• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Mysuru Dasara; ದಸರಾ ವಸ್ತು ಪ್ರದರ್ಶನಕ್ಕೆ ಚಾಲನೆ, ಮುಕ್ತಾಯಗೊಳ್ಳದ ಕಾಮಗಾರಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್‌, 26: ಕೋವಿಡ್‌ನಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ದಸರಾ ವಸ್ತುಪ್ರದರ್ಶನ ಈ ಬಾರಿ ಮತ್ತೆ ಚಾಲನೆಗೊಂಡಿದೆ. ಇಡೀ ವಸ್ತುಪ್ರದರ್ಶನದ ಆವರಣದ ಪ್ರವೇಶ ದ್ವಾರ ಸೇರಿದಂತೆ ಎಲ್ಲೆಡೆ ವಿದ್ಯುತ್ ದೀಪಾಲಂಕಾರ, ತಳಿರು-ತೋರಣಗಳನ್ನು ಕಟ್ಟಿ ಸಿಂಗಾರ ಮಾಡಿದ್ದರೂ ಒಳಗೆ ಮಾತ್ರ ನೀರಸವಾಗಿತ್ತು.

ಪ್ರವೇಶ ದ್ವಾರದ ಮುಖ್ಯ ರಸ್ತೆಯಿಂದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಕಲಾ ತಂಡಗಳ ಮೆರವಣಿಗೆಯಲ್ಲಿ ಮೂಲಕ ಕರೆ ತರಲಾಯಿತು. ಈ ವೇಳೆ ಸಚಿವರು ಟೇಪು ಕತ್ತರಿಸುವ ಮೂಲಕ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, 90 ದಿನಗಳ ಕಾಲ ನಡೆಯಲಿರುವ ವಸ್ತು ಪ್ರದರ್ಶನದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಕಲಾಕೃತಿಗಳಿರುವ ಸ್ಯಾಂಡ್ ಮ್ಯೂಸಿಯಂ ನಿರ್ಮಿಸಲಾಗಿದ್ದು, ಇದು ವಿಶೇಷವಾಗಿದೆ. ಈ ವಿಶೇಷ ವಸ್ತು ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಬೇಕು ಎಂದು ಮನವಿ ಮಾಡಿದರು.

ದಸರಾ ವಸ್ತು ಪ್ರದರ್ಶನಕ್ಕೆ ಚಾಲನೆ
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಉಪ ಮಹಾಪೌರ ಡಾ.ಜಿ.ರೂಪಾ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಎಚ್.ಜಿ.ಗಿರಿಧರ್, ನಗರಪಾಲಿಕೆ ಸದಸ್ಯರಾದ ಕೆ.ಜೆ.ರಮೇಶ್, ಜಗದೀಶ್, ಪ್ರಾಧಿಕಾರದ ಸಿಇಒ ರುದ್ರೇಶ್ ಇದ್ದರು.

ಮುಕ್ತಾಯಗೊಳ್ಳದ ಕಾಮಗಾರಿ
ಶೇಕಡಾ 80ರಷ್ಟು ಸರ್ಕಾರಿ ಮಳಿಗೆಗಳು ಭರ್ತಿಯಾಗಿ ಪ್ರವಾಸಿಗರ ವೀಕ್ಷಣೆಗೆ ಲಭ್ಯವಾಗಲಿದೆ ಎನ್ನುವ ಮಾತನ್ನು ಹೇಳಿದ್ದರು. ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಹತ್ತು ಮಳಿಗೆಗಳು ಮಾತ್ರ ವೀಕ್ಷಣೆ ಮಾಡಬಹುದು ಎನ್ನುವಂತಿದ್ದವು. ವಸ್ತು ಪ್ರದರ್ಶನದಲ್ಲಿ ಮಕ್ಕಳ ಬಟ್ಟೆ ಮಳಿಗೆಗಳು, ಮಕ್ಕಳ ಆಟಿಕೆ ವಸ್ತುಗಳೇ ಅರ್ಧ ಭರ್ತಿ ಆಗಿದ್ದವು. ಹಲವರು ಮಳಿಗೆಗಳಲ್ಲಿ ಇದೀಗ ವಸ್ತುಗಳನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ.

Dasara Exhibition Inaugurated Despite Unfinished Works

ಮೈಸೂರು ದಸರಾದಲ್ಲಿ ನಡೆಯುವ ಕಾರ್ಯಕ್ರಮ ಮತ್ತು ಸಂಭ್ರಮ ಸೀಮಿತ ಅವಧಿಯದ್ದಾಗಿರುತ್ತದೆ. ಆದರೆ ದಸರಾ ಮುಗಿದರೂ ಸಂಭ್ರಮವನ್ನು ಒಂದಷ್ಟು ಹಿಡಿದಿಡುವುದು ದಸರಾ ವಸ್ತುಪ್ರದರ್ಶನ ಎಂದರೆ ತಪ್ಪಾಗಲಾರದು. ಕಳೆದ ಎರಡು ವರ್ಷಗಳ ಕಾಲ ಕೊರೊನಾ ಕಾರಣದಿಂದ ವಸ್ತುಪ್ರದರ್ಶನ ನಡೆದಿರಲಿಲ್ಲ. ಈ ಬಾರಿ ಅದ್ಧೂರಿ ದಸರಾ ಆಚರಣೆ ವೇಳೆ ವಸ್ತು ಪ್ರದರ್ಶನಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜನರಿಗೆ ಅನುಕೂಲವಾಗುವಂತೆ ಸುಮಾರು 15 ದಿನಗಳ ಮುಂಚಿತವಾಗಿಯೇ ವಸ್ತುಪ್ರದರ್ಶನದ ಉದ‍್ಘಾಟನೆ ನಡೆದಿದೆ. ಇಂದಿನಿಂದ ಆರಂಭವಾಗಿರುವ ವಸ್ತುಪ್ರದರ್ಶನ ಡಿಸೆಂಬರ್ 12ರವರೆಗೆ ಸುಮಾರು 90 ದಿನಗಳ ಕಾಲ ನಡೆಯಲಿದೆ.

ಎಸ್. ಟಿ. ಸೋಮಶೇಖರ್
Know all about
ಎಸ್. ಟಿ. ಸೋಮಶೇಖರ್
English summary
Even though entrance gate of exhibition premises decorated with electric lights everywhere, it was boring. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X