• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಹಿನ್ನೆಲೆ ಟ್ರಾಫಿಕ್ ಜಾಮ್‌ ತಪ್ಪಿಸಲು ಸಂಚಾರ ಮಾರ್ಗ ಬದಲಾವಣೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 23: ದಸರಾ ಸಮಯದಲ್ಲಿ ಉಂಟಾಗುವ ದಸರಾ ದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ಸಂಚಾರ ಮಾರ್ಗ ಬದಲಾವಣೆ ಮತ್ತು ನಿಲುಗಡೆ ವ್ಯವಸ್ಥೆಯಲ್ಲಿ ಮಾಡಲಾಗಿರುವ ನಿರ್ಬಂಧಗಳ ಬಗ್ಗೆ ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅಧಿಸೂಚನೆ ಪ್ರಕಟಿಸಿದ್ದಾರೆ. ಸೆ.26 ರಿಂದ ಅ.4 ರವರೆಗೆ ಸಂಜೆ 4 ರಿಂದ ರಾತ್ರಿ 11 ಗಂಟೆಯವರೆಗೆ ಈ ನಿಯಮ ಜಾರಿಗೆ ಬರಲಿದೆ.

ಸಿದ್ದಾರ್ಥನಗರ ಕಡೆಯಿಂದ ಲೋಕರಂಜನ್ ರಸ್ತೆ ಮಾರ್ಗವಾಗಿ ನಗರ ಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್‌ಗಳು (ಚಾಮುಂಡಿ ಬೆಟ್ಟ, ಸಿದ್ದಾರ್ಥನಗರ, ಆಲನಹಳ್ಳಿ) ಲೋಕರಂಜನ್ ರಸ್ತೆ- ಎಸ್.ಲಿಂಗಣ್ಣ ವೃತ್ತ- ಲೋಕರಂಜನ್ ರಸ್ತೆ ಅಂತ್ಯದಲ್ಲಿಯೇ ಫ್ರೀರೈಟ್ ಟರ್ನ್ ಪಡೆದು ಮಿರ್ಜಾ ರಸ್ತೆಯ ಎಡ ಬದಿಯಲ್ಲಿ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು ಎಫ್‌.ಕೆ.ಇರಾನಿ ವೃತ್ತ- ಜಿಂಜರ್ ಹೋಟೆಲ್ ಜಂಕ್ಷನ್ ಮೂಲಕ ಮುಂದೆ ಸಾಗುವುದು. (ಜಯಚಾಮರಾಜೇಂದ್ರ ಒಡೆಯರ್(ಹಾರ್ಡಿಂಜ್) ವೃತ್ತದ ಕಡೆ ಬರುವಂತಿಲ್ಲ)

ರೈಲ್ವೆಯಲ್ಲಿ ಆಹಾರ ಖರೀದಿಗೆ ಡಿಜಿಟಲ್‌ ವಹಿವಾಟಿಗೆ ಉತ್ತೇಜನರೈಲ್ವೆಯಲ್ಲಿ ಆಹಾರ ಖರೀದಿಗೆ ಡಿಜಿಟಲ್‌ ವಹಿವಾಟಿಗೆ ಉತ್ತೇಜನ

ರಾಮಸ್ವಾಮಿ ವೃತ್ತದ ಕಡೆಯಿಂದ ನಗರ ಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್‌ಗಳು (ಕುವೆಂಪುನಗರ, ಸರಸ್ವತಿಪುರಂ, ರಾಮಕೃಷ್ಣನಗರ, ಬೋಗಾದಿ) ರಾಮಸ್ವಾಮಿ ವೃತ್ತ- ಎಂ.ಎನ್.ಜೋಯಿಸ್ ವೃತ್ತ (ಮುಡಾ) -ರಮಾಲಾಸ ರಸ್ತೆ- ಬನುಮಯ್ಯ ಕಾಲೇಜು ಹತ್ತಿರ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು ಬಿ.ರಾಚಯ್ಯ ವೃತ್ತ (ಕಾರ್ಪೋರೇಷನ್)- ಬಸವೇಶ್ವರ ವೃತ್ತ- ಎನ್.ಮಾಧವರಾವ್ ವೃತ್ತ(ಅಗ್ರಹಾರ ವೃತ್ತ)- ವಾಣಿಲಾಸ ರಸ್ತೆಯಲ್ಲಿ ಮುಂದುವರಿಯುವುದು.

ಹೈದರ್ ಆಲಿ ವೃತ್ತ (ಪೈವ್ ಲೈಟ್ ಸರ್ಕಲ್) ಕಡೆಯಿಂದ ನಗರ ಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್‌ಗಳು (ಶ್ರೀರಂಗಪಟ್ಟಣ, ಸಿದ್ದಲಿಂಗಪುರ, ಎನ್.ಆರ್.ಮೊಹಲ್ಲಾ, ಉದಯಗಿರಿ, ಕೆಸರೆ, ನಾಯ್ಡುನಗರ) ಸರ್ಕಾರಿ ಭವನ ಉತ್ತರ ದ್ವಾರ- ನವಾಬ್ ಹೈದರಾಲಿ ಖಾನ್ ವೃತ್ತ(ಪೈವ್ ಲೈಟ್)- ದಾವೂದ್ ಖಾನ್ ರಸ್ತೆ- ಅಶೋಕ ರಸ್ತೆ- ನೆಹರು ವೃತ್ತ- ಅಶೋಕ ರಸ್ತೆ- ಮಹಾವೀರ ವೃತ್ತ(ದೊಡ್ಡ ಗಡಿಯಾರ)- ಗಾಂಧಿ ವೃತ್ತದ ಬಳಿ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು ಮಹಾವೀರ ವೃತ್ತ(ದೊಡ್ಡ ಗಡಿಯಾರ)- ಚಂದ್ರಗುಪ್ತ ರಸ್ತೆ- ಬಿ.ಎನ್.ರಸ್ತೆ- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ- ನವಾಬ್ ಹೈದರಾಲಿ ಖಾನ್ ವೃತ್ತದ ಕಡೆಯಿಂದ ಮುಂದುವರೆಯುವುದು.

ಕೆ.ಆರ್.ಎಸ್ ರಸ್ತೆ ಕಡೆಯಿಂದ ನಗರ ಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್‌ಗಳು (ಕೆ.ಆರ್.ಎಸ್, ಇಲವಾಲ, ಬೆಳವಾಡಿ, ಕೂರ್ಗಳ್ಳಿ, ಹೂಟಗಳ್ಳಿ) ಕೆ.ಆರ್.ಎಸ್.ರಸ್ತೆ- ದಾಸಪ್ಪ ವೃತ್ತ- ಬಾಬು ಜಗಜೀವನರಾಂ ವೃತ್ತ (ರೈಲ್ವೆ ನಿಲ್ದಾಣ)- ಪುಟ್ಟು ಗೋಪಾಲಕೃಷ್ಣ ಶೆಟ್ಟಿ ವೃತ್ತ (ಜೆ.ಕೆ.ಗ್ರೌಂಡ್)- ಸರ್.ಎಂ.ವಿಶ್ವೇಶ್ವರಯ್ಯ ವೃತ್ತ (ಆಯುರ್ವೇದಿಕ್ ವೃತ್ತ)- ಇರ್ವಿನ್ ರಸ್ತೆ- ನೆಹರು ವೃತ್ತ- ಅಶೋಕ ರಸ್ತೆ- ಮಹಾವೀರ ವೃತ್ತ (ದೊಡ್ಡ ಗಡಿಯಾರ)- ಗಾಂಧಿ ವೃತ್ತದ ಬಳಿ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು- ಓಲ್ಡ್ ಬ್ಯಾಂಕ್ ರಸ್ತೆ- ಎಸ್.ಆರ್.ರಸ್ತೆ ಜಂಕ್ಷನ್- ಸರ್.ಎಂ.ವಿಶ್ವೇಶ್ವರಯ್ಯ ವೃತ್ತ (ಆಯುರ್ವೇದಿಕ್ ವೃತ್ತ)- ಎಡ ತಿರವು ಪಡೆದು ಮುಂದೆ ಸಾಗುವುದು.

Dasara 2022: Changing in Bus Routes to Avoid Traffic Jams in Mysuru city

ನಂಜನಗೂಡು ರಸ್ತೆ ಮಾರ್ಗವಾಗಿ ನಗರ ಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್‌ಗಳು (ನಂಜನಗೂಡು, ಕಡಕೊಳ) ನಂಜನಗೂಡು ರಸ್ತೆ- ಜೆ.ಪಿ.ನಗರ ಲಿಂಕ್ ರಸ್ತೆ- ಮಾನಂದವಾಡಿ ರಸ್ತೆ- ಶ್ರೀನಿವಾಸ ವೃತ್ತ- ವೇದಾಂತ ಹೆಮ್ಮಿಗೆ ವೃತ್ತ- ಆರ್.ಟಿ.ಓ ವೃತ್ತ- ರಾಮಸ್ವಾಮಿ ವೃತ್ತ- ಎಂ.ಎನ್.ಜೋಯಿಸ್ ವೃತ್ತ (ಮೂಡಾ) -ರಮಾವಿಲಾಸ ರಸ್ತೆ- ಬನುಮಯ್ಯ ಕಾಲೇಜು ಹತ್ತಿರ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು ಬಿ.ರಾಚಯ್ಯ ವೃತ್ತ (ಕಾರ್ಪೋರೇಷನ್)- ಬಸವೇಶ್ವರ ವೃತ್ತ- ಎನ್.ಮಾಧವರಾವ್ ವೃತ್ತ(ಅಗ್ರಹಾರ ವೃತ್ತ)- ಸಿದ್ದಪ್ಪ ಚೌಕ ಮೂಲಕ ಮುಂದುವರಿಯುವುದು.

English summary
Mysuru city police commissioner Dr. Chandragupta has given the following instructions regarding traffic rules during the Dasara, which is start from September 26 to October 4
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X