ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರಿಟನ್‌ನಿಂದ ಮೈಸೂರಿಗೆ ಬಂದ ಒಬ್ಬರಲ್ಲಿ ಕೋವಿಡ್ ಪತ್ತೆ: ಡಿಸಿ ರೋಹಿಣಿ ಸಿಂಧೂರಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 26: ಬ್ರಿಟನ್‌ನಿಂದ ಮೈಸೂರು ಜಿಲ್ಲೆಗೆ ಬಂದವರ ಪೈಕಿ ಒಬ್ಬರಲ್ಲಿ ಕೋವಿಡ್ ಪತ್ತೆಯಾಗಿದ್ದು, ಜೀನ್ಸ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಮಾದರಿಯನ್ನು ನಿಮಾನ್ಸ್‌ಗೆ ಕಳುಹಿಸಲಾಗಿದೆ. ಸೋಮವಾರದ ವೇಳೆಗೆ ಫಲಿತಾಂಶ ತಿಳಿಯಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಮಾಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ, ಮಾಧ್ಯಮ ಪ್ರತಿ‌ನಿಧಿಗಳೊಂದಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾತನಾಡಿದರು.

ರೂಪಾಂತರಿ ಕೊರೊನಾ ವೈರಸ್: ಹೊಸ ವರ್ಷದಲ್ಲಿ ಕಾದಿದೆ ಶಾಕ್!ರೂಪಾಂತರಿ ಕೊರೊನಾ ವೈರಸ್: ಹೊಸ ವರ್ಷದಲ್ಲಿ ಕಾದಿದೆ ಶಾಕ್!

ಬ್ರಿಟನ್‌ನಿಂದ ಬಂದು ಕೋವಿಡ್ ಪತ್ತೆಯಾಗಿರುವ ಆ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ ಮೂವರು, ದ್ವಿತೀಯ ಸಂಪರ್ಕದಲ್ಲಿ ಮೂವರು ಇದ್ದರು. ಆ ಪೈಕಿ ಒಬ್ಬರಿಗೆ ಪಾಸಿಟಿವ್ ಬಂದಿದೆ ಎಂದು ಅವರು ತಿಳಿಸಿದರು.

Covid-19 Positive For One Arrived From Britain To Mysuru: DC Rohini Sindhuri

ಇವರು ಡಿಸೆಂಬರ್ 14ರಂದು ಇವರು ಮೈಸೂರಿಗೆ ಬಂದಿದ್ದಾರೆ. ರೂಪಾಂತರಗೊಂಡ ಕೋವಿಡ್ ಎಂಬುದು ಇನ್ನೂ ಗೊತ್ತಾಗಿಲ್ಲ. ಸೋಮವಾರದ ವೇಳೆಗೆ ತಿಳಿಯಲಿದೆ. ಜನರು ಭಯಪಡುವ ಅಗತ್ಯವಿಲ್ಲ ಎಂದರು.‌

ಬ್ರಿಟನ್‌ನಿಂದ ಬಂದ ಒಟ್ಟು 137 ಜನರ ಪೈಕಿ 23 ಜನರ ಹೊರತಾಗಿ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಈ 23 ಜನ ಮೊದಲೇ ಪರೀಕ್ಷೆ ಮಾಡಿಸಿಕೊಂಡಿದ್ದೆವು ಎಂದು ತಿಳಿಸಿದ್ದಾರೆ. ಆದಾಗ್ಯೂ ಮುನ್ನೆಚ್ಚರಿಕೆಯಾಗಿ ಅವರಿಗೆ ಮತ್ತೊಮ್ಮೆ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದರು.

English summary
Covid-19 positive for one of those who came from Britain to Mysuru district, and a sample was sent to Nimhans for gene sequencing testing. District Collector Rohini Sindhuri said the results would be known by Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X