ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾದಲ್ಲಿ ಕಾಣುತ್ತಿರುವುದೀಗ ಕೊರೊನಾ ಭಯ

|
Google Oneindia Kannada News

ಮೈಸೂರು, ಅಕ್ಟೋಬರ್ 10: ಐತಿಹಾಸಿಕ ಮೈಸೂರು ದಸರಾ ವೈಭವಕ್ಕೆ ಈ ಬಾರಿ ಕೊರೊನಾ ಸೋಂಕು ಅಡ್ಡಗಾಲಾಗಿದ್ದು, ಈ ಮೂಲಕ ದಸರಾ ಇತಿಹಾಸದಲ್ಲೊಂದು ಅಳಿಸಲಾರದ ಕಪ್ಪುಚುಕ್ಕೆಯನ್ನಿಟ್ಟಿದೆ.

ಇವತ್ತಿನ ಪರಿಸ್ಥಿತಿಯನ್ನು ಗಮನಿಸಿದರೆ, ದಸರಾದ ಅದ್ಧೂರಿತನ ಬೇಡವೇ ಬೇಡ ಎಂದೆನಿಸುತ್ತದೆ. ಕಾರಣ, ಎಗ್ಗಿಲ್ಲದೆ ಹೆಚ್ಚುತ್ತಿರುವ ಕೊರೊನಾ ಸೋಂಕು ಯಾವಾಗ ಯಾರನ್ನು ಬಾಧಿಸುತ್ತದೆ ಎಂದು ಹೇಳಲಾಗದ ಸ್ಥಿತಿಗೆ ಬಂದು ತಲುಪಿದೆ. ಹೀಗಾಗಿ ಆದಷ್ಟು ಜನ ಗುಂಪಾಗಿ ಸೇರದೆ ಸಾಮಾಜಿಕ ಅಂತರದಲ್ಲಿ ಸರಳ ಮತ್ತು ಸಂಪ್ರದಾಯಬದ್ಧವಾಗಿ ದಸರಾ ನಡೆಯಲಿ ಎಂಬುದು ಬಹುತೇಕ ಜನರ ಆಶಯವಾಗಿದೆ. ಮುಂದೆ ಓದಿ...

Mysuru: Dasara Preparations In City Inbetween Coronavirus Fear

ಸರಳವಾಗಿ ಆಚರಿಸಿದ ನಿದರ್ಶನಗಳಿವೆ

ಸರಳವಾಗಿ ಆಚರಿಸಿದ ನಿದರ್ಶನಗಳಿವೆ

ಮೈಸೂರು ದಸರಾ ಇತಿಹಾಸದಲ್ಲಿ ಡಾ.ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದಾಗ, ಮಳೆಯಿಲ್ಲದೆ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದಾಗ... ಹೀಗೆ ಹಲವು ಸಂದರ್ಭಗಳಲ್ಲಿ ವಿವಿಧ ಕಾರಣಗಳಿಗೆ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಿದ ನಿದರ್ಶನಗಳಿವೆ. ಆದರೆ ಕೊರೊನಾ ಉಲ್ಬಣಿಸಿದ ಈಗಿನ ಸ್ಥಿತಿ ಆ ರೀತಿಯಿಲ್ಲ. ಇದು ಜೀವದ ಮತ್ತು ಜೀವನದ ಪ್ರಶ್ನೆಯಾಗಿದ್ದು, ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾರಣದಿಂದ ಎಚ್ಚರವಾಗಿರಲೇ ಬೇಕಾಗಿದೆ. ಹೀಗಾಗಿ ರೋಗ ಬಾಧೆಯಿಂದ ಸರಳ ಆಚರಣೆ ನಡೆಸುವ ಪರಿಸ್ಥಿತಿಗೆ ಬಂದಿರುವುದು ನಿಜಕ್ಕೂ ನಾವು ಯಾರೂ ಊಹಿಸದ ಘಟನೆ ಎಂದರೆ ತಪ್ಪಾಗಲಾರದು.

ಏಳೆಂಟು ತಿಂಗಳಿನಿಂದ ಕಾಡುತ್ತಿದೆ ಕೊರೊನಾ

ಏಳೆಂಟು ತಿಂಗಳಿನಿಂದ ಕಾಡುತ್ತಿದೆ ಕೊರೊನಾ

ದೇಶವನ್ನು ಕೊರೊನಾ ಕಳೆದ ಏಳೆಂಟು ತಿಂಗಳಿನಿಂದ ಇನ್ನಿಲ್ಲದಂತೆ ಕಾಡುತ್ತಿದೆ. ಆದರೂ ಜನ ಮುಂಜಾಗ್ರತೆ ವಹಿಸುತ್ತಿಲ್ಲ. ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ದಸರಾವನ್ನು ಸರಳವಾಗಿ ಮಾಡುತ್ತೇವೆ ಎಂದು ಸರ್ಕಾರ ಹೇಳಿದರೂ ನಗರದಲ್ಲಿ ವಿದ್ಯುದ್ದೀಪಗಳ ಅಳವಡಿಕೆ ಮಾಡಲಾಗಿದ್ದು ಝಗಮಗಿಸುವ ಬೆಳಕಿನಲ್ಲಿ ನಗರಕ್ಕೊಂದು ಸುತ್ತು ಹೊಡೆಯುವ ಬಯಕೆ ಪ್ರತಿಯೊಬ್ಬರಿಗೂ ಬಂದೇ ಬರುತ್ತದೆ. ಇದರಿಂದ ಮನೆಯೊಳಗಿದ್ದ ಜನ ದೀಪಾಲಂಕಾರ ನೋಡಲೆಂದು ಹೊರಗೆ ಬಂದರೆ ನಗರದಲ್ಲಿ ಜನ ಜಂಗುಳಿ ಏರ್ಪಡುವುದಿಲ್ಲವೆ? ಜನರನ್ನು ನಿಯಂತ್ರಿಸುವುದಾದರೂ ಹೇಗೆ? ಎಂಬ ಪ್ರಶ್ನೆಗಳು ಜನ ಸಾಮಾನ್ಯರನ್ನು ಕಾಡತೊಡಗಿದೆ.

ಮೈಸೂರು ದಸರಾ ಆಚರಣೆಗೆ ಈ ಬಾರಿ ವಿರೋಧ ಏಕೆ?
ದುಂದುವೆಚ್ಚದ ದೀಪಾಲಂಕಾರ ಬೇಕಾ?

ದುಂದುವೆಚ್ಚದ ದೀಪಾಲಂಕಾರ ಬೇಕಾ?

ಮೂಲಗಳ ಪ್ರಕಾರ ಈ ಬಾರಿ ಕಳೆದ ವರ್ಷ ಮಾಡಿದ ಖರ್ಚಿಗಿಂತ ಅರ್ಧ ಭಾಗವನ್ನು ಮಾತ್ರ ದೀಪಾಲಂಕಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ಆ ಬಗ್ಗೆ ತದ್ವಿರುದ್ಧ ಹೇಳಿಕೆಗಳನ್ನು ನೀಡಬೇಡಿ ಎಂದು ಕೆಲ ಮುಖಂಡರು ಹೇಳುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ದುಂದುವೆಚ್ಚದ ದೀಪಾಲಂಕಾರ ಬೇಕಾ? ಬದಲಿಗೆ ಅದನ್ನು ಕೋವಿಡ್ ನಿಯಂತ್ರಣಕ್ಕೆ ಬಳಸಿ ಜೀವ ಉಳಿದರೆ ಮುಂದಿನ ವರ್ಷ ದಸರಾವನ್ನು ವಿಜೃಂಭಣೆಯಿಂದ ಆಚರಿಸೋಣ ಎನ್ನುವುದು ಕೆಲವು ಪ್ರಜ್ಞಾವಂತರ ಸಲಹೆ. ಎಲ್ಲವನ್ನು ಗಮನಿಸಿ ನೋಡಿದರೆ ಮೈಸೂರು ದಸರಾ ಆಚರಣೆ ಕುರಿತಂತೆ ಪರ-ವಿರೋಧಗಳು ಹುಟ್ಟಿಕೊಂಡಿರುವುದು ಐತಿಹಾಸಿಕ ಮೈಸೂರು ದಸರಾಕ್ಕೊಂದು ಕಪ್ಪು ಚುಕ್ಕೆಯಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಸರ್ಕಾರಕ್ಕೂ ದಸರಾ ಆಚರಣೆ ಒಂದು ಸವಾಲು ಆಗಿದೆ.

