ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

41.800 ಕೆಜಿ ಹಾಲು ಕೊಟ್ಟ ಪುಣ್ಯಕೋಟಿಗೆ ಬಹುಮಾನ ವಿತರಿಸಿದ ದರ್ಶನ್

|
Google Oneindia Kannada News

Recommended Video

ದರ್ಶನ್ ರ ಈ ಕೆಲಸ ನಿಜಕ್ಕೂ ಶ್ಲಾಘನೀಯ |Oneindia Kannada

ಮೈಸೂರು, ಫೆಬ್ರವರಿ 11: ತೂಗುದೀಪ ಶ್ರೀನಿವಾಸ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಸ್ಮರಣಾರ್ಥ ಮೈಸೂರು ನಗರ ಗೋಪಾಲಕರ ಸಂಘ ಹಾಗೂ ಪಶುಪಾಲನಾ ಇಲಾಖೆ ವತಿಯಿಂದ ನಡೆದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ 41.800 ಕೆಜಿ ಹಾಲು ಕರೆಯುವ ಮೂಲಕ ಬೆಂಗಳೂರಿನ ಪಾದರಾಯನಪುರದ ಶ್ರೀ ಮಾರುತಿ ಡೈರಿ ಫಾರಂನ ರಿಶಿತ್ ಪ್ರಥಮ ಬಹುಮಾನ ಗಳಿಸಿದ್ದಾರೆ.

ನಗರದ ಜೆಕೆ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಹಸುಗಳ ಪೈಕಿ ರಿಶಿತ್ ಅವರ ಹಸು ಅತಿ ಹೆಚ್ಚು ಹಾಲು ನೀಡುವ ಮೂಲಕ 1 ಲಕ್ಷ ರೂ ನಗದು, 2 ಕೆಜಿ ಬೆಳ್ಳಿ ದೀಪಗಳೊಂದಿಗೆ ಟ್ರೋಫಿಯನ್ನು ಬಹುಮಾನವಾಗಿ ತನ್ನ ಮಾಲೀಕರಿಗೆ ತಂದುಕೊಟ್ಟಿತು.

ತೂಗುದೀಪ ಶ್ರೀನಿವಾಸ್, ಅಂಬರೀಶ್ ಸ್ಮರಣಾರ್ಥ ಮೈಸೂರಿನಲ್ಲಿ ಹಾಲು ಕರೆಯುವ ಸ್ಪರ್ಧೆತೂಗುದೀಪ ಶ್ರೀನಿವಾಸ್, ಅಂಬರೀಶ್ ಸ್ಮರಣಾರ್ಥ ಮೈಸೂರಿನಲ್ಲಿ ಹಾಲು ಕರೆಯುವ ಸ್ಪರ್ಧೆ

ಬೆಳಗ್ಗೆ 22.850 ಕೆಜಿ ಹಾಲು ನೀಡಿದ್ದ ರಿಶಿತ್ ಅವರ ಎಚ್ಎಫ್ ತಳಿ ಹಸು ಸಂಜೆ 18.950 ಕೆಜಿ ಹಾಲು ನೀಡುವ ಮೂಲಕ ಪ್ರಥಮ ಸ್ಥಾನ ಪಡೆಯಿತು. ನೆಲಮಂಗಲದ ಭಕ್ತನ ಪಾಳ್ಯದ ಚಂದನ್ ಮುನಿರಾಜು ಅವರ ಹಸು 40.900 ಕೆಜಿ ಹಾಲು ಕರೆಯುವ ಮೂಲಕ ಎರಡನೇ ಬಹುಮಾನ 75 ಸಾವಿರ ರೂನಗದು ಹಣವನ್ನು ತಂದು ಕೊಟ್ಟಿತು.

Darshan distributed prizes to the winners of state level Halu kareyuva competition

ನಂತರ ನಡೆದ ಬಹುಮಾನ ಸಮಾರಂಭದಲ್ಲಿ ದರ್ಶನ್ ವಿಜೇತರಿಗೆ ಬಹುಮಾನ ವಿತರಿಸಿದರು. ಈ ಮೂಲಕ ಹೈನುಗಾರಿಕೆ ಮಾಡುವವರಿಗೆ ಪ್ರೋತ್ಸಾಹವನ್ನು ನೀಡಿದ್ದಾರೆ.

English summary
Actor Darshan distributed prizes to the winners of state level Halu kareyuva competition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X