ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮಹಾನಗರ ಪಾಲಿಕೆ ಸದಸ್ಯನ ಮೇಲೆ ಹಲ್ಲೆಗೆ ಯತ್ನ: ದೂರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 10 : ಮೈಸೂರು ನಗರಪಾಲಿಕೆ ಸದಸ್ಯನ ಮೇಲೆ ಹಲ್ಲೆಗೆ ಯತ್ನ ನಡೆಸಿದ ಘಟನೆ ಮೈಸೂರಿನ ಅರಸು ರಸ್ತೆಯಲ್ಲಿ ಜರುಗಿದೆ.

ತ್ರಿಪುರ ಭೈರವಿ ಮಠದ ಆಸ್ತಿಗೆ ಬಾಬುಲಾಲ್ ಕಾಂಪೌಂಡ್ ನಿರ್ಮಿಸಿದ್ದು, ಮಹಾನಗರ ಪಾಲಿಕೆ ಸದಸ್ಯರು ತೆರವುಗೊಳಿಸಿದ್ದಾರೆ. ಈ ಹಿನ್ನೆಲೆ ಗುರುವಾರ ರಾತ್ರಿ ಬಾಬುಲಾಲ್ ಹಾಗೂ ಬೂಡಾರಾಮ್ ಕುಟುಂಬ ಪಾಲಿಕೆ ