ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದತ್ತು ಸ್ವೀಕಾರ ಸಮಾರಂಭಕ್ಕೆ ಸಜ್ಜಾಗಿದೆ ಮೈಸೂರು ಅರಮನೆ

|
Google Oneindia Kannada News

ಮೈಸೂರು, ಫೆ. 21 : ಯದುವೀರ್ ಗೋಪಾಲ್ ರಾಜೇ ಅರಸ್ ದತ್ತು ಸ್ವೀಕಾರ ಸಮಾರಂಭಕ್ಕೆ ಮೈಸೂರು ಸಿದ್ಧವಾಗುತ್ತಿದೆ. ಸೋಮವಾರ ಮಧ್ಯಾಹ್ನ 1.20ರಿಂದ 1.50ರ ಮಿಥುನ ಲಗ್ನದಲ್ಲಿ ದತ್ತು ಸ್ವೀಕಾರ ಸಮಾರಂಭ ನಡೆಯಲಿದ್ದು, ಸಂಜೆ ಮಹಾರಾಜರ ಮೆರವಣಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಅರಮನೆಯ ಕಲ್ಯಾಣ ಮಂಟಪದಲ್ಲಿ ದತ್ತು ಸ್ವೀಕಾರ ಸಮಾರಂಭ ನಡೆಯಲಿದೆ. ಸೋಮವಾರ ಮುಂಜಾನೆ 5.30ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ದತ್ತು ಸ್ವೀಕಾರ ಸಮಾರಂಭ ಮಧ್ಯಾಹ್ನ 1.20ರಿಂದ 1.52ರ ವರೆಗೆ ನಡೆಯಲಿದ್ದು, ಆಹ್ವಾನಿತರು ಮಧ್ಯಾಹ್ನ 12.45ಕ್ಕೆ ಸ್ಥಳದಲ್ಲಿ ಹಾಜರಿರುವಂತೆ ಆಹ್ವಾನ ಪತ್ರಿಕೆಯಲ್ಲಿ ಮನವಿ ಮಾಡಲಾಗಿದೆ.[ಯದುವೀರ ಅರಸ್ ಪರಿಚಯ ಓದಿ]

Amba Vilas Palace

ಶೃಂಗೇರಿ, ನಂಜನಗೂಡು, ಚಾಮುಂಡಿ ಬೆಟ್ಟ, ಮೇಲುಕೋಟೆ, ಉತ್ತನಹಳ್ಳಿ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿನ ಪ್ರಸಾದ ಅರಮನೆ ತಲುಪಿದ ನಂತರ ದತ್ತು ಸ್ವೀಕಾರ ಸಮಾರಂಭ ನಡೆಯಲಿದೆ. 300 ಜನರಿಗೆ ಮಾತ್ರ ದತ್ತು ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ.[ಮೈಸೂರಿಗರಿಗೆ ಯದುವೀರ ಅರಸ್ ಕೃತಜ್ಞತೆ]

ದತ್ತು ಸ್ವೀಕಾರ ಸಮಾರಂಭದ ನಂತರ ಅತಿಥಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಸಂಜೆ 5 ಗಂಟೆಯ ನಂತರ ಅತಿಥಿಗಳಿಗೆ ದತ್ತು ಪುತ್ರನ ಪರಿಚಯ ಹಾಗೂ 6 ಗಂಟೆಗೆ ಅರಮನೆ ಭಾಗದಲ್ಲಿ ದತ್ತು ಪುತ್ರನ ಮೆರವಣಿಗೆ ಕಾರ್ಯಕ್ರಮಗಳು ನಡೆಯಲಿವೆ. [ಯದು ವಂಶದ ಉತ್ತರಾಧಿಕಾರಿ ವಿವಾದದ ನೆನೆಪುಗಳು]

ಮರು ನಾಮಕರಣ : ದತ್ತು ಸ್ವೀಕಾರ ಸಮಾರಂಭದ ಬಳಿಕ ಯದುವೀರ್ ಗೋಪಾಲ್ ರಾಜೇ ಅರಸ್ ಅವರ ಹೆಸರನ್ನು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಎಂದು ಮರುನಾಮಕರಣ ಮಾಡಲಾಗುತ್ತದೆ.

ವಸ್ತ್ರ ಸಂಹಿತೆ : ದತ್ತು ಸ್ವೀಕಾರ ಸಮಾರಂಭಕ್ಕೆ ಆಗಮಿಸುವ ಅತಿಥಿಗಳಿಗೆ ವಸ್ತ್ರ ಸಂಹಿತೆ ಇದೆ. ಆಹ್ವಾನ ಪತ್ರಿಕೆಯಲ್ಲಿ ಈ ಕುರಿತ ವಿವರಗಳನ್ನು ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಅರಮನೆಯ ಹಿತೈಷಿಗಳಿಗೆ ಆಹ್ವಾನ ಪತ್ರಿಕೆ ರವಾನಿಸಲಾಗಿದೆ ಎಂದು ಅರಮನೆ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ ಅವರು ಹೇಳಿದ್ದಾರೆ.

ಅರಮನೆ ಪ್ರವೇಶ ನಿಷಿದ್ಧ : ದತ್ತು ಸ್ವೀಕಾರ ಸಮಾರಂಭ ನಡೆಯುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಫೆ. 22ರ ಮಧ್ಯಾಹ್ನ 1.30ರಿಂದಲೇ ಸಾರ್ವಜನಿಕರು ಅರಮನೆ ಪ್ರವೇಶಿಸುವಂತಿಲ್ಲ. ಎರಡೂ ದಿನ ಸಂಜೆ ವಿದ್ಯುತ್ ದೀಪಾಲಂಕಾರ ಇರಲಿದ್ದು, ಅದರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

English summary
Countdown begins for the adoption ceremony of Yaduveer Gopal Raj Urs of the Mysuru royal family. Preparations are on in full swing for the event to be held at the Amba Vilas Palace on Monday, February 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X