ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಾವಳಿ; ಮೈಸೂರು-ವಿಜಯಪುರ ನಡುವೆ ವಿಶೇಷ ರೈಲು

|
Google Oneindia Kannada News

ಮೈಸೂರು, ಅಕ್ಟೋಬರ್ 11 : ನೈಋತ್ಯ ರೈಲ್ವೆ ದೀಪಾವಳಿ ಪ್ರಯುಕ್ತ ಸುವಿಧಾ ವಿಶೇಷ ರೈಲನ್ನು ಘೋಷಣೆ ಮಾಡಿದೆ. ಮೈಸೂರು-ವಿಜಯಪುರ ನಡುವೆ ವಿಶೇಷ ರೈಲು ಸಂಚಾರ ನಡೆಸಲಿದ್ದು, ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಅಕ್ಟೋಬರ್ 25ರಂದು ಸುವಿಧಾ ವಿಶೇಷ ರೈಲು ಮೈಸೂರಿನಿಂದ-ವಿಜಯಪುರಕ್ಕೆ ತೆರಳಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಮೈಸೂರಿನಿಂದ ಅಕ್ಟೋಬರ್ 25ರಂದು 4.45ಕ್ಕೆ ರೈಲು ಹೊರಡಲಿದೆ.

ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗಕ್ಕಾಗಿ ಕೇಂದ್ರ ಸಚಿವರಿಗೆ ಪತ್ರಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗಕ್ಕಾಗಿ ಕೇಂದ್ರ ಸಚಿವರಿಗೆ ಪತ್ರ

ಮೈಸೂರಿನಿಂದ ಹೊರಡುವ ರೈಲು ಮಂಡ್ಯ, ರಾಮನಗರ, ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ, ತೋರಣಗಲ್, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ ಬಸವನಬಾಗೇವಾಡಿಯಲ್ಲಿ ನಿಲುಗಡೆಗೊಳ್ಳಲಿದೆ.

ಕೊಂಕಣ ರೈಲ್ವೆ ನೇಮಕಾತಿ; 135 ಹುದ್ದೆಗೆ ಅರ್ಜಿ ಹಾಕಿಕೊಂಕಣ ರೈಲ್ವೆ ನೇಮಕಾತಿ; 135 ಹುದ್ದೆಗೆ ಅರ್ಜಿ ಹಾಕಿ

Deepavali Special Train Between Mysuru And Vijayapura

ಮೈಸೂರಿನಿಂದ ಹೊರಡುವ ವಿಶೇಷ ರೈಲು ಅಕ್ಟೋಬರ್ 26ರಂದು ಬೆಳಗ್ಗೆ 10.30ಕ್ಕೆ ವಿಜಯಪುರಕ್ಕೆ ತಲುಪಲಿದೆ ಎಂದು ಪ್ರಕಟಣೆ ಹೇಳಿದೆ.

ಕೊಚ್ಚುವೆಲಿ-ಬೆಂಗಳೂರು ರೈಲು ಮೈಸೂರು ತನಕ ವಿಸ್ತರಣೆಕೊಚ್ಚುವೆಲಿ-ಬೆಂಗಳೂರು ರೈಲು ಮೈಸೂರು ತನಕ ವಿಸ್ತರಣೆ

ಬೆಂಗಳೂರು-ಕಾರವಾರ : ದೀಪಾವಳಿ ಅಂಗವಾಗಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಕಾರವಾರಕ್ಕ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 25 ಮತ್ತು 28ರಂದು ರೈಲು ಸಂಚಾರ ನಡೆಸಲಿದೆ.

ಯಶವಂತಪುರ, ಹಾಸನ, ಪುತ್ತೂರು, ಮಂಗಳೂರು, ಉಡುಪಿ, ಕುಂದಾಪುರದ ಮೂಲಕ ರೈಲು ಕಾರವಾರವನ್ನು ತಲುಪಲಿದೆ.

English summary
South western railway announced suvidha special train between Mysuru and Vijayapura on October 25, 2019 in a view of Deepavali rush.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X