ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾವಿನಲ್ಲೂ ಒಂದಾದ ಮೈಸೂರಿನ ತಂದೆ- ಮಗ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 4: ಯಾತ್ರೆಗೆಂದು ವೈಷ್ಣೋದೇವಿಗೆ ತೆರಳಿದ ನಂಜನಗೂಡಿನ ವ್ಯಕ್ತಿಯೋಬ್ಬರು ಮರಳಿ ಬರುವಾಗ ಅನಾರೋಗ್ಯದಿಂದ ಮೃತಪಟ್ಟಿದ್ದು, ತಂದೆಯ ಸಾವಿನ ಸುದ್ದಿ ತಿಳಿದು ಮಗನೂ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತರನ್ನು ನಂಜನಗೂಡು ಗಾಣಿಗರ ಸಂಘದ ಗೌರವಾಧ್ಯಕ್ಷ ಕೆ.ಮಾದಶೆಟ್ಟಿ(84) ಹಾಗೂ ಅವರ ಮಗ ಅರುಣ್ ಕುಮಾರ್ (43) ಎಂದು ಗುರುತಿಸಲಾಗಿದೆ. ಕೆ.ಮಾದಶೆಟ್ಟಿ ತೀರ್ಥಯಾತ್ರೆಗೆಂದು ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದರು. ಗುರುವಾರ ಸಂಜೆ ದರ್ಶನ ಪಡೆದು ವಾಪಾಸ್ ಹಿಂತಿರುವಾಗ ಅನಾರೋಗ್ಯಕ್ಕೆ ತುತ್ತಾದ ಮಾದಶೆಟ್ಟಿ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ಶುಕ್ರವಾರ ಮೃತಪಟ್ಟಿದ್ದಾರೆ.[ರು 5 ಸಾವಿರ ತೆಗೆಯಿತು, ವಿದೇಶಿ ವಿದ್ಯಾರ್ಥಿನಿಯ ಪ್ರಾಣ]

Death of father heard the news. Son was died in Mysuru

ಇತ್ತ ತಂದೆ ಸಾವಿನ ಸುದ್ದಿ ತಿಳಿದ ಮಗ ಅರುಣ್‍ಕುಮಾರ್ ಕೂಡ ಹೃದಯಾಘಾತಕ್ಕೆ ತುತ್ತಾಗಿ ಶುಕ್ರವಾರ ಬೆಳಗ್ಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ಅವರೂ ಸಹ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Death of father heard the news. Son was died in Mysuru

ಮೈಸೂರಿನ ಎಂಟೆಕ್ ವಿದ್ಯಾರ್ಥಿನಿ ನೇಣಿಗೆ ಶರಣು

ಮೈಸೂರು: ಮನೆಯ ನಾಯಿಗೆ ಮಾಂಸ ತರಲು ಒತ್ತಾಯ ಮಾಡಿ ಅಕ್ಕ ಹಾಗೂ ತನ್ನ ತಾಯಿಯನ್ನು ಹೊರ ಕಳುಹಿಸಿದ ಎಂಟೆಕ್ ಪದವೀಧರೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.[ಪುತ್ರಿಗೆ ವಿಷವಿತ್ತು ಹತ್ಯೆಗೆ ಯತ್ನ: ತಂದೆ ನಿಧನ, ತಾಯಿ ಪಾರು]

ಕೆ.ರಮ್ಯಾ(25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೈಸೂರಿನ ಮಹಾನಗರ ಪಾಲಿಕೆಯ ಆಶ್ರಯ ಯೋಜನೆಯ ಯೋಜನಾಧಿಕಾರಿ ಕುಮಾರಸ್ವಾಮಿ ಎಂಬುವರ ಮಗಳಾಗಿರುವ ರಮ್ಯಾ, ಎಂಟೆಕ್ ಪದವೀಧರೆ. ಕೆಲಸ ಹುಡುಕುತ್ತಿದ್ದ ಈಕೆ ಮೊನ್ನೆ ಪಿಡಿಒ ಪರೀಕ್ಷೆ ಸಹ ಬರೆದಿದ್ದಳು. ಪರೀಕ್ಷೆ ಚೆನ್ನಾಗಿ ಮಾಡಿರುವುದಾಗಿ ತಂದೆಯ ಮುಂದೆ ಹೇಳಿಕೊಂಡಿದ್ದಳು. ಆದರೆ ಇದ್ದಕ್ಕಿದ್ದಂತೆ ಶುಕ್ರವಾರ ಮಧ್ಯಾಹ್ನ ಗಾಂಧಿ ನಗರದಲ್ಲಿರುವ ಮನೆಯಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Death of father heard the news. Son was died in Mysuru

ಇನ್ನು ಮಾರುಕಟ್ಟೆಯಿಂದ ಮನೆಗೆ ಬಂದ ಅಕ್ಕ ಹಾಗೂ ತಾಯಿ ರಮ್ಯಾಳ ರೂಮ್‌ಗೆ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ರಮ್ಯಾಳ ದೇಹ ಪತ್ತೆಯಾಗಿದೆ. ತಮ್ಮನ್ನು ಕಾಡಿಸಲು ಈ ರೀತಿ ಮಾಡುತ್ತಿದ್ದಾಳೆ ಎಂದು ತಿಳಿದ ಅಕ್ಕ ಈ ರೀತಿ ಚೆನ್ನಾಗಿ ಕಾಣುತ್ತಿಯಾ ಎಂದು ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾಳೆ. ಆದರೆ ಅದಕ್ಕೆ ಪ್ರತಿಕ್ರಿಯೆ ನೀಡದ ರಮ್ಯಾ ದೇಹವನ್ನ ಮುಟ್ಟು ನೋಡಿದಾಗ ಆಕೆ ನಿಜವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೊತ್ತಾಗಿದೆ.

ತಕ್ಷಣ ಸುತ್ತಮುತ್ತಲ ಜನರ ಸಹಾಯದಿಂದ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

English summary
Death of father heard the news. Son was died in Mysuru and M-Tech graduate committed suicide in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X