ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ನೀಡದ ಪರಿಹಾರ; ಡಿಸಿ, ಎಸಿ ಕಾರು ಜಪ್ತಿಗೆ ಕೋರ್ಟ್ ಆದೇಶ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 21: ರೈತರ ಜಮೀನಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಡಿಸಿ, ಎಸಿ ಕಾರುಗಳ ಜಪ್ತಿಗೆ ಕೋರ್ಟ್ ಅಧಿಕಾರಿಗಳು ಮುಂದಾಗಿದ್ದು, ಡಿಸಿ ಮತ್ತು ಎಸಿ ಕಚೇರಿಯ ಪೀಠೋಪಕರಣ ಜಪ್ತಿಗೆ ಮೈಸೂರು ಸಿಜೆಎಂ ನ್ಯಾಯಾಲಯ ಆದೇಶ ನೀಡಿದೆ.

ಇಬ್ಬರ ನಡುವಿನ ತಿಕ್ಕಾಟದಲ್ಲಿ ಮಣ್ಣು ಪಾಲಾಯ್ತು 1500 ಲೀಟರ್ ಹಾಲುಇಬ್ಬರ ನಡುವಿನ ತಿಕ್ಕಾಟದಲ್ಲಿ ಮಣ್ಣು ಪಾಲಾಯ್ತು 1500 ಲೀಟರ್ ಹಾಲು

ಸಾತಗಳ್ಳಿ ಭಾಗದ ಪ್ರದೇಶದ ನಿವಾಸಿಗಳಿಗೆ ಸರ್ಕಾರದಿಂದ ಪರಿಹಾರ ನೀಡಬೇಕಿತ್ತು. ಸುಮಾರು 72 ಎಕರೆ ಜಮೀನು ಹಸ್ತಾಂತರವಾಗಿದ್ದು, 20 ವರ್ಷಗಳ ಹಿಂದೆಯೇ ಜಾಗ ಹಸ್ತಾಂತರಿಸಲಾಗಿತ್ತು. ಜಮೀನಿನ ಮಾಲೀಕರು 12 ವರ್ಷಗಳ ಹಿಂದೆಯೇ ಕೋರ್ಟ್ ಮೆಟ್ಟಿಲೇರಿದ್ದರು. 10 ವರ್ಷದ ಹಿಂದೆಯೇ ಇವರಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ‌ ನೀಡಿತ್ತು. 10 ವರ್ಷ ಕಳೆದರೂ ಪರಿಹಾರ ನೀಡದ ಹಿನ್ನಲೆಯಲ್ಲಿ ಇದೀಗ ಮೈಸೂರು ಸಿಜೆಎಂ ನ್ಯಾಯಾಲಯ ‌ಜಪ್ತಿಗೆ ಆದೇಶ ನೀಡಿದೆ.

Court Ordered To Raid AC DC Car For Not Giving Compensation To Farmers In Mysuru

ಕೋರ್ಟ್ ಅಧಿಕಾರಿ ಅಮಿನ್ ಜೊತೆ ಜಮೀನು ಮಾಲೀಕರು, ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದಾರೆ. ಡಿಸಿ ಮತ್ತು ಎಸಿ ಕಚೇರಿಯ ಪೀಠೋಪಕರಣ ಜಪ್ತಿಗೆ ಅಧಿಕಾರಿಗಳು ಮುಂದಾಗಿದ್ದು, ಎಸಿ ಡಾ.ವೆಂಕಟರಾಜು ಒಂದು ವಾರದ ಕಾಲ ಗಡುವು ಕೇಳಿದ್ದಾರೆ. ಕೋರ್ಟ್ ಆದೇಶ ಪಾಲಿಸುವಂತೆ ಎಸಿಗೆ ಕೋರ್ಟ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

English summary
Mysore CJM court has ordered to raid cars and furnitures of DC and AC in the wake of the failure to compensate farmers in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X