದೆ ಗೊತ್ತಾ?

ಪ್ರತಿ ದಿನ ಏನಿಲ್ಲವೆಂದರೂ 15ರಿಂದ 20ಕೆ.ಜಿ. ಮಾರಾಟ ಆಗುತ್ತದೆ. ರಂಜಾನ್‌ ಸಂದರ್ಭದಲ್ಲಿ ವಿಶೇಷವಾದ ಖರ್ಜೂರ ಮಾರುಕಟ್ಟೆಗೆ ಬರುವುದರಿಂದ ಕೇವಲ ಮುಸ್ಲಿಮರಲ್ಲದೆ, ಇತರೆ ಧರ್ಮದವರು ಸಾಕಷ್ಟು ಪ್ರಮಾಣದಲ್ಲಿ ಖರೀದಿಸುತ್ತಾರೆ. ಇದರಿಂದ ಬರ ಇದ್ದರೂ ವ್ಯಾಪಾರಕ್ಕೆ ಹೊಡೆತ ಬಿದ್ದಿಲ್ಲ ಎಂದು ಖರ್ಜೂರ ವ್ಯಾಪಾರಿ ಅಬ್ದುಲ್ಲಾ.

"ಅಜ್ವಾ ಖರ್ಜೂರ ಡೇಟಕ್ರಾನ್‌, ಓರಿಜಿನಲ್‌ ಜರ್ಗಾರ್ಜ್‌ದೇಶ್‌, ಇಫೌಡ್‌, ತೋಯಿನ್‌, ಪ್ರೀಮಿಯಂ ಇರಾನಿ, ಮಬ್ರೂಮ್‌ ಸೇರಿದಂತೆ 15ಕ್ಕೂ ಅಧಿಕ ತಳಿಯ ಖರ್ಜೂರನ್ನು ಮಾರಾಟ ಮಾಡುತ್ತಿದ್ದೇವೆ. ಆರ್ಥಿಕವಾಗಿ ಸದೃಢ ಇರುವ ಜನರು ಅಜ್ವಾ ಖರೀದಿಸಿದರೆ, ಮಧ್ಯಮ ವರ್ಗದ ಜನರು ಇಫೌಡ್‌, ಪ್ರೀಮಿಯಂ ಇರಾನಿ, ಮಬ್ರೂಮ್‌ ಹೆಚ್ಚು ಖರೀದಿ ಮಾಡುತ್ತಾರೆ" ಎಂದು ಅವರು ಹೇಳಿದರು.

ಖರ್ಜೂರ ಸೇವಿಸಿದ ನಂತರವೇ ಊಟ

ಖರ್ಜೂರ ಸೇವಿಸಿದ ನಂತರವೇ ಊಟ

"ಒಂದು ತಿಂಗಳು ಉಪವಾಸ ಇರುತ್ತೇವೆ. ಈ ವೇಳೆ ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್‌ ಬರುವ ಸಾಧ್ಯತೆ ಇದ್ದು, ಖರ್ಜೂರ ತಿನ್ನುವುದರಿಂದ ಹೊಟ್ಟೆ ಒಳಗೆ ರಕ್ಷಣೆ ಸಿಗುತ್ತದೆ. ಜತೆಗೆ ಮಹಮದೀಯರ ಆರ್ಶೀವಾದವಿರುತ್ತದೆ ಎಂಬುದು ನಮ್ಮ ನಂಬಿಕೆ. ಹೀಗಾಗಿ ಮುಸ್ಲಿಮರು ಉಪವಾಸ ಸಂದರ್ಭದಲ್ಲಿ ಖರ್ಜೂರ ಸೇವಿಸಿದ ನಂತರವೇ ಊಟ ಮಾಡುತ್ತಾರೆ. ಧಾರಣೆ ಎಷ್ಟೇ ಇದ್ದರೂ ಪ್ರತಿಯೊಬ್ಬರು ತಮಗೆ ಇಷ್ಟವಾದ ಖರ್ಜೂರನ್ನು ಸ್ವಲ್ಪವಾದರೂ ಖರೀದಿಸಿ ತಿನ್ನುತ್ತೇವೆ" ಎನ್ನುತ್ತಾರೆ ಗ್ರಾಹಕರು.

