ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅರಮನೆ ನೋಡೋಕೂ ಮುನ್ನ ಕೋವಿಡ್ ಟೆಸ್ಟ್ ಕಡ್ಡಾಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 29: ಮೈಸೂರು ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರಲು ಬೇರೆ ಬೇರೆ ಕಡೆಯಿಂದ ಮೈಸೂರು ಅರಮನೆಯನ್ನು ಹಾಗೂ ಇತರ ಪ್ರವಾಸಿ ಸ್ಥಳಗಳನ್ನು ನೋಡಲು ಬರುವ ಜನರಿಗೆ ಅರಮನೆ ಆವರಣದಲ್ಲಿ ಕೋವಿಡ್ ಪರೀಕ್ಷೆಯನ್ನು ಆರಂಭಿಸಲಾಗಿದೆ.

ಈಗ ಪ್ರತಿಯೊಬ್ಬ ಪ್ರವಾಸಿಗನೂ ಅರಮನೆ ವೀಕ್ಷಣೆಗೆ ಹೋಗುವ ಮುನ್ನ ಅಲ್ಲಿಯೇ ಕೋವಿಡ್ ಟೆಸ್ಟ್ ಗೆ ಒಳಪಡಬೇಕಿದೆ.

ಮೈಸೂರು; ಖಾಸಗಿ ಆಸ್ಪತ್ರೆಗಳ ಮೇಲೆ ಕಣ್ಣಿಡಲು ಅಧಿಕಾರಿಗಳ ತಂಡಕ್ಕೆ ಡಿಸಿ ಸೂಚನೆಮೈಸೂರು; ಖಾಸಗಿ ಆಸ್ಪತ್ರೆಗಳ ಮೇಲೆ ಕಣ್ಣಿಡಲು ಅಧಿಕಾರಿಗಳ ತಂಡಕ್ಕೆ ಡಿಸಿ ಸೂಚನೆ

ಈ ಬಗ್ಗೆ ವಿವರಣೆ ನೀಡಿದ ಕೋವಿಡ್ ಟೆಸ್ಟ್ ಕಾರ್ಯನಿರ್ವಹಣೆಯ‌ ಮುಖ್ಯಸ್ಥ ಅಜಯ್ ಕುಮಾರ್, ಇಲ್ಲಿಗೆ ಪ್ರವಾಸಿಗರು ಬೇರೆ ಬೇರೆ ಕಡೆಯಿಂದ ಬರುತ್ತಾರೆ. ಅವರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವರಿಗೆ ಪರೀಕ್ಷೆ ಮಾಡುತ್ತಿದ್ದೇವೆ. ರಾಪಿಡ್ ಆಂಟಿಜನ್ ಟೆಸ್ಟ್ ಹಾಗೂ ಆರ್ಟಿಪಿಸಿಆರ್ ಟೆಸ್ಟ್ ಮಾಡುತ್ತಿದ್ದೇವೆ. ವರದಿಯು 30 ನಿಮಿಷಗಳಲ್ಲೇ ದೊರೆಯುತ್ತದೆ ಎಂದು ಹೇಳಿದರು.

 Mysuru: Covid Test Mandatory Before Visiting Palace

ಕೊರೊನಾ ಪಾಸಿಟಿವ್ ವರದಿ ಬಂದರೆ ಅವರಿಗೆ ವರದಿಯನ್ನು ಕೊಟ್ಟು ವಾಪಸ್ ಕಳುಹಿಸುತ್ತೇವೆ. ಪರೀಕ್ಷೆ ಮಾಡಿಸಿಕೊಳ್ಳಲು ಬೆಳಗ್ಗೆ 6.30 ರಿಂದ ಸಂಜೆ 5ರವರೆಗೂ ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಮೈಸೂರಿನ ಕೊರೊನಾ ಪ್ರಕರಣಗಳ ಸಂಖ್ಯೆ: ಮೈಸೂರಿನಲ್ಲಿ ಒಟ್ಟು 47,201 ಕೊರೊನಾ ಪ್ರಕರಣಗಳಿದ್ದು, ಇದುವರೆಗೂ 44,175 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯಕ್ಕೆ 2,073 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 953 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

English summary
The number of coronavirus cases increasing in Mysuru and now covid test is mandatory for people who come to visit Mysuru Palace and other tourist spots in district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X