• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಸರಾ ಉತ್ಸವ ಯಶಸ್ವಿ: ಚಾಮುಂಡೇಶ್ವರಿಗೆ ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ

By ಮೈಸೂರು ಪ್ರತಿನಿಧಿ
|

ಮೈಸೂರು, ಅಕ್ಟೋಬರ್ 27: ನಾಡಹಬ್ಬ ದಸರಾ ಮಹೋತ್ಸವದ ಯಶಸ್ವಿಗಾಗಿ ಹರಕೆ ಹೊತ್ತಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕುಟುಂಬ ಮಂಗಳವಾರ ಚಾಮುಂಡಿ ಬೆಟ್ಟದಲ್ಲಿ ಹರಕೆ ತೀರಿಸಿದರು.

ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ಚಾಮುಂಡಿಯ ಪಲ್ಲಕ್ಕಿ ರಥ ಎಳೆದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ನಗರದ ಅಧಿದೇವತೆ ಚಾಮುಂಡೇಶ್ವರಿಗೆ ಹರಕೆ ತೀರಿಸಿದರು.

ಅಂಬಾರಿ ಹೊತ್ತು ಸಾಗಿದ ಅಭಿಮನ್ಯು: ಐತಿಹಾಸಿಕ ಜಂಬೂಸವಾರಿಗೆ ತೆರೆ

ರೋಹಿಣಿ ಸಿಂಧೂರಿ ಅವರು ಮೈಸೂರು ದಸರಾ ಮಹೋತ್ಸವ ಕೆಲವೇ ದಿನಗಳಿರುವಾಗ ಮೈಸೂರು ಜಿಲ್ಲಾಧಿಕಾರಿಯಾಗಿ ಬಂದಿದ್ದರು. ಮೈಸೂರು ದಸರಾ ಉತ್ಸವ ಸುಸೂತ್ರವಾಗಿ ನಡೆಯುವಂತೆ ಆಶಿಸಿ ಹರಕೆ ಹೊತ್ತು, 9 ದಿನವೂ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ್ದಾರೆ.

ಸೋಮವಾರ ದಸರಾ ಜಂಬೂಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆ ಸಾಯಂಕಾಲ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕುಟುಂಬ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದರು.

ರಿಲ್ಯಾಕ್ಸ್ ಗೆ ಜಾರಿದ ದಸರಾ ಆನೆಗಳು

ಸೋಮವಾರ ಜಂಬೂಸವಾರಿ ಯಶಸ್ವಿಯಾಗಿ ಮುನ್ನಡೆಸಿದ ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ ಐದು ಆನೆಗಳು ಬಣ್ಣ, ಆಭರಣ ಕಳಚಿ ರಿಲ್ಯಾಕ್ಸ್ ಮೂಡ್ ಗೆ ಜಾರಿದವು.

ಇದೇ ವೇಳೆ ಕೊರೊನಾ ಆತಂಕದ ನಡುವೆ ಸರಳ ದಸರಾ ಜಂಬೂಸವಾರಿ ನಡೆಸಿದ ಮಾವುತರು, ಕಾವಾಡಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಜಂಬೂಸವಾರಿ ನಿರ್ವಿಘ್ನವಾಗಿ ಮುಗಿದಿದ್ದಕ್ಕೆ ಸಂತಸಗೊಂಡಿದ್ದಾರೆ. ಅರಮನೆಯ ಆನೆ ಶಿಬಿರದಲ್ಲಿ ಮಾವುತರು ವಿಶ್ರಾಂತಿ ಪಡೆಯುತ್ತಿದ್ದಾರೆ.

English summary
Mysuru DC Rohini Sindhuri and family Did Special Puja to Chamundeshwari Devi In Chamundi hill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X