ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಗ್ಗಿದ ಕೊರೊನಾ ಸೋಂಕು; ಬಸ್‌ ಸಂಚಾರ ಅವಧಿ ವಿಸ್ತರಣೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 29: ಕಡಿಮೆಯಾಗುತ್ತಿರುವ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಿಂದ ಸಾಂಸ್ಕೃತಿಕ ನಗರಿಯಲ್ಲಿ ಜನರ ಓಡಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಜತೆಗೆ ಬೇರೆ ಊರಿನಿಂದ ಮೈಸೂರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ.

ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಇಳಿಯುತ್ತಿರುವುದು ಹಾಗೂ ಜನರ ಓಡಾಟ ಹೆಚ್ಚಳದ ಹಿನ್ನೆಲೆಯಲ್ಲಿ ಮೈಸೂರು ನಗರ ಸಾರಿಗೆ ಸಂಸ್ಥೆ ತನ್ನ ಬಸ್‌ ಗಳ ಸೇವೆಯನ್ನು ರಾತ್ರಿ 10 ಗಂಟೆಯವರೆಗೆ ವಿಸ್ತರಿಸಿದೆ.

ಅನ್ಲಾಕ್ ನಂತರ ಚಾಮುಂಡಿ ಬೆಟ್ಟದ ಕಾಣಿಕೆಯಲ್ಲಿ ಸುಧಾರಣೆ: ಸಂಗ್ರಹವಾಗಿದ್ದೆಷ್ಟು?ಅನ್ಲಾಕ್ ನಂತರ ಚಾಮುಂಡಿ ಬೆಟ್ಟದ ಕಾಣಿಕೆಯಲ್ಲಿ ಸುಧಾರಣೆ: ಸಂಗ್ರಹವಾಗಿದ್ದೆಷ್ಟು?

ಕೊರೊನಾ‌ ಲಾಕ್​ಡೌನ್​ ಸಡಿಲಿಸಿದ ನಂತರ ಹಂತ ಹಂತವಾಗಿ ಮಧ್ಯಾಹ್ನ ಹಾಗೂ ಸಂಜೆಯವರೆಗೆ ಸಾರಿಗೆ ಬಸ್​ಗಳನ್ನು ಓಡಿಸಲಾಗುತ್ತಿತ್ತು. ಆದರೆ ಕಚೇರಿ ಕೆಲಸ, ಶಿಫ್ಟ್ ಕೆಲಸ ಮಾಡುವವರಿಗೆ ಸಂಜೆಯ ನಂತರ ಹೆಚ್ಚಿನ ಬಸ್‌ ಗಳು ಇಲ್ಲದೆ ತೊಂದರೆ ಆಗಿತ್ತು.

Decreased Corona Infection In Mysuru; Bus Traffic Duration Extension

ಪ್ರಯಾಣಿಕರೂ ಕೂಡ ಬಸ್‌ ಸಂಚಾರ ಅವಧಿಯನ್ನು ವಿಸ್ತರಣೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು‌. ಈ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ಸಾರಿಗೆ ಬಸ್ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಲಾಕ್​ಡೌನ್​ ತೆರವುಗೊಳಿಸಿದ ನಂತರ ಬಸ್​ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ನಗರ ಬಸ್ ನಿಲ್ದಾಣದಿಂದ ವಿವಿಧ ಬಡಾವಣೆಗಳಿಗೆ ಬಸ್​​ಗಳು ಸಂಚರಿಸಲಿವೆ ಎಂದು ನಗರ ಸಾರಿಗೆ‌ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ಗುರುವಾರ 19 ಕೊರೊನಾ ಸೋಂಕು ಪ್ರಕರಣಗಳು ಕಂಡುಬಂದಿದ್ದು, ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 53,318ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನೂ 212 ಸಕ್ರಿಯ ಸೋಂಕಿತರಿದ್ದಾರೆ.

English summary
Due to the decreasing number of coronavirus infections, people's travel in Mysuru is increasing day by day. Tourist arrivals to Mysuru are also increasing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X