ಕರಾವಳಿಯಲ್ಲಿ ಸೋಮವಾರದಿಂದ ರಂಜಾನ್ ಉಪವಾಸ:ದಕ್ಷಿಣ ಕನ್ನಡ ಖಾಝಿ ಘೋಷಣೆ

ಆಹಾರದಲ್ಲಿ ಸಮೋಸಾಗೆ ಅಗ್ರಸ್ಥಾನ

ಆಹಾರದಲ್ಲಿ ಸಮೋಸಾಗೆ ಅಗ್ರಸ್ಥಾನ

ರಂಜಾನ್ ಮಾಸಾಚರಣೆ ಆರಂಭವಾಗಿದ್ದೇ ನಗರದ ವಿವಿಧ ಬಡಾವಣೆಗಳಲ್ಲಿ ಸಂಜೆಯಾದರೆ ಸಾಕು ಸಮೋಸ ಸೇರಿದಂತೆ ತರಹೇವಾರಿ ಖಾದ್ಯಗಳ ಘಮಲು ಮನೆ ಮಾಡುತ್ತಿದೆ. ದಿನವಿಡೀ ಉಪವಾಸ ವ್ರತ ನಿರತರು ಸಂಜೆ ಮಸೀದಿಯಲ್ಲಿ ಪ್ರಾರ್ಥನೆಯ ಬಳಿಕ ಸೇವಿಸುವ ಆಹಾರದಲ್ಲಿ ಸಮೋಸಗೆ ಅಗ್ರಸ್ಥಾನ. ಹೀಗಾಗಿ ರಂಜಾನ್ ಸಂದರ್ಭದಲ್ಲಿ ಪ್ರತಿ ಮಸೀದಿ ಬಳಿ ಹಣ್ಣು, ಸಮೋಸ, ಕಚೋರಿ ಸೇರಿದಂತೆ ಹಲವು ಅಂಗಡಿಗಳ ಸಂತೆ ಮೈದಳೆಯಲು ಆರಂಭಿಸಿದೆ. ಸೂರ್ಯಾಸ್ತದ ನಂತರ ಈ ಅಂಗಡಿಗಳಲ್ಲಿ ಸಮೋಸ ಜತೆಗೆ ಪಪ್ಪಾಯಿ, ಕಲ್ಲಂಗಡಿ, ಬಾಳೆ, ಖರ್ಜೂರ, ಹಾಲು, ಜ್ಯೂಸ್‌ ಆಸ್ವಾದನೆ ಕಾರುಬಾರು ಜೋರಾಗಿ ಕಂಡು ಬರುತ್ತಿದೆ.

ಮುಸ್ಲಿಂ ಸಂಘಟನೆಗಳ ಮನವಿ ತಿರಸ್ಕರಿಸಿದ ಚುನಾವಣಾ ಆಯೋಗ

10 ಸಾವಿರಕ್ಕೂ ಅಧಿಕ ಸಮೋಸ ಮಾರಾಟ

10 ಸಾವಿರಕ್ಕೂ ಅಧಿಕ ಸಮೋಸ ಮಾರಾಟ

ನಿತ್ಯ ಸಂಜೆ ನಗರದ ಮಸೀದಿಗಳ ಮುಂದೆ ಬಿಸಿ ಬಿಸಿಯಾದ, ಬಗೆ ಬಗೆ ಸಮೋಸಾಗಳ ಪರಿಮಳ ದಾರಿಹೋಕರ ರುಚಿ ಮೊಗ್ಗುಗಳನ್ನು ಅರಳಿಸುತ್ತಿದೆ. ಇದರ ಜತೆಗೆ ಕೆಲವೆಡೆ ಬಟಾಟೆ ವಡಾ, ಪಾವ್‌ಬಾಜಿ, ಬೊಂಡ, ಮೆಣಸಿನಕಾಯಿ ಬಜ್ಜಿ ಮಾರಾಟ ತಿಂಡಿಪ್ರಿಯರ ಬಾಯಲ್ಲಿ ನೀರೂರಿಸುತ್ತಿವೆ. ನಗರದಲ್ಲಿ ಈರುಳ್ಳಿ, ಮೊಟ್ಟೆ, ಚಿಕನ್‌ ಹೀಗೆ ವಿವಿಧ ಸ್ವಾದಗಳಲ್ಲಿ ಸಮೋಸ ಗಳು ದೊರೆಯುತ್ತವೆ. ಚಿಕನ್ ಸಮೋಸಾ 12, ಮೊಟ್ಟೆ ಸಮೋಸ 10 ಮತ್ತು ಈರುಳ್ಳಿ ಸಮೋಸ 7 ಮಾರಾಟವಾಗುತ್ತಿವೆ. "ಖರ್ಜೂರ ತಿಂದು ಇಡೀ ದಿನ ಚೈತನ್ಯದಿಂದ ಇರುವ ಮುಸ್ಲಿಮರು, ಸಂಜೆಯಾದೊಡನೆ ಇಫ್ತಾರ್‌ಗೆ ಬಿಸಿ ಬಿಸಿ ಸಮೋಸಾ ಖರೀದಿಸಿ ಮನೆಗೆ ಒಯ್ಯುವರು. ರಂಜಾನ್ ಮಾಸಾಚರಣೆಯ ಸಂದರ್ಭದಲ್ಲಿ ನಗರದಲ್ಲಿ ನಿತ್ಯ 10 ಸಾವಿರಕ್ಕೂ ಅಧಿಕ ಸಮೋಸ ಮಾರಾಟವಾಗುತ್ತದೆ. ಇದಲ್ಲದೇ ಹಳ್ಳಿಗಳಲ್ಲಿ ಕೂಡ ವ್ಯಾಪಾರ ಜೋರಾಗಿದೆ" ಎನ್ನುತ್ತಾರೆ ವ್ಯಾಪಾರಿಗಳು.

ಎಲ್ಲಾ ಸಮುದಾಯದ ಜನರಿಗೂ ಇಷ್ಟ

ಎಲ್ಲಾ ಸಮುದಾಯದ ಜನರಿಗೂ ಇಷ್ಟ

ರಂಜಾನ್ ಆರಂಭವಾಗುತ್ತಿದ್ದಂತೆ ಸಮೋಸಗೆ ಬೇಡಿಕೆ ಶುರುವಾಗುತ್ತದೆ. ದಿನದ ಹದಿನಾಲ್ಕುವರೆ ಗಂಟೆ ಉಪವಾಸವಿರುವ ಕಾರಣ ದೇಹದ ತೂಕ ಇಳಿಯುತ್ತದೆ ಎನ್ನುವುದು ವ್ರತಾಚರಣೆ ಮಾಡುವವರ ನಂಬಿಕೆ. ಅದಕ್ಕಾಗಿ ಈ ಸಂದರ್ಭದಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಸಮತೋಲನ ಆಹಾರ ಸೇವಿಸುವುದು ಮುಖ್ಯ. ಮುಸ್ಲಿಮರು ಹೆಚ್ಚು ಸಮೋಸ ಸವಿಯಲು ಇದೂ ಒಂದು ಕಾರಣ ಎನ್ನುತ್ತಾರೆ ಜೂನಿಯರ್‌ ಕಾಲೇಜು ಮುಂಭಾಗ ಸಮೋಸ ಮಾರುವ ಖಾದರ್. ಮುಸ್ಲಿಮರಷ್ಟೇ ಅಲ್ಲದೆ ಎಲ್ಲಾ ಸಮುದಾಯದ ಜನರು ಸಮೋಸ ರುಚಿಗೆ ಮಾರು ಹೋಗಿದ್ದಾರೆ. ರಂಜಾನ್‌ ಸಂದರ್ಭದಲ್ಲಿ ಮಧ್ಯಾಹ್ನದವರೆಗೆ 200ರಿಂದ 300 ಸಮೋಸ ಮಾರಾಟವಾದರೆ, ನಂತರ ಖರೀದಿಗೆ ಸಾಲು ನಿಂತಿರುತ್ತಾರೆ. ಸಮೋಸಾ ವ್ಯಾಪಾರಿ ಅಪ್ಸರ್.

English summary
Day by day demand going to increase to Dates and Samosa during ramzan festival at Mysuru.Variety of Dates and samosa are sold by vendors on masjid prayer time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more