• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಕೋವಿಡ್ ಡೆತ್ ರೇಟ್ ಹೆಚ್ಚಳ: ಕಾರಣ ಬಿಚ್ಚಿಟ್ಟ ಜಿಲ್ಲಾಧಿಕಾರಿ

|
Google Oneindia Kannada News

ಮೈಸೂರು, ಜೂನ್ 16: ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಾವಿನ ಪ್ರಕರಣ ಹೆಚ್ಚಳದ ವಿಚಾರವಾಗಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಕಳೆದ 3 ದಿನಗಳಿಂದ ಸಾವಿನ ಸಂಖ್ಯೆ ಹೆಚ್ಚಾಗಿರುವುದರ ಕಾರಣವನ್ನೂ ತಿಳಿಸಿದ್ದಾರೆ.

ಈ ಕುರಿತು ವಿವರಿಸಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, "ಸಿಟಿ ಸ್ಕ್ಯಾನ್‌ನಲ್ಲಿ ಕೋವಿಡ್ ಪಾಸಿಟಿವ್ ಲಕ್ಷಣವಿದ್ದರೆ ರಿಪೋರ್ಟ್ ಮಾಡುವುದನ್ನು ಈಗ ಸ್ಟಾಪ್ ಮಾಡಿದ್ದೇವೆ. ಅಲ್ಲದೆ ಆರ್‌ಟಿ- ಪಿಸಿಆರ್ ಟೆಸ್ಟ್ ಜಾಸ್ತಿ ಮಾಡುತ್ತಿದ್ದೇವೆ. ಹೀಗಾಗಿ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲ ಕೊರೊನಾ ಡೆತ್‌ಗಳ ಸಂಖ್ಯೆ ಹೆಚ್ಚಾಗಲು ಬಿಡುಗಡೆ ಆದ ನಂತರ ಕೆಲವರು ಡೆತ್ ಆಗುತ್ತಿದ್ದಾರೆ. ಇದರ ಸಂಖ್ಯೆಯನ್ನು ಸಹ ಕೊಡಲಾಗುತ್ತಿದೆ,'' ಎಂದು ವಿವರಿಸಿದರು.

ಕೊರೊನಾ ಸಾವಿನ ಸಂಖ್ಯೆ: ರಾಜಧಾನಿ ಬೆಂಗಳೂರನ್ನು ಮೀರಿಸುತ್ತಿರುವ ರಾಜ್ಯದ ಈ ನಗರಕೊರೊನಾ ಸಾವಿನ ಸಂಖ್ಯೆ: ರಾಜಧಾನಿ ಬೆಂಗಳೂರನ್ನು ಮೀರಿಸುತ್ತಿರುವ ರಾಜ್ಯದ ಈ ನಗರ

"ಕೋವಿಡ್ ಪರೀಕ್ಷೆಗೆ ಕೊಟ್ಟು ವರದಿಗೆ ಮುನ್ನ ಸತ್ತವರ ಸಂಖ್ಯೆ ಕೂಡ ಕಯಾಜ್ ಮೂಲಕ ಸೇರಿಸುತ್ತಿದ್ದೇವೆ. ಗ್ರಾಮೀಣ ಭಾಗದ ಆಸ್ಪತ್ರೆಯಲ್ಲಿ ತಡವಾಗಿ ಬೆಳಕಿಗೆ ಬರುವ ಡೆತ್ ಪ್ರಕರಣಗಳನ್ನೂ ಪಟ್ಟಿಗೆ ಸೇರಿಸುತ್ತಿದ್ದೇವೆ. ಈ ಎಲ್ಲ ಕಾರಣಗಳಿಂದ ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಸಾವಿನ ದರ ಜಾಸ್ತಿ ಆಗಿದೆ,'' ಎಂದು ತಿಳಿಸಿದರು.

"ಅಲ್ಲದೆ ಮೈಸೂರಿನಲ್ಲಿ ಡೆತ್‌ ರೇಟ್ ಹೆಚ್ಚಾಗಿದೆಯೇ ಹೊರತು ಸಾವು ಹೆಚ್ಚಾಗಿಲ್ಲ. ಸಂಖ್ಯೆ ನೋಡಿ ಜನರು ಗಾಬರಿ ಆಗುವುದು ಬೇಡ. ಈವರೆಗೆ ಡೆತ್ ಡಾಟಾವನ್ನು ಸಂಪೂರ್ಣವಾಗಿ ಮಾಡಿಲ್ಲ. ಒಂದು ತಿಂಗಳಿನಿಂದ ಮಾಡುತ್ತಿದ್ದೇವೆ,'' ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದರು. ಜಿಲ್ಲಾಧಿಕಾರಿ ಸ್ಪಷ್ಟನೆ ವೇಳೆ ಮಧ್ಯೆ ಪ್ರವೇಶ ಮಾಡಿದ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, "ಸಾವಿನ ಸಂಖ್ಯೆಯನ್ನು ಜಿಲ್ಲಾಡಳಿತ ಮುಚ್ಚಿಡುವುದಿಲ್ಲ. ಇದರಲ್ಲಿ ಬ್ಲಾಕ್ ಅಂಡ್ ವೈಟ್ ಯಾವುದೂ ಇಲ್ಲ, ಎಲ್ಲ ವೈಟ್,'' ಎಂದು ತಿಳಿಸಿದರು.

English summary
Mysuru District Collector Dr Bagadi Gawtham Reveals The reason behind The high death rate in Mysuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X