ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲೆಕ್ಸ್, ಬ್ಯಾನರ್, ಬಾವುಟಗಳು, ಬಂಟಿಂಗ್ಸ್ ಹಾಕಿದ್ರೆ 6 ತಿಂಗಳ ಜೈಲು ಶಿಕ್ಷೆ

|
Google Oneindia Kannada News

ಮೈಸೂರು, ಜನವರಿ 20: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರದೇಶಗಳನ್ನು ವಿರೂಪಗೊಳಿಸಿ ಫ್ಲೆಕ್ಸ್, ಬ್ಯಾನರ್, ಬಾವುಟಗಳು, ಬಂಟಿಂಗ್ಸ್ ಹಾಕಿದ್ರೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು, ನಗರ ಪಾಲಿಕೆ ಈ ಬಗ್ಗೆ ಕ್ರಮ ಜರುಗಿಸಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದ್ದಾರೆ.

ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಖಾಸಗಿ ವ್ಯಕ್ತಿಗಳು, ಧಾರ್ಮಿಕ ಸಂಸ್ಥೆಗಳು, ಇತರೇ ಸಂಘಟನೆಗಳು ಮೈಸೂರು ಮಹಾನಗರ ಪಾಲಿಕೆ ಆಸ್ತಿಗಳ ಮೇಲೆ, ಸರ್ಕಾರಿ / ಖಾಸಗಿ / ಸಾರ್ವಜನಿಕರ ಆಸ್ತಿಗಳ ಮೇಲೆ, ವಿದ್ಯುತ್ ಕಂಬಗಳು, ಮೀಡಿಯನ್ಸ್, ಡಿವೈಡರ್ಸ್, ಕಲ್ವರ್ಟ್ಸ್, ರಸ್ತೆ ಬದಿ ಮರಗಳು, ಸರ್ಕಲ್‍ಗಳಲ್ಲಿ ಹುಟ್ಟಿದ ಹಬ್ಬದ ಶುಭಾಶಯಕೋರುವ ಪ್ಲೆಕ್ಸ್‍ಗಳು, ಶ್ರದ್ಧಾಂಜಲಿ ಪ್ಲೆಕ್ಸ್‍ಗಳು, ಬ್ಯಾನರ್‍ಗಳು, ಬಾವುಟಗಳು, ಬಂಟಿಂಗ್ಸ್ ಅಳವಡಿಸುತ್ತಿದ್ದು, ಸಾರ್ವಜನಿಕ ಪ್ರದೇಶಗಳನ್ನು ವಿರೂಪಗೊಳಿಸುತ್ತಿರುವುದು ಕಂಡು ಬಂದಿರುತ್ತದೆ. ಈ ರೀತಿ ಸಾರ್ವಜನಿಕರ ಆಸ್ತಿಗಳನ್ನು ವಿರೂಪಗೊಳಿಸುವುದು The Karnataka Open Places (Prevention of Disfigurement) Act-1981 ರಕಾಯ್ದೆ ಕಲಂ 3 ರನ್ವಯಉಲ್ಲಂಘನೆ ಹಾಗೂ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಹೇಳಿದರು.

ಮೈಸೂರು : ಹೆರಿಟೇಜ್ ಅಥವ ಹೋರ್ಡಿಂಗ್ ಸಿಟಿ ?ಮೈಸೂರು : ಹೆರಿಟೇಜ್ ಅಥವ ಹೋರ್ಡಿಂಗ್ ಸಿಟಿ ?

ಮೈಸೂರು ನಗರವು ಪ್ರಥಮ ಸ್ವಚ್ಛ ನಗರ ಎಂಬ ಖ್ಯಾತಿ ಪಡೆದಿದ್ದು, ಮತ್ತೊಮ್ಮೆ ಈ ಹಿರಿಮೆಯನ್ನು ಮುಡಿಗೇರಿಸಿಕೊಳ್ಳುವ ನಿಟ್ಟಿನಲ್ಲಿ ನಗರ ಸ್ವಚ್ಛತೆಯನ್ನು ವೈಜ್ಞಾನಿಕವಾಗಿ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಕರ್ನಾಟಕ ಪೌರ ನಿಗಮಗಳ ಕಾಯ್ದೆ

ಕರ್ನಾಟಕ ಪೌರ ನಿಗಮಗಳ ಕಾಯ್ದೆ

ಪ್ಲೆಕ್ಸ್ ಬ್ಯಾನರ್ ಗಳನ್ನು ಎಲ್ಲೆಂದರಲ್ಲಿ ಹಾಕುವ ಮೂಲಕ ನಗರದ ಸೌಂದರ್ಯವನ್ನು ಹಾಳುಮಾಡಿದಲ್ಲಿ ಅಂತಹವರ ವಿರುದ್ಧ The Karnataka Open Places (Prevention of Disfigurement) Act-1981 ರಕಾಯ್ದೆ ಕಲಂ 3 ರ ಪ್ರಕಾರ ಪ್ರಕರಣ ದಾಖಲಿಸಬಹುದಾಗಿದೆ. ಈ ಕಾಯ್ದೆ ಪ್ರಕಾರ ಆರು ತಿಂಗಳು ಜೈಲು ಶಿಕ್ಷೆ ಅಥವಾ ರೂ. 1,000/- ದಂಡ ಅಥವಾ ಎರಡು ರೀತಿಯ ದಂಡನೆಯನ್ನು ವಿಧಿಸಲು ಅವಕಾಶವಿರುತ್ತದೆ. ಅಲ್ಲದೆ 1976 ರ ಕರ್ನಾಟಕ ಪೌರ ನಿಗಮಗಳ ಕಾಯ್ದೆ ಪ್ರಕರಣ 135, 136, 137 ಮತ್ತು 138 ರನ್ವಯ ನಗರ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಪ್ಲೆಕ್ಸ್ / ಬ್ಯಾನರ್ ಗಳನ್ನು ಹಾಕುವುದು ನಿಯಮ ಉಲ್ಲಂಘನೆ ಆಗುತ್ತದೆ.

