ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯ ದಶಮಿಯಂದೇ ಜಂಬೂ ಸವಾರಿ: ಶ್ರೀನಿವಾಸ ಪ್ರಸಾದ್

By Mahesh
|
Google Oneindia Kannada News

ಮೈಸೂರು, ಅ.4: ಮೈಸೂರು ಅರಸು ಮನೆತನದ ರಾಣಿ ಪ್ರಮೋದಾದೇವಿ ಒಡೆಯರ್, ಅರಮನೆ ಪುರೋಹಿತರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್ ನೇತೃತ್ವದ ದಸರಾ ಸಮಿತಿ ಮಾತುಕತೆ ನಡೆಸಿ ಕೊನೆಗೂ ಪರಿಹಾರ ಕಂಡುಕೊಂಡಿದ್ದಾರೆ. ಈ ಹಿಂದೆ ನಿಗದಿಯಾದಂತೆ ವಿಜಯದಶಮಿ ದಿನದಂದೇ ವಿಶ್ವಪ್ರಖ್ಯಾತ ಜಂಬೂಸವಾರಿ ಮೆರವಣಿಗೆ ನಡೆಸಲಾಗುತ್ತದೆ.

ಸುಮಾರು ಎರಡೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ ಸರ್ಕಾರದ ಪ್ರತಿನಿಧಿಗಳು, ಜಂಬೂ ಸವಾರಿ ಮೆರವಣಿಗೆಯನ್ನು ಪೂರ್ವ ನಿಗದಿಯಂತೆ ಅ.22ರ ಬದಲಾಗಿ 23ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು.

ಕಳೆದ ಎರಡು ದಿನಗಳ ಹಿಂದೆ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ದಿಢೀರ್ ಪತ್ರಿಕಾಗೋಷ್ಠಿ ನಡೆಸಿ ಆಯುಧಪೂಜೆ ದಿನದಂದು ಜಂಬೂ ಸವಾರಿ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದ್ದರು. ಜತೆಗೆ ದಸರಾ ಉದ್ಘಾಟನೆ ಅ.14ರ ಬದಲು 13ರಂದು ಹಮ್ಮಿಕೊಳ್ಳಲಾಗಿದೆ ಎಂದಿದ್ದರು. ರಾಣಿ ಪ್ರಮೋದಾದೇವಿ ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಜತೆಗೆ ರಾಜ್ಯಾದ್ಯಂತ ದಿನಾಂಕ ಬದಲಾವಣೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.[ಸರಳವಾಗಿ ದಸರಾ ಆಚರಣೆ : ಈ ಬಾರಿ ಏನಿರುತ್ತೆ, ಏನಿರಲ್ಲ?]

ದಸರಾ ದಿನಾಂಕ ಬದಲಾವಣೆ ಮಾಡಿರುವ ಬಗ್ಗೆ ಮೈಸೂರಿನ ಇತಿಹಾಸತಜ್ಞ ಪ್ರೊ.ನಂಜರಾಜೇ ಅರಸ್ ಅಸಮಾಧಾನ ವ್ಯಕ್ತಪಡಿಸಿ,'ಅ.22ರಂದು ದಸರಾ ಆಚರಣೆ ಮಾಡಿದರೆ, ಅ.23ರಂದು ಯಾವ ಕಾರ್ಯಕ್ರಮ ಮಾಡುತ್ತೀರಿ?. ಅ.23ರಂದು ಸರ್ಕಾರಿ ರಜೆ ಘೋಷಣೆ ಮಾಡಿರುವುದು ಏಕೆ?' ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದರು. [ಅ.22ರಂದು ಮೈಸೂರು ದಸರಾ ಆಚರಣೆಗೆ ವಿರೋಧ]

V Srinivas Prasad

ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಪ್ರಸಾದ್ ರಾಣಿ ಪ್ರಮೋದಾದೇವಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ ದಿನಾಂಕವನ್ನು 23ರಂದೇ ಜಂಬೂಸವಾರಿ ನಡೆಸುವುದಾಗಿ ತಿಳಿಸಿದ್ದಾರೆ. ಈ ವೇಳೆ ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾಧಿಕಾರಿ ಶಿಖಾ ಉಪಸ್ಥಿತರಿದ್ದರು. ರಾಜ ಪರಿವಾರಕ್ಕೆ ದಸರಾ ಹಬ್ಬಕ್ಕೆ ಅಧಿಕೃತ ಆಹ್ವಾನವನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.

'ಅ.23ರ ಶುಕ್ರವಾರ ಮಧ್ಯಾಹ್ನ 1.10ರಿಂದ 1.25ರ ನಡುವಿನ ಮಕರ ಲಗ್ನದಲ್ಲಿ ನಂದಿಪೂಜೆ ನಡೆಯಲಿದೆ. ವಿಜಯದಶಮಿಯ ದಿನ ಮಧ್ಯಾಹ್ನ 3.12ರಿಂದ ಸಂಜೆ 4.10ರ ಕುಂಭಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.

English summary
Mysuru Dasara 2015 : After discussion with Palace Priests, Maharani Pramoda Devi Wadiyar it has been decided that Dasara 2015 scheduled will be unchanged Oct 13 to 23. Jamboo Savari procession will be held on Oct 23, 2015 said district in charge minister V Srinivas Prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X