ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್ ಅಂತ್ಯದೊಳಗೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಶಿಫ್ಟ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 27: ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾರ್ಚ್ ಅಂತ್ಯದ ಒಳಗೆ ಕಚೇರಿ ಶಿಫ್ಟ್ ಆಗುವ ಸಾಧ್ಯತೆ ಇದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭೀರಾಂ ಜೀ ಶಂಕರ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್, ನೂತನ ಕಚೇರಿ ಕೆಲಸ ಕಾರ್ಯಗಳು ಅಂತಿಮ ಹಂತ ತಲುಪಿವೆ. ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ 34 ರಿಂದ 40 ಲಕ್ಷದ ಕೇಬಲಿಂಗ್ ಬಿಲ್ ಬಾಕಿ ಉಳಿದಿತ್ತು. ಕೇಬಲಿಂಗ ಬಿಲ್ ಬಾಕಿ ಉಳಿದಿದ್ದರಿಂದ ಕೆಲಸ ಆಗಿರಲಿಲ್ಲ. ಈಗ ಮತ್ತೆ ಅನುಮತಿ ಪಡೆದು ಶಾರ್ಟ್ ಟೈಂ ಟೆಂಡರ್ ಕರೆದು ಕೆಲಸ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಕೆಲಸ ಖಾಲಿ ಇದೆ; 16 ಹುದ್ದೆಗೆ ಅರ್ಜಿ ಹಾಕಿ ಮೈಸೂರಿನಲ್ಲಿ ಕೆಲಸ ಖಾಲಿ ಇದೆ; 16 ಹುದ್ದೆಗೆ ಅರ್ಜಿ ಹಾಕಿ

ಇನ್ನು ಎರಡು ವಾರದಲ್ಲಿ ಕೇಬಲಿಂಗ್ ಕೆಲಸ ಮುಕ್ತಾಯವಾಗಲಿದೆ. ನಮ್ಮ ಎಲ್ಲಾ ಕಡತಗಳು ತಂತ್ರಂಶಾದಲ್ಲಿದೆ. ಆದ್ದರಿಂದ ನಮಗೆ ಸರ್ಕಾರಿ ನೆಟ್ ವರ್ಕ್ ಬೇಕಾಗುತ್ತೆ, ಯಾವುದೇ ಖಾಸಗಿ ನೆಟ್ ವರ್ಕ್ ನಲ್ಲಿ ಬಳಕೆ ಮಾಡಲು ಸಾಧ್ಯವಿಲ್ಲ. ಈಗ ನೆಟ್ ವರ್ಕ್ ಕೆಲಸ ಮುಗಿಯುತ್ತ ಬಂದಿದೆ, ಆ ಕೆಲಸ ಮುಗಿದ ತಕ್ಷಣ ನೂತನ ಕಟ್ಟಡಕ್ಕೆ ಶಿಫ್ಟ್ ಆಗಲಿದ್ದೇವೆ. ಅಲ್ಲಿಗೆ ಶಿಫ್ಟ್ ಆದ ನಂತರ ಕೆಲಸಕ್ಕೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಎಲ್ಲ ಕೆಲಸ ಮುಕ್ತಾಯ ನಂತರ ಶಿಫ್ಟ್ ಮಾಡಲಾಗುವುದು. ಮಾರ್ಚ್ ಅಂತ್ಯದ ಒಳಗೆ ಶಿಫ್ಟ್ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.

DC Abhiram Shankar Said Mysuru District Office Shift By End Of March

ಮೈಸೂನ ಆಸುಪಾಸಿನ ಗ್ರಾಮ ಪಂಚಾಯತಿಗಳನ್ನು ನಗರ ಪಾಲಿಕೆಗೆ ಸೇರಿಸುವ ವಿಚಾರ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸರ್ಕಾರಕ್ಕೆ ತಿಳಿಸಲಾಗಿದೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರ ವಿಭಾಗದ ಬೋಗಾದಿ, ಹಿನಕಲ್, ಹೂಟಗಳ್ಳಿ ಮುಂತಾದ ಗ್ರಾ.ಪಂ ಗಳನ್ನು ನಗರ ಪಾಲಿಕೆ ಸೇರಿಸುವಂತೆ ಶಿಫಾರಸ್ಸು ಮಾಡಲಾಗಿದೆ. ಹಣಕಾಸಿನ ಸಾಧಕ ಬಾಧಕಗಳನ್ನು ನೋಡಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಈ ವಿಚಾರ ಕ್ಯಾಬಿನೆಟ್ ನಲ್ಲಿ ತೀರ್ಮಾನವಾಗಬೇಕಿದೆ ಎಂದು ಮಾಹಿತಿ ನೀಡಿದರು.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಲಘು ಹೃದಯಾಘಾತಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಲಘು ಹೃದಯಾಘಾತ

ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳನ್ನು ನಗರ ಪಾಲಿಕೆ ಸೇರಿಸುವುದರಿಂದ ಗ್ರಾಮ ಪಂಚಾಯತಿ ಚುನಾವಣೆ ನಡೆಯುವ ಬಗ್ಗೆ ಅನುಮಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಗ್ರಾಮೀಣ ಅಭಿವೃದ್ಧಿಗೆ ಈ ವಿಚಾರವಾಗಿ ಕಡತ ಕಳುಹಿಸಲಾಗಿದೆ. ಸಂಬಂಧಪಟ್ಟ ನಿರ್ದೇಶಕರೊಂದಿಗೆ ಮಾತನಾಡಿದ್ದೇವೆ. ಕೂಡಲೇ ಎನ್ಒಸಿ ಸಿಗುವ ನಿರೀಕ್ಷೆ ಇದೆ ಎಂದರು.

ನಂತರ ನಗರಾಭಿವೃದ್ದಿ ಇಲಾಖೆಗೆ, ನಗರ ಪಾಲಿಕೆಗೆ ಸೇರಿಸುವ ಬಗ್ಗೆ ಮಾಹಿತಿ ಬರುತ್ತದೆ. ಈ ಮಾಹಿತಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಲಾಗುತ್ತದೆ. ಚುನಾವಣಾ ಇಲಾಖೆ ಆ ಪ್ರದೇಶಗಳಿಗೆ ಚುನಾವಣೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೆ. ಸರ್ಕಾರದಲ್ಲಿ ಕೈಗೊಳ್ಳುವ ತಿರ್ಮಾನಕ್ಕನುಗುಣವಾಗಿ ಚುನಾವಣಾ ಆಯೋಗ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.

English summary
Mysuru District Collector Abhiram G Shankar said the New DC office shift could be completed by the end of March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X