ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಮೂಡಾ ಸೈಟ್ ಮಾರಾಟಕ್ಕಿಟ್ಟವನ ಮೇಲೆ ಕ್ರಿಮಿನಲ್‌ ಕೇಸ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 17: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಕಳೆದ ಮೂರು ತಿಂಗಳಿನ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿಯನ್ನು ಭೂಗಳ್ಳರಿಂದ ಸ್ವಾಧೀನ ಪಡಿಸಿಕೊಂಡಿದೆ.

ಆದರೂ ಕೂಡಾ ಭೂಗಳ್ಳರು ಹೊಸ ವಿಧಾನಗಳ ಮೂಲಕ ಜನರನ್ನು ವಂಚಿಸಲು ಮುಂದಾಗಿದ್ದಾರೆ. ಈ ಬಾರಿ ಮೂಡಾ ಆಸ್ತಿಯನ್ನು ಒತ್ತುವರಿ ಮಾಡದೇ ನಕಲಿ ದಾಖಲೆ ಸೃಷ್ಟಿಸಿದ ಭೂಪನೊಬ್ಬ ಮಾರಾಟಕ್ಕಿಟ್ಟಿದ್ದಾನೆ.

ಮುಡಾದಿಂದ ಶೆಡ್ ಗಳ ಒತ್ತುವರಿ ತೆರವು; 6 ಕೋಟಿ ರೂ ಆಸ್ತಿ ವಶಮುಡಾದಿಂದ ಶೆಡ್ ಗಳ ಒತ್ತುವರಿ ತೆರವು; 6 ಕೋಟಿ ರೂ ಆಸ್ತಿ ವಶ

ಮೈಸೂರು ನಗರದ ಟಿ.ಕೆ ಬಡಾವಣೆಯ ನಿ.ಸಂ 719/ಎ ನಲ್ಲಿ 40 x 50 ಅಡಿ ಒಟ್ಟು 2,200 ಚದರ ಅಡಿ ಅಳತೆಯ ನಿವೇಶನವು ಮಾರಾಟಕ್ಕಿರುವುದಾಗಿ ಸೆ.13 ರಂದು ಸ್ಥಳೀಯ ದಿನಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾಗಿರುವುದನ್ನು ನಗರಾಭಿವೃದ್ಧಿ ಪ್ರಾಧಿಕಾರವು ಗಮನಿಸಿದೆ.

Mysuru: Criminal Case Against Muda Site Seller

ಈ ಆಸ್ತಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸ್ವಾಮ್ಯಕ್ಕೆ ಸೇರಿದ ಸ್ವತ್ತಾಗಿದ್ದು, ಸಂಪೂರ್ಣ ಮಾಲೀಕತ್ವ ಮತ್ತು ಸ್ವಾಧೀನವು ಪ್ರಾಧಿಕಾರದ್ದಾಗಿರುತ್ತದೆ. ಈ ಸ್ವತ್ತಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲು ಪ್ರಯತ್ನಿಸಿರುವುದನ್ನು ಗಮನಿಸಲಾಗಿದ್ದು, ಸಾರ್ವಜನಿಕರು ಮೋಸ ಹೋಗಬಾರದೆಂದು ಮುಡಾ ಎಚ್ಚರಿಸಿದೆ.

ದಿನಪತ್ರಿಕೆ ಜಾಹೀರಾತುಗಳಲ್ಲಿ ಕಾಣಿಸಿರುವ ಮೊಬೈಲ್ ಸಂಖ್ಯೆ 998674219 ಹೊಂದಿರುವ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಕ್ರಮ ವಹಿಸಲಾಗುತ್ತಿದೆ.

ಆದಾಗ್ಯೂ ಸಾರ್ವಜನಿಕರು ಈ ಸ್ವತ್ತನ್ನು ಖರೀದಿ ಪಡೆದಲ್ಲಿ ಉಂಟಾಗುವ ಯಾವುದೇ ನಷ್ಟಕ್ಕೆ ಪ್ರಾಧಿಕಾರವು ಜವಾವ್ದಾರವಾಗುವುದಿಲ್ಲ ಎಂದು ಪ್ರಾಧಿಕಾರದ ಆಯುಕ್ತರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿಗೆ ಆಶಾಮಂದಿರ ಯೋಜನೆಯಡಿ ನಗರದ ದೇವನೂರು 1ನೇ ಹಂತ ಬಡಾವಣೆಯ ಮೂಲೆ ನಿವೇಶನಗಳಲ್ಲಿ ಮುಡಾ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಹತ್ತಾರು ಶೆಡ್ಡುಗಳನ್ನು ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ತೆರವುಗೊಳಿಸಿದ್ದರು.

English summary
The Mysuru Urban Development Authority has taken over crores of rupees worth of land Properties from landlords during the last three months of operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X