ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸುತ್ತೂರು ದನಗಳ ಜಾತ್ರೆ ಅಂದ್ರೆ ಬಹಳ ಇಷ್ಟ...

|
Google Oneindia Kannada News

ಮೈಸೂರು, ಫೆಬ್ರವರಿ 03:ನನಗೆ ಸುತ್ತೂರು ದನಗಳ ಜಾತ್ರೆ ಇಷ್ಟ. ಆದರೆ ಜನರೇ ನನ್ನನ್ನು ನೋಡಲು ಬಿಡುವುದಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿಳಿಸಿದರು.

ಪ್ರತಿಷ್ಠಿತ ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದರ್ಶನ್, ಇಂದು ನಿಮ್ಮ ಒಂದು ಡಿಗ್ರಿ ಒಂದು ಕೋಟಿಗೆ ಸಮಾನ. ವಿದ್ಯೆ ಇಲ್ಲದ ಕಷ್ಟ ಏನೂ ಅಂತ ನನಗೆ ಗೊತ್ತಿದೆ. ಯಾರೂ ಎರಡು ದೋಣಿ ಮೇಲೆ ಕಾಲಿಡಬೇಡಿ ಎಂದು ಕಿವಿ ಮಾತು ಹೇಳಿದರು.

ಕಳ್ಳಬೇಟೆ ತಡೆ ಶಿಬಿರದ ಗುತ್ತಿಗೆ ಸಿಬ್ಬಂದಿಗೆ ನಟ ದರ್ಶನ್ ನೆರವುಕಳ್ಳಬೇಟೆ ತಡೆ ಶಿಬಿರದ ಗುತ್ತಿಗೆ ಸಿಬ್ಬಂದಿಗೆ ನಟ ದರ್ಶನ್ ನೆರವು

ನಾನು ಜೆಎಸ್ಎಸ್ ವಿದ್ಯಾರ್ಥಿ. ಜೆಎಸ್ಎಸ್ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೊಮೊ ಮಾಡಿದೆ. ಆದರೆ ನನ್ನ ಯೋಗ್ಯತೆ ಇದ್ದದ್ದೆ 6 ತಿಂಗಳು. ಅಷ್ಟು ಓದಿ, ನಾನು ವಾಪಸ್ ಬಂದೆ. ನನ್ನ ತಂದೆಯ ಅನಾರೋಗ್ಯದ ಸಂದರ್ಭದಲ್ಲಿ ಜೆಎಸ್ಎಸ್ ಆಸ್ಪತ್ರೆ ನನಗೆ ತುಂಬಾ ಸಹಾಯ ಮಾಡಿದೆ. ಹೀಗಾಗಿ ಸುತ್ತೂರು ಮಠ ನನಗೆ ಅತಿ ಹತ್ತಿರದ ಮಠ ಎಂದು ತಿಳಿಸಿದರು.

Darshan remembering JSS college days

ಶ್ಯಾನುಭೋಗರ ಮಾತು ಕೇಳಿದ್ರೆ ಸಿಎಂ ಆಗುತ್ತಿರಲಿಲ್ಲ:ಸಿದ್ದರಾಮಯ್ಯ ಶ್ಯಾನುಭೋಗರ ಮಾತು ಕೇಳಿದ್ರೆ ಸಿಎಂ ಆಗುತ್ತಿರಲಿಲ್ಲ:ಸಿದ್ದರಾಮಯ್ಯ

ನಾನು ಸಣ್ಣಪುಟ್ಟ ಪಾತ್ರ ಮಾಡಿದಕ್ಕೆ ಇಲ್ಲಿ ತಂದು ಕೂರಿಸಿದ್ದೀರಿ. ನಿಮ್ಮ ಪ್ರೀತಿ, ಅಭಿಮಾನ ಹೀಗೆ ಇರಲಿ. ಆದರೆ ನಾನೊಬ್ಬ ಕಾಮನ್ ಮ್ಯಾನ್ ಆಗಿದ್ದರೆ ಸುತ್ತೂರು ಜಾತ್ರೆಯಲ್ಲಿ ಆರಾಮಾಗಿ ಓಡಾಡುತ್ತಿದ್ದೆ. ಸೆಲೆಬ್ರಿಟಿ ಆಗಿರುವ ಕಾರಣ ನೀವು ನನ್ನನ್ನು ಓಡಾಡಲು ಬಿಡೊಲ್ಲ ಎಂದರು.

Darshan remembering JSS college days

ಇದೇ ವೇಳೆ ಕಾರ್ಯಕ್ರಮದ ವೇದಿಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿದ ದರ್ಶನ್ ಆಶೀರ್ವಾದ ಪಡೆದು ಸರಳತೆ ಮೆರೆದರು.

English summary
Challengiing star Darshan remembering JSS college days and his relationship with suttu mutt in jathra programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X