ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸತತ 6 ಗಂಟೆಗಳ ಕಾಲ ಪೊಲೀಸರ ಕಸ್ಟಡಿಯಲ್ಲಿದ್ದ ಸಂಸದ ಪ್ರತಾಪ್ ಸಿಂಹ

|
Google Oneindia Kannada News

ಮೈಸೂರು, ಮಾರ್ಚ್ 9: ನಟ ಪ್ರಕಾಶ್ ರಾಜ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರೆಂಟ್ ರೀಕಾಲ್ ಗೆ ಹಾಜರಾಗಿದ್ದ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಟ್ವಿಟ್ಟರ್ ಮೂಲಕ ನಟ ಪ್ರಕಾಶ್ ರೈ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪ ಸಂಸದ ಪ್ರತಾಪ್ ಸಿಂಹ ಅವರ ಮೇಲಿದೆ. ಈ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರೈ ಅವರು ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದರು.

ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಅನೇಕ ಬಾರಿ ನ್ಯಾಯಾಲಯದಿಂದ ಸಮನ್ಸ್ ಜಾರಿಗೊಳಿಸಿದರೂ ಪ್ರತಾಪ್ ಸಿಂಹ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಅವರ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಲಾಗಿತ್ತು.

Court grants bail to MP Pratapsimha at Prakash rai defamation case

ಸಮನ್ಸ್ ಕೊಟ್ಟರೂ ಹಾಜರಾಗದ ಸಂಸದ ಪ್ರತಾಪ್ ಸಿಂಹ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿದೆ. ಶುಕ್ರವಾರ ಬೆಳಗ್ಗೆ 11.30ಕ್ಕೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಪ್ರತಾಪ್ ಸಿಂಹ ಅವರನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡರು.

ಸಂಜೆ 5.50ರವರೆಗೆ ನ್ಯಾಯಾಲಯದಲ್ಲೇ ಕಾಯಿಸಿ, ವಿಚಾರಣೆಯನ್ನು ಮಾ.19ಕ್ಕೆ ಮುಂದೂಡಿದ್ದಾರೆ. ಅಲ್ಲದೇ ನ್ಯಾಯಾಲಯಕ್ಕೆ ಹಾಜರಾಗಿದ್ದರೂ ಮಧ್ಯಾಹ್ನದವರೆಗೂ ಅವರನ್ನು ನ್ಯಾಯಾಲಯದ ಆವರಣದಲ್ಲಿ ಉಳಿಸಿಕೊಂಡ ನ್ಯಾಯಾಧೀಶರು ನಂತರ ಜಾಮೀನು ನೀಡಿದರು.

 ಸಂಸದ ಪ್ರತಾಪ್ ಸಿಂಹ ಕಸ್ಟಡಿ ಪಡೆದ ಜನಪ್ರತಿನಿಧಿಗಳ ಕೋರ್ಟ್ ಸಂಸದ ಪ್ರತಾಪ್ ಸಿಂಹ ಕಸ್ಟಡಿ ಪಡೆದ ಜನಪ್ರತಿನಿಧಿಗಳ ಕೋರ್ಟ್

10 ಸಾವಿರ ನಗದು ಭದ್ರತೆಯೊಂದಿಗೆ ಜಾಮೀನು ನೀಡಲಾಗಿದ್ದು, ವಾರಂಟ್ ಹಿಂಪಡೆಯಲು 100 ರೂ. ಕೋರ್ಟ್‌ ವೆಚ್ಚ ಭರಿಸುವಂತೆ ಆದೇಶ ಸಹ ನೀಡಲಾಯಿತು.

English summary
BJP MP Pratap Simha had to stay for about six hours in a Special Court on Friday,He get bail in a criminal defamation case filed by actor Prakash Raj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X