• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋಹತ್ಯೆ ನಿಷೇಧ; ಪ್ರತಾಪ್ ಸಿಂಹ ಫೇಸ್ ಬುಕ್ ಪೋಸ್ಟ್

|

ಮೈಸೂರು, ನವೆಂಬರ್ 19 : ಗೋಹತ್ಯೆ ನಿಷೇಧ ಯಾವಾಗ?. ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನವಿದು. ಬಿಜೆಪಿಯ ಶಾಸಕರು, ಸಂಸದರು, ಸಚಿವರ ಪೋಸ್ಟ್‌ಗಳಲ್ಲಿ ಈ ಕಮೆಂಟ್ ಹಾಕಲಾಗುತ್ತಿದೆ.

ಮೈಸೂರು ಮತ್ತು ಕೊಡಗು ಸಂಸದ, ಬಿಜೆಪಿ ನಾಯಕ ಪ್ರತಾಪ್ ಸಿಂಹ ಗುರುವಾರ ಈ ಬಗ್ಗೆ ಫೇಸ್ ಬುಕ್‌ ಪೋಸ್ಟ್ ಅನ್ನು ಹಾಕಿದ್ದಾರೆ. 'ಫೇಸ್ಬುಕ್ ಕಾಮೆಂಟ್ ಬಾಕ್ಸ್ ನಲ್ಲಿನ ಹೋರಾಟ ಸಾಕು ಪ್ಲೀಸ್' ಎಂದು ಮನವಿ ಮಾಡಿದ್ದಾರೆ.

ಗೋಹತ್ಯೆ ನಿಷೇಧ ಕುರಿತು ಇನ್ನಷ್ಟು ಚರ್ಚೆ ಅಗತ್ಯ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

"ಗೋಹತ್ಯೆ ನಿಷೇಧದ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ನನ್ನ ಭಾವನೆಯನ್ನು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಸಾಹೇಬ್ರಿಗೆ ಸಧ್ಯದಲ್ಲೇ ತಿಳಿಸುತ್ತೇನೆ" ಎಂದು ಪ್ರತಾಪ್ ಸಿಂಹ ಅವರು ಪೋಸ್ಟ್ ಹಾಕಿದ್ದಾರೆ.

ಗೋಹತ್ಯೆ ವಿರೋಧಿಸಿ ಪ್ರತಿಭಟನೆ; ಸಕಲೇಶಪುರದಲ್ಲಿ ನಿಷೇಧಾಜ್ಞೆ ಜಾರಿ

ಕಮೆಂಟ್ಸ್ ; ಕರ್ನಾಟಕ ಹಲವಾರು ಬಿಜೆಪಿ ನಾಯಕರ ವಾಲ್‌ನಲ್ಲಿ ಇರುವ ಪೋಸ್ಟ್‌ಗಳಲ್ಲಿ ಗೋಹತ್ಯೆ ನಿಷೇಧ ಯಾವಾಗ? ಎಂಬ ಕಮೆಂಟ್ ಹಾಕಲಾಗುತ್ತಿದೆ. ಆದ್ದರಿಂದ ಪ್ರತಾಪ್ ಸಿಂಹ ಅವರು ಫೇಸ್ ಬುಕ್ ಪೋಸ್ಟ್ ಮೂಲಕ ಇದಕ್ಕೆ ಉತ್ತರ ನೀಡಿದ್ದಾರೆ.

ಕೇರಳ ಪ್ರವಾಹಕ್ಕೆ ಕಾರಣ ಗೋಹತ್ಯೆ: ಬಸನಗೌಡ ಪಾಟೀಲ್ ಯತ್ನಾಳ್

"ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು. ಬಿಜೆಪಿ ನಾಯಕರೇ ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತಂದು. ಗೋ ಮಾತೆಯ ಶಾಪದಿಂದ ಮುಕ್ತರಾಗಿ"

"ನಾವು ದೇವರೆಂದು ಪೂಜಿಸುವ ನಮ್ಮ ಗೋ ಮಾತೇ ಹತ್ಯೆ ಮತ್ತು ಕಳ್ಳತನ ಹೆಚ್ಚಾಗುತ್ತಿದೆ. ಆದಷ್ಟು ಬೇಗ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಬೇಕು. ಯಾವಾಗ ಜಾರಿ ಮಾಡುತ್ತೀರಾ? ಯಾಕೆ ಇದರ ಬಗ್ಗೆ ಮಾತು ಎತ್ತುತ್ತಿಲ್ಲ?" ಎಂಬುದು ಸೇರಿದಂತೆ ಹಲವಾರು ಕಮೆಂಟ್‌ಗಳನ್ನು ಮಾಡಲಾಗುತ್ತಿದೆ.

English summary
Mysuru-Kodadu MP and BJP leader Pratap Simha face book post on cow slaughter bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X