ಮಾಯವಾಗಿರುವ ಸಾಮಾಜಿಕ ಅಂತರ

ಮಾಯವಾಗಿರುವ ಸಾಮಾಜಿಕ ಅಂತರ

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಬಹುತೇಕರು ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಹೆಚ್ಚಿನ ಆಸ್ಪತ್ರೆಗಳಲ್ಲಿ ಕೊರೊನಾ ಪೀಡಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಬಹುತೇಕ ಆಸ್ಪತೆಗಳಲ್ಲಿ ಹಾಸಿಗೆಯ ಸಮಸ್ಯೆ ಆರಂಭವಾಗಿದೆ. ದಸರಾ ಹತ್ತಿರವಾಗುತ್ತಿದ್ದಂತೆ ನಗರದಲ್ಲಿ ಪ್ರವಾಸಿಗರು ಕಾಣಿಸಲಾರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಚಾಮುಂಡಿಬೆಟ್ಟ, ಮೃಗಾಲಯ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಸಾಮಾಜಿಕ ಅಂತರ ಮಾಯವಾಗಿದೆ.

ಹೀಗಿರುವಾಗ ಕೊರೊನಾ ಶೀಘ್ರಗತಿಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಿದರೆ ಅದನ್ನು ನಿಯಂತ್ರಿಸುವುದಾದರೂ ಹೇಗೆ? ಇನ್ನು ದೂರದಿಂದ ಬರುವ ಪ್ರವಾಸಿಗರ ಪೈಕಿ ಎಷ್ಟು ಮಂದಿಯಲ್ಲಿ ಕೊರೊನಾ ಸೋಂಕಿದೆ ಎಂಬುದು ಯಾರಿಗೆ ಗೊತ್ತು? ಇದನ್ನು ಪರೀಕ್ಷಿಸುವವರು ಯಾರು?ಮೈಸೂರು ದಸರಾ ಕಾರ್ಯಕ್ರಮಗಳ ಪಟ್ಟಿ ಸಿದ್ಧ; ಯಾವ ದಿನ ಏನು ನಡೆಯುತ್ತೆ?
ದಸರಾದಲ್ಲಿ ಕಾಣುವುದು ವೈಭವ ಅಲ್ಲ ಭಯ

ದಸರಾದಲ್ಲಿ ಕಾಣುವುದು ವೈಭವ ಅಲ್ಲ ಭಯ

ಕೊರೊನಾ ಹುಟ್ಟು ಹಾಕುತ್ತಿರುವ ನೂರೆಂಟು ಸಮಸ್ಯೆಗಳ ನಡುವೆ ಸರಿಸುಮಾರು ನಾಲ್ಕು ಶತಮಾನಗಳಿಗೂ ಹೆಚ್ಚು ಕಾಲದಿಂದ ಅದೆಷ್ಟೋ ದಸರಾಗಳು ಬಂದು ಹೋಗಿರಬಹುದು. ಪ್ರತಿ ವರ್ಷವೂ ಒಂದಷ್ಟು ಬದಲಾವಣೆಗಳೊಂದಿಗೆ ತನ್ನ ವೈಭವವನ್ನು ಮೆರೆಯುತ್ತಲೇ ದಸರಾ ಸಾಗುತ್ತಿತ್ತಲ್ಲದೆ ಇತಿಹಾಸದ ಹಿರಿಮೆ, ಸಾಂಸ್ಕೃತಿಕ ರಂಗುರಂಗಿನ ಗರಿಮೆ, ಬೆಡಗು ಬಿನ್ನಾಣ, ಹಾಡುಪಾಡು ಎಲ್ಲವೂ ಅದರಲ್ಲಿ ಎದ್ದು ಕಾಣುತ್ತಿತ್ತು. ಆದರೆ ಪ್ರಸಕ್ತ ದಸರಾದಲ್ಲಿ ಎಲ್ಲವೂ ಮಾಯವಾಗಿ ಕಾಣುತ್ತಿರುವುದು ಮತ್ತು ಕಾಡುತ್ತಿರುವುದು ಕೊರೊನಾದ ಭಯ ಮಾತ್ರ.

English summary
This year, the coronavirus has become hindrance to the celebration of the historical Mysuru Dasara. Preparations are going on inbetween coronavirus fear in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X