ಜಾಹೀರಾತು ಹೋರ್ಡಿಂಗ್ ಮುಕ್ತವಾಗಿ ಮೈಸೂರುಜಾಹೀರಾತು ಹೋರ್ಡಿಂಗ್ ಮುಕ್ತವಾಗಿ ಮೈಸೂರು

ನಗರ ಸ್ವಚ್ಛತೆಗೆ ಮಾರಕವಾಗಿ ಪರಿಣಮಿಸುತ್ತಿದೆ

ನಗರ ಸ್ವಚ್ಛತೆಗೆ ಮಾರಕವಾಗಿ ಪರಿಣಮಿಸುತ್ತಿದೆ

ಅದರೆ, ಖಾಸಗಿ ವ್ಯಕ್ತಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ನಗರ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಪ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್, ಬಾವುಟ ಹಾಕುತ್ತಿರುವುದರಿಂದ ನಗರ ಸ್ವಚ್ಛತೆಗೆ ಮಾರಕವಾಗಿ ಪರಿಣಮಿಸುತ್ತಿದೆ ಹಾಗೂ ಸ್ವಚ್ಛ ನಗರವನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಬರುವ ಪ್ರವಾಸಿಗರ ಆಕರ್ಷಣೆಗೆ ಕುಂದುಂಟಾಗುತ್ತಿದೆ ಎಂದು ರೋಹಿಣಿ ಹೇಳಿದರು.

ಮೈಸೂರ ಅಂದ ಕೆಡಿಸಿದ್ರೆ ಕ್ರಮ, ನಗರ ಪಾಲಿಕೆಯ ಎಚ್ಚರಿಕೆಮೈಸೂರ ಅಂದ ಕೆಡಿಸಿದ್ರೆ ಕ್ರಮ, ನಗರ ಪಾಲಿಕೆಯ ಎಚ್ಚರಿಕೆ

ಮೈಸೂರು ಮಹಾನಗರ ಪಾಲಿಕೆ ಆಯುಕ್ತ

ಮೈಸೂರು ಮಹಾನಗರ ಪಾಲಿಕೆ ಆಯುಕ್ತ

ಈ ಹಿನ್ನೆಲೆಯಲ್ಲಿ ಈ ತಕ್ಷಣದಿಂದಜಾರಿಗೆ ಬರುವಂತೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ, ಸರ್ಕಲ್‍ಗಳಲ್ಲಿ ಗೋಡೆ / ಮರಗಳಿಗೆ ಹಾಗೂ ಇತರೆ ಯಾವುದೇ ಸ್ಥಳಗಳಲ್ಲಿ ಯಾವುದೇ ಸಂಸ್ಥೆಗಳು, ವ್ಯಕ್ತಿಗಳು / ಕಂಪನಿಗಳು, ರಾಜಕೀಯ ಪಕ್ಷಗಳು, ಸಾರ್ವಜನಿಕರು ಬ್ಯಾನರ್ಸ್, ಪ್ಲೆಕ್ಸ್ ಬಾವುಟ / ಬಂಟಿಂಗ್ಸ್‍ಗಳನ್ನು ಅಳವಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

Recommended Video

Mysore ನುಗು ಡ್ಯಾಂ ನೀರಿನಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ| Oneindia Kannada
ಮೈಸೂರು ಮಹಾನಗರ ಪಾಲಿಕೆ ಆದೇಶ

ಮೈಸೂರು ಮಹಾನಗರ ಪಾಲಿಕೆ ಆದೇಶ

ಈ ಆದೇಶವನ್ನು ಉಲ್ಲಂಘಿಸಿ ನಗರದಯಾವುದೇ ಸ್ಥಳದಲ್ಲಿ ಬ್ಯಾನರ್ಸ್, ಪ್ಲೆಕ್ಸ್ ಬಾವುಟ / ಬಂಟಿಂಗ್ಸ್‍ಗಳನ್ನು ಹಾಕಿದಲ್ಲಿಅಂತಹವರಿಗೆ The Karnataka Open Places (Prevention of Disfigurement) Act--1981 ರ ಕಾಯ್ದೆ ಕಲಂ 3 ರ ಪ್ರಕಾರ ಪ್ರಕರಣ ದಾಖಲಿಸಿ ಪ್ರತಿಯೊಂದುಉಲ್ಲಂಘನೆಗೂರೂ. 1,000/- ದಂಡ ವಿಧಿಸಲಾಗುತ್ತದೆಂದು ಎಚ್ಚರಿಸಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ವಪ್ರಕಟಣೆಯಲ್ಲಿ ತಿಳಿಸಿದರು.

ಬೆಂಗಳೂರಿನಲ್ಲಿ ಫ್ಲೆಕ್ಸ್‌ ಹಾವಳಿ, ಹೈಕೋರ್ಟ್‌ ಗರಂಬೆಂಗಳೂರಿನಲ್ಲಿ ಫ್ಲೆಕ್ಸ್‌ ಹಾವಳಿ, ಹೈಕೋರ್ಟ್‌ ಗರಂ

English summary
Mysuru DC issues notification to curb Flex, Plastic Banner in the city. Supply and sale of banners, buntings and flex and display may lead to six months imprisonment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X