ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಪರಿಸ್ಥಿತಿ; ಮೈಸೂರು ಜೈಲಿನಿಂದ 46 ಕೈದಿಗಳು ಬಿಡುಗಡೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 17; ಕೊರೊನಾ ಎರಡನೇ ಅಲೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಕೇಂದ್ರ ಕಾರಾಗೃಹದ 46 ಕೈದಿಗಳನ್ನು 90 ದಿನಗಳು ಪರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಇನ್ನೂ 9 ಮಂದಿ ಬಿಡುಗಡೆಯಾಗಲಿದ್ದಾರೆ.

ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸುಪ್ರಿಂಕೋರ್ಟ್ ರಾಜ್ಯಗಳ ವಿವಿಧ ಕೇಂದ್ರ, ಜಿಲ್ಲಾ, ಬಯಲು, ತಾಲ್ಲೂಕು ಕಾರಾಗೃಹಗಳ ಸಜಾ ಬಂಧಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿತ್ತು.

ಮೈಸೂರು ಡಿಸಿ ರೋಹಿಣಿ ಸಿಂಧೂರಿ ಕುಟುಂಬದ ಎಲ್ಲರಿಗೂ ಕೊರೊನಾ ಸೋಂಕುಮೈಸೂರು ಡಿಸಿ ರೋಹಿಣಿ ಸಿಂಧೂರಿ ಕುಟುಂಬದ ಎಲ್ಲರಿಗೂ ಕೊರೊನಾ ಸೋಂಕು

ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರ ನೇತೃತ್ವದ ಉನ್ನತಾಧಿಕಾರದ ಸಮಿತಿಯು ಕೈದಿಗಳನ್ನು ಪರೋಲ್ ಮೇಲೆ ಬಿಡುಗಡೆ ಮಾಡುವ ಕುರಿತು ಎಲ್ಲ ರಾಜ್ಯದ ವಿವಿಧ ಕೇಂದ್ರ, ಜಿಲ್ಲಾ, ಬಯಲು, ತಾಲ್ಲೂಕು ಕಾರಾಗೃಹಗಳ ನಡವಳಿಗಳನ್ನು ಸೂಚಿಸಿರುವ ಹಿನ್ನೆಲೆಯಲ್ಲಿ 90 ದಿನಗಳ ಪರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.

ಮೈಸೂರು: ಕೊರೊನಾ ಸೋಂಕಿತನ ಮೇಲೆ ಗ್ರಾಮಸ್ಥರ ಹಲ್ಲೆಮೈಸೂರು: ಕೊರೊನಾ ಸೋಂಕಿತನ ಮೇಲೆ ಗ್ರಾಮಸ್ಥರ ಹಲ್ಲೆ

 COVID Situation 46 Prisoners Releases On Parole In Mysuru

ಮೈಸೂರು ಕೇಂದ್ರ ಕಾರಾಗೃಹದಲ್ಲಿ 50 ಮಂದಿ ಶಿಕ್ಷೆಗೆ ಗುರಿಯಾದವರು ಸೇರಿದಂತೆ ಒಟ್ಟು 800 ಮಂದಿ ಕೈದಿಗಳು ಇದ್ದು, ಈ ಪೈಕಿ 46 ಕೈದಿಗಳನ್ನು 90 ದಿನಗಳ ಪರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಪೈಕಿ 9 ಮಂದಿ ಮಹಿಳೆಯರಾಗಿದ್ದಾರೆ. ಇನ್ನು 9 ಮಂದಿ ಬಿಡುಗಡೆಯಾಗಲು ಸಿದ್ಧರಾಗಿದ್ದಾರೆ.

ಮೈಸೂರು: ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಮಾರಾಟ; ಐವರ ಬಂಧನ ಮೈಸೂರು: ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಮಾರಾಟ; ಐವರ ಬಂಧನ

ಈ ಬಗ್ಗೆ ಮಾಹಿತಿ ನೀಡಿರುವ ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕಿ ದಿವ್ಯಶ್ರೀ, "46 ಕೈದಿಗಳನ್ನು 90 ದಿನಗಳ ಪರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಪೈಕಿ 9 ಮಂದಿ ಮಹಿಳೆಯರಾಗಿದ್ದಾರೆ. ಇನ್ನು 9 ಮಂದಿ ಪರೋಲ್ ಮೇಲೆ ಬಿಡುಗಡೆಯಾಗಲು ಅರ್ಹರಾಗಿದ್ದಾರೆ. ಇವರುಗಳನ್ನು ನಿಯಮಾವಳಿ ಅನ್ವಯ ಬಿಡುಗಡೆ ಮಾಡಲಾಗುವುದು" ಎಂದು ಹೇಳಿದ್ದಾರೆ.

English summary
Due to COVID 19 situation 46 prisoners released on 90 days parole from Mysuru jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X