ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿ.ನರಸೀಪುರ ಕುಂಭ ಮೇಳ: ಜನಮನ ಸೆಳೆದ ದೀಪಾಲಂಕಾರ

|
Google Oneindia Kannada News

ಮೈಸೂರು, ಫೆಬ್ರವರಿ 18:ತಿ.ನರಸೀಪುರದ ತಿರುಮಕೂಡಲಿನಲ್ಲಿ ನಡೆಯುತ್ತಿರುವ ವಿಶ್ವಪ್ರಸಿದ್ಧ ಕುಂಭಮೇಳದಲ್ಲಿ 2ನೇ ದಿನವೂ ಪೂಜಾ ಕೈಂಕರ್ಯ ಮುಂದುವರೆದಿದೆ. ಇಂದು ಸಂಜೆ ಸಹ ಧಾರ್ಮಿಕ ಸಭೆ ನಡೆಯಲಿದ್ದು, ಸಿಎಂ ಕುಮಾರಸ್ವಾಮಿ ಸಹ ಭಾಗಿಯಾಗಲಿದ್ದಾರೆ.ಇದೇ ವೇಳೆ ತ್ರಿವೇಣಿ ಸಂಗಮದಲ್ಲಿ ನದಿ ನೀರಿನ ಮಟ್ಟ ದಿಢೀರ್ ಹೆಚ್ಚಾಗಿದೆ.

ಮರಳು ಸೇತುವೆಯ ಮೇಲೆ ನದಿಯ ನೀರು ಹರಿಯುತ್ತಿದೆ. ನಿನ್ನೆಗಿಂತ ಇಂದು ಹೆಚ್ಚಾಗಿ ನದಿಗೆ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ನದಿ ದಡದಿಂದ ಯಾಗ ಮಂಟಪ ಹಾಗೂ ಧರ್ಮಸಭೆ ಮಂಟಪಕ್ಕೆ ಸಂಪರ್ಕ ಕಲ್ಪಿಸಲಾಗಿರುವ ಸೇತುವೆ ಮೇಲೆ ನೀರು ಹೆಚ್ಚಾಗಿ ಹರಿಯುತ್ತಿದೆ.

ತಿ ನರಸೀಪುರದ ಕುಂಭಮೇಳಕ್ಕೆ ಹರಿದು ಬಂದ ಜನಸಾಗರತಿ ನರಸೀಪುರದ ಕುಂಭಮೇಳಕ್ಕೆ ಹರಿದು ಬಂದ ಜನಸಾಗರ

ಸ್ವಚ್ಛತೆ ದೃಷ್ಟಿಯಿಂದ ಹೆಚ್ಚಿನ ನೀರು ಬಿಡಲಾಗಿದ್ದು, ಸೇತುವೆ ಮೇಲೆ ಮರಳು ಮೂಟೆಗಳನ್ನಿಟ್ಟು ದಾಟಲು ವ್ಯವಸ್ಥೆ ಮಾಡಲಾಗಿದೆ. ಕುಂಭ ಮೇಳದಲ್ಲಿ ಪುಣ್ಯಸ್ನಾನವನ್ನು ಹೊರತುಪಡಿಸಿದಂತೆ ಪ್ರಮುಖವಾಗಿ ಗಮನ ಸೆಳೆಯುತ್ತಿರುವುದು ದೀಪಾಲಂಕಾರ. ಮೈಸೂರಿನಲ್ಲಿ ದಸರಾ ಸಂದರ್ಭದಲ್ಲಿ ಅಳವಡಿಸಲಾಗುವ ದೀಪಾಲಂಕಾರವನ್ನು ಇಲ್ಲಿನ ದೀಪಾಲಂಕಾರ ನೆನಪು ಮಾಡಿಕೊಡುತ್ತಿದೆ.

ಕುಂಭಮೇಳ 2019: ವೈಭವದ ಗಂಗಾರತಿಯ, ಆಕರ್ಷಕ ಚಿತ್ರಗಳು

Deepalankara is getting more attraction in the Kumbh Mela of T Narasipur

 ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ ವೈಭವೋಪೇತ 11ನೇ ಕುಂಭಮೇಳಕ್ಕೆ ಚಾಲನೆ ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ ವೈಭವೋಪೇತ 11ನೇ ಕುಂಭಮೇಳಕ್ಕೆ ಚಾಲನೆ

ಶ್ರೀನಗರದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಮಣ್ಣು ಪ್ರತಿಕೃತಿಯ ಮೂಲಕ ಕಲಾವಿದನೊಬ್ಬ ನುಡಿ ನಮನ ಸಲ್ಲಿಸಿದ್ದು, ಭಕ್ತಗಣವನ್ನು ಆಕರ್ಷಿಸುತ್ತಿದೆ. ಕಳೆದ ಹದಿನೈದು ವರ್ಷದಿಂದ ಪ್ರತಿ ಕುಂಭಮೇಳದಲ್ಲಿ ತಿ. ನರಸೀಪುರದ ರಘುನಂದನ್ ಮರಳು ಕಲಾಕೃತಿ ರಚಿಸುತ್ತಿದ್ದಾರೆ. ಈ ಬಾರಿ ತ್ರೀಡಿ ಮರಳು ಕಲಾಕೃತಿ ರಚಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Deepalankara is getting more attraction in the Kumbh Mela of T Narasipur

 ತಿ.ನರಸೀಪುರ ಕುಂಭಮೇಳದ ಜೊತೆ ಈ ಸ್ಥಳಗಳನ್ನು ವೀಕ್ಷಿಸಬಹುದು ತಿ.ನರಸೀಪುರ ಕುಂಭಮೇಳದ ಜೊತೆ ಈ ಸ್ಥಳಗಳನ್ನು ವೀಕ್ಷಿಸಬಹುದು

ಈ ಮರಳು ಕಲಾಕೃತಿ ಮೂರು ಅಂಶಗಳನ್ನು ಪ್ರತಿನಿಧಿಸುತ್ತದೆ. ಉಗ್ರರ ದಾಳಿಗೆ ಮಡಿದ ಸೈನಿಕರು, ಇತ್ತೀಚೆಗೆ ಶಿವಕೈರಾದ ಶಿವಕುಮಾರ ಸ್ವಾಮೀಜಿ ಹಾಗೂ ಕುಂಭಮೇಳದ ಕಳಸ ಪ್ರತಿಷ್ಟಾಪನೆಯನ್ನು ಚಿತ್ರ ಒಳಗೊಂಡಿದೆ.

English summary
Deepalankara is getting more attraction in the Kumbh Mela of T Narasipura. Meanwhile, river water level has risen in the Triveni Sangama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X