ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಲಿನಿಕಲ್ ಪ್ರಯೋಗ: ಮೈಸೂರಿನಲ್ಲಿ ಕೋವಾಕ್ಸಿನ್ ಲಸಿಕೆ ಪಡೆದ ಮಕ್ಕಳು ಸುರಕ್ಷಿತ

|
Google Oneindia Kannada News

ಮೈಸೂರು, ಜೂನ್ 13: 12-18 ವರ್ಷದೊಳಗಿನ ಮಕ್ಕಳ ಮೇಲೆ ಕೊರೊನಾವೈರಸ್‌ ಕೊವಾಕ್ಸಿನ್ ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ದೇಶಾದ್ಯಂತ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಈ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗಿದ್ದು ಕ್ಲಿನಿಕಲ್ ಪ್ರಯಫಗಕ್ಕೆ ಒಳಗಾದ ಎಲ್ಲಾ ಮಕ್ಕಳು ಕೂಡ ಆರೋಗ್ಯವಾಗಿ ಸದೃಢವಾಗಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜ್ & ರಿಸರ್ಚ್ ಇನ್‌ಸ್ಟಿಟ್ಯೂಟ್‌(ಎಂಎಂಸಿಆರ್‌ಐ)ನ ಅಂಗಸಂಸ್ಥೆಯಾದ ಚೆಲುವಾಂಬ ಆಸ್ಪತ್ರೆಯಲ್ಲಿ 30 ಮಕ್ಕಳಿಗೆ ಲಸಿಕೆಯನ್ನು ಪ್ರಯೋಗಿಕವಾಗಿ ನೀಡಲಾಗಿದೆ.

ಈ ಬಗ್ಗೆ ಎಂಎಂಸಿಆರ್‌ಐನ ಡೀನ್ ಹಾಗೂ ನಿರ್ದೇಶಕ ಸಿಪಿ ನಂಜರಾಜ್ ಎಲ್ಲಾ ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. "ಲಸಿಕೆಯನ್ನು ಸ್ವೀಕರಿಸಿದ ಎಲ್ಲಾ ಮಕ್ಕಳ ಹೆತ್ತವರೊಂದಿಗೆ ಫೋನ್ ಸಂಪರ್ಕದಲ್ಲಿದ್ದು ನಾವು ಸೂಕ್ಷ್ಮವಾಗಿ ನಿಗಾವಹಿಸುತ್ತಿದ್ದೇವೆ. ಈವರೆಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ವರದಿಯಾಗಿಲ್ಲ" ಎಂದು ಅವರು ತಿಳಿಸಿದ್ದಾರೆ.

ಗುಣಮುಖರಾದವರು ಲಸಿಕೆ ಪಡೆದರೆ ಏನಾಗುತ್ತದೆ; AIG ವರದಿ ಹೀಗನ್ನುತ್ತಿದೆ...ಗುಣಮುಖರಾದವರು ಲಸಿಕೆ ಪಡೆದರೆ ಏನಾಗುತ್ತದೆ; AIG ವರದಿ ಹೀಗನ್ನುತ್ತಿದೆ...

ಒಟ್ಟು 53 ಮಕ್ಕಳು ಈ ಲಸಿಕೆಯ ಪ್ರಯೋಗಕ್ಕಾಗಿ ಆಯ್ಕೆ ಮಾಡಲಾಗಿತ್ತು. ಇದರಲ್ಲಿ 30 ಮಕ್ಕಳು ಮಾತ್ರವೇ ಕ್ಲಿನಿಕಲ್ ಪ್ರಯೋಗಕ್ಕೆ ಅರ್ಹರಾಗಿದ್ದರು. ರಕ್ತದ ಪರೀಕ್ಷೆ ಹಾಗೂ ಗಂಟಲು ದ್ರವದ ಪರೀಕ್ಷೆಯನ್ನು ನಡೆಸಿದ ನಂತರ ಮಕ್ಕಳನ್ನು ಈ ಕ್ಲಿನಿಕಲ್ ಪ್ರಯೋಗಕ್ಕೆ ಆಯ್ಕೆ ಮಾಡಲಾಗುತ್ತು. ನಿತ್ಯವೂ ಮಕ್ಕಳ ಆರೋಗ್ಯದ ಬಗ್ಗೆ ವೈದ್ಯರು ಮಾಹಿತಿಯನ್ನು ಪಡೆಯುತ್ತಿದ್ದಾರೆ.

Covaxin vaccine trial on 30 children in Mysore, all are healthy and fit

"ಈ ಮಕ್ಕಳ ಮೇಲೆ ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಿಗಾ ಇಡಲಾಗುತ್ತದೆ. 12-18 ವರ್ಷದೊಳಗಿನ ಇನ್ನೂ 20 ಮಕ್ಕಳ ಮೇಲೆ ಪ್ರಯೋಗವನ್ನು ನಡೆಸಲಾಗುತ್ತದೆ" ಎಂದು ಅವರು ಮಾಹಿತಿ ನೀಡಿದ್ದಾರೆ. ಎಂಎಂಸಿಆರ್‌ಐ ಎಂಎಂಸಿ&ಆರ್‌ಐ ಕರ್ನಾಟಕದಲ್ಲಿ ಮಕ್ಕಳ ಪ್ರಯೋಗಿಕ ಲಸಿಕೆಗೆ ಆಯ್ಕೆಯಾದ ಏಕೈಕ ಆಸ್ಪತ್ರೆಯಾಗಿದೆ.

ಈ ವೈದ್ಯಕೀಯ ಪ್ರಯೋಗಕ್ಕೆ ಒಳಗಾದ ಮಕ್ಕಳನ್ನು ಮುಂದಿನ ಒಂದು ತಿಂಗಳ ನಂತರ ರಕ್ತದ ಮಾದರಿಯನ್ನು ಪಡೆದು ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ. ಮೊದಲ ಡೋಸ್‌ನ ಪರಿಣಾಮದ ಬಗ್ಗೆ ಅಧ್ಯಯನವನ್ನು ನಡೆಸಿ ನಂತರ ಎರಡನೇ ಡೋಸ್ ಪ್ರಯೋಗಿಸಲಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿಯನ್ನು ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಒಟ್ಟು 528 ಕೇಂದ್ರಗಳಲ್ಲಿ ಮಕ್ಕಳ ಮೇಲೆ ಕ್ಲಿನಿಕಲ್ ಪ್ರಯೋಗ ನಡೆದಿದೆ.

English summary
Covaxin vaccine trial on 30 children in Mysore, all are healthy and fit. here is the full details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X