ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಸೈಬರ್ ಕ್ರೈಂ ಪ್ರಕರಣ

|
Google Oneindia Kannada News

ಮೈಸೂರು, ಜೂನ್ 7: ಮೈಸೂರಿನಲ್ಲಿ ಸೈಬರ್ ಕಳ್ಳರ ಕರಾಮತ್ತು ದಿನೇ ದಿನೇ ಹೆಚ್ಚುತ್ತಿದೆ. ಗ್ರಾಹಕರು ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಯಂತ್ರದ ಬಳಿ ಎಟಿಎಂ ಕಾರ್ಡ್ ಕುರಿತಾದ ಸಮಗ್ರ ಮಾಹಿತಿಯನ್ನು ಸೆರೆಹಿಡಿದು ಅವರೇ ನಕಲಿ ಎಟಿಎಂ ಕಾರ್ಡ್ ಸೃಷ್ಟಿ ಮಾಡಿ, ಅದರ ಮೂಲಕ ಹಣ ಡ್ರಾ ಮಾಡಿ ಗ್ರಾಹಕರಿಗೆ ವಂಚಿಸುವ ಪರಿಪಾಠ ನಗರದಲ್ಲಿದೆ ಹೆಚ್ಚುತ್ತಿದೆ. ಕಳೆದ ಆರು ತಿಂಗಳಲ್ಲಿ ಇಂಥ 15ಕ್ಕೂ ಹೆಚ್ಚು ಪ್ರಕರಣಗಳು ಮೈಸೂರಿನಲ್ಲಿ ದಾಖಲಾಗಿದೆ.

ಅಂಥದ್ದೇ ಒಂದು ಘಟನೆ ಈಚೆಗೆ ನಡೆದಿದೆ. ಮೈಸೂರಿನ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಸಂಬಳದ ಹಣ, ಅವರ ಬ್ಯಾಂಕ್ ಖಾತೆಗೆ ಬಂದ ಕೆಲವೇ ಕ್ಷಣದಲ್ಲಿ ದುಷ್ಕರ್ಮಿಯೊಬ್ಬ ಅದನ್ನು ಲಪಟಾಯಿಸಿದ್ದಾನೆ. ಮೇ 31ರಂದು ಖಾಸಗಿ ಕಂಪನಿ ನೌಕರರ ಬ್ಯಾಂಕ್ ಖಾತೆಗೆ 25 ಸಾವಿರ ರೂ ವೇತನದ ಹಣ ಜಮೆಯಾಗಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಹಣ ಡ್ರಾ ಆಗಿರುವ ಬಗ್ಗೆ ಮೊಬೈಲ್ ಗೆ ಸಂದೇಶ ಬಂದಿದೆ. ಆತಂಕಕ್ಕೊಳಗಾದ ಅವರು ಬೆಳಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ ಮಂಗಳೂರಿನ ಸುಳ್ಯದ ಎಟಿಎಂನಲ್ಲಿ ಹಣ ಡ್ರಾ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಅವರು ಮೈಸೂರು ನಗರದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

 ಪತ್ರಕರ್ತೆ ಬರ್ಖಾ ದತ್ ಗೆ ಆನ್ಲೈನ್ ನಲ್ಲಿ ಕಿರುಕುಳ, 4 ಮಂದಿ ಬಂಧನ ಪತ್ರಕರ್ತೆ ಬರ್ಖಾ ದತ್ ಗೆ ಆನ್ಲೈನ್ ನಲ್ಲಿ ಕಿರುಕುಳ, 4 ಮಂದಿ ಬಂಧನ

ರಾಷ್ಟ್ರೀಕೃತ ಬ್ಯಾಂಕ್ ಎಟಿಎಂ ಕೇಂದ್ರಗಳಲ್ಲಿ ಸಣ್ಣಪುಟ್ಟ ಲೋಪಗಳನ್ನೇ ಬಂಡವಾಳವಾಗಿಸಿಕೊಂಡ ಈ ಹ್ಯಾಕರ್ಸ್ ಗಳು ಹಣ ಡ್ರಾ ಮಾಡಲು ಬರುವ ಗ್ರಾಹಕರ ಎಟಿಎಂ ಕಾರ್ಡ್ ಮಾಹಿತಿಯನ್ನು ಮೊದಲು ಪಡೆಯುತ್ತಾರೆ. ಎಟಿಎಂ ಬಳಿ ಯಾರಿಗೂ ತಿಳಿಯದಂತೆ ಸಣ್ಣ ಸಾಧನವೊಂದನ್ನು ಇರಿಸಿ ಆ ಮೂಲಕ ಮಾಹಿತಿ ಪಡೆದುಕೊಳ್ಳುತ್ತಾರೆ. ಬಳಿಕ ನಕಲಿ ಎಟಿಎಂ ಕಾರ್ಡ್ ಬಳಸಿ ದೂರದ ಊರುಗಳಿಗೆ ತೆರಳಿ ಹಣ ಡ್ರಾ ಮಾಡಿ ತಕ್ಷಣ ಪರಾರಿಯಾಗುತ್ತಾರೆ. ಇದೊಂದು ವಿದೇಶಿ ವಂಚಕರ ಜಾಲ ಎಂಬುದಾಗಿಯೂ ತಿಳಿದು ಬಂದಿದೆ.

cybercrime cases are increasing in Mysuru city

 ಓಟಿಪಿ ಕಳ್ಳರಿದ್ದಾರೆ ಎಚ್ಚರಿಕೆ, ಟೆಕ್ಕಿಗಳೇ ಅವರ ಟಾರ್ಗೆಟ್ ಓಟಿಪಿ ಕಳ್ಳರಿದ್ದಾರೆ ಎಚ್ಚರಿಕೆ, ಟೆಕ್ಕಿಗಳೇ ಅವರ ಟಾರ್ಗೆಟ್

ಇಂತಹ ಪ್ರಕರಣಗಳೇ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಈ ಕುರಿತು ಮುನ್ನೆಚ್ಚರಿಕೆ ನೀಡುತ್ತಿರುವ ಪೊಲೀಸರು, ಭದ್ರತಾ ಸಿಬ್ಬಂದಿ ಇರುವ ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಿ, ಬ್ಯಾಂಕ್ ಖಾತೆಯ ವಿವರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಎಟಿಎಂ ಯಂತ್ರದ ಬಳಿ ಯಾವುದಾದರೂ ಸಾಧನವಿದೆಯೇ ಎಂದು ಪರಿಶೀಲಿಸಿಕೊಳ್ಳಿ. ವೈಫೈ ಉಳ್ಳ ಡೆಬಿಟ್ ಕಾರ್ಡ್ ಗಳನ್ನು ಎಚ್ಚರಿಕೆಯಿಂದ ಬಳಸಿ ಎಂದು ಗ್ರಾಹಕರಿಗೆ ಸಲಹೆ ನೀಡುತ್ತಿದ್ದಾರೆ.

English summary
Day by day cybercrime cases are increasing in Mysuru city. One week back, cybercrime case has been registered in city limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X