ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ವಕೀಲರಿಗೆ ಸೋಂಕು; 2 ದಿನ ಕೋರ್ಟ್ ಬಾಗಿಲು ಬಂದ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 8: ಮೈಸೂರಿನಲ್ಲಿ ಕೊರೊನಾ ವೈರಸ್ ವಕೀಲರಲ್ಲೂ ಕಾಣಿಸಿಕೊಂಡಿದೆ. ಓರ್ವ ವಕೀಲರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಎರಡು ದಿನ ಕೋರ್ಟ್ ಕಾರ್ಯ ಕಲಾಪಕ್ಕೆ ಬ್ರೇಕ್ ಬಿದ್ದಿದೆ.

ಈ ಕುರಿತು ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಮಾಹಿತಿ ನೀಡಿದ್ದು, ವಕೀಲರ ಸಂಘದ ಓರ್ವರು ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಇಂದು ಮತ್ತೆ ನಾಳೆ ಎರಡು ದಿನಗಳು ಹೊಸ ಮತ್ತು ಹಳೆಯ ಕಟ್ಟಡದ ಎಲ್ಲಾ ಕೋರ್ಟುಗಳ ಕಾರ್ಯಕಲಾಪಗಳು ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್ ಅಬ್ಬರ: ಮೈಸೂರಿನಲ್ಲಿ 49 ಕೇಸ್ ದೃಢ, ಚಿಕ್ಕಮಗಳೂರಿನಲ್ಲಿ 1 ಸಾವುಕೊರೊನಾ ವೈರಸ್ ಅಬ್ಬರ: ಮೈಸೂರಿನಲ್ಲಿ 49 ಕೇಸ್ ದೃಢ, ಚಿಕ್ಕಮಗಳೂರಿನಲ್ಲಿ 1 ಸಾವು

Mysuru Court Closed For 2 Days Due To Coronavirus Confirmed In Lawyer

ಎರಡು ಕೋರ್ಟ್ ಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಮೈಸೂರು ಡಿಎಚ್ಒ ಅವರಿಂದ ಹಾಗೂ ಪ್ರಧಾನ ಮತ್ತು ಜಿಲ್ಲಾ ನ್ಯಾಯಾಧೀಶರಿಂದ ಮಾಹಿತಿ ಬಂದಿದೆ. ಎಲ್ಲಾ ವಕೀಲರು ಮತ್ತು ಸಾರ್ವಜನಿಕರಿಗೆ ಕೋರ್ಟುಗಳಿಗೆ ಯಾರು ಬರಬಾರದು ಎಂದು ವಿನಂತಿಸಿಕೊಳ್ಳುತ್ತೇನೆ. ಸಂಬಂಧಪಟ್ಟ ಕೇಸುಗಳನ್ನು ಮುಂದೂಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

English summary
Coronavirus confirmed in lawyer at Mysuru. So court has been closed two days,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X