ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸಿ ರೋಹಿಣಿ ಸಿಂಧೂರಿ ಭರವಸೆ ಹಿನ್ನೆಲೆ: ಗ್ರೀನ್ ಬಡ್ಸ್ ಠೇವಣಿದಾರರ ಧರಣಿ ಅಂತ್ಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 10: ತಮಗಾಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಗ್ರೀನ್ ಬಡ್ಸ್ ಆಗ್ರೋ ಕಂಪನಿ ಠೇವಣಿದಾರರು ನಡೆಸುತ್ತಿದ್ದ ಅಹೋರಾತ್ರಿ ಧರಣಿ, ಮೈಸೂರು ಜಿಲ್ಲಾಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ತಾತ್ಕಾಲಿಕ ಅಂತ್ಯ ಕಂಡಿದೆ.

ಗ್ರೀನ್ ಬಡ್ಸ್ ಆಗ್ರೋ ಕಂಪನಿಯಿಂದ ವಂಚನೆಗೆ ಒಳಗಾದ ಠೇವಣಿದಾರಿಗೆ ಆಗಿರುವ ಅನ್ಯಾಯ ಸರಪಡಿಸುವಂತೆ ಆಗ್ರಹಿಸಿ ನೂರಾರು ಠೇವಣಿದಾರರು ಕಳೆದ ಹಲವು ಮೂರ್ನಾಲ್ಕು ದಿನಗಳಿಂದ ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು.

ಈ ನಡುವೆ ಧರಣಿ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಧರಣಿ ನಿರತರ ಸಮಸ್ಯೆ ಆಲಿಸದೆ, ಸ್ಪಷ್ಟ ಭರವಸೆ ನೀಡದೆ ವಾಪಸಾಗಿ ಸಮಸ್ಯೆ ಪರಿಹಾರಕ್ಕೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳುವ ಭರವಸೆ ನೀಡದ ಹಿನ್ನೆಲೆಯಲ್ಲಿ ಠೇವಣಿದಾರರು ಗುರುವಾರದಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದರು.

Mysuru: DC Rohini Sindhuri Assurance Background: End Of Green Buds Depositors Protest

ಆದರೆ, ಬುಧವಾರ ಸಂಜೆ ಮತ್ತೊಮ್ಮೆ ಧರಣಿ ನಿರತರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಗ್ರೀನ್ ಬಡ್ಸ್ ಠೇವಣಿದಾರರ ಸಮಸ್ಯೆ ಆಲಿಸಿ ಒಂದೂವರೆ ತಿಂಗಳ ಒಳಗಾಗಿ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ ಚಳುವಳಿ ಕೈಬಿಡುವಂತೆ ಮನವಿ ಮಾಡಿದರು ಈ ಹಿನ್ನೆಲೆಯಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ ತಾತ್ಕಾಲಿಕವಾಗಿ ಕೈಬಿಡಲಾಯಿತು.

English summary
Protest run by depositors of Greenbuds Agro Company, has came to a temporary end amidst the promise of the Mysuru District Collector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X