• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆ: ಇದು ಆಘಾತಕಾರಿ ಎಂದ ವೈದ್ಯರು

|
Google Oneindia Kannada News

ಮೈಸೂರು, ಜೂನ್ 22: ಮೈಸೂರು ಜಿಲ್ಲೆಯಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿರುವ ಕುರಿತು ಮೈಸೂರು ಮೆಡಿಕಲ್ ಆಸ್ಪತ್ರೆ ಡೀನ್ ಡಾ. ನಂಜರಾಜ್ ಮಾಹಿತಿ ನೀಡಿದ್ದಾರೆ.

ಖಾಸಗಿ ಸುದ್ದಿ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಡಾ. ನಂಜರಾಜ್, "ಇದು ಅತ್ಯಂತ ನಟೋರಿಯಸ್ ಕಿಲ್ಲರ್ ವೈರಸ್, ನೇರವಾಗಿ ಹೃದಯಕ್ಕೆ ಅಟ್ಯಾಕ್ ಮಾಡಲಿದೆ,'' ಎಂದು ಹೇಳಿದ್ದಾರೆ.

ಮೂರನೇ ಅಲೆಗೆ ಪ್ರಚೋದನೆಯೇ ಮೂರನೇ ಅಲೆಗೆ ಪ್ರಚೋದನೆಯೇ "ಡೆಲ್ಟಾ ಪ್ಲಸ್"? ಇದರ ಲಕ್ಷಣಗಳೇನು?

"ಐಸಿಯುಗೆ ದಾಖಲಾದ ಸೋಂಕಿತರು ಎಷ್ಟು ದಿನವಾದರೂ ಗುಣಮುಖರಾಗುತ್ತಿರಲಿಲ್ಲ. ಇತ್ತೀಚಿಗೆ ಒಬ್ಬ ವ್ಯಕ್ತಿಯಿಂದ ಇಡೀ ಕುಟುಂಬಕ್ಕೆ ಡೆಲ್ಟಾ ಸೋಂಕು ಹರಡುತ್ತಿದೆ. ಡೆಲ್ಟಾ ವೈರಸ್ ಸಂಬಂಧ ಪ್ರತ್ಯೇಕ ಮ್ಯೂಕರ್ ಮೈಕೋಸಿಸ್ ವಾರ್ಡ್‌ನ್ನು ತೆರೆಯಲಾಗಿದೆ. ಈವರೆಗೆ 77 ಮ್ಯೂಕರ್ ಮೈಕೋಸಿಸ್ ಪ್ರಕರಣಗಳು ಪತ್ತೆಯಾಗಿವೆ.''

"ಬ್ಲಡ್ ಗ್ಲೂಕೋಸ್ ಹೆಚ್ಚಾಗಿ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಜನರು ಆದಷ್ಟು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಎಲ್ಲರೂ ಕೋವಿಡ್ ಲಸಿಕೆ ಪಡೆಯುವುದು ಸೂಕ್ತ. ವ್ಯಾಕ್ಸಿನ್ ಪಡೆದ ವ್ಯಕ್ತಿಗಳು ಐಸಿಯುಗೆ ದಾಖಲಾಗುತ್ತಿರುವುದು ಕಡಿಮೆ,'' ಎಂದು ಡಾ. ನಂಜರಾಜ್ ಇದೇ ವೇಳೆ ತಿಳಿಸಿದರು.

English summary
Delta plus virus reported in Mysuru, Medical hospital Dean Dr Nanjaraj has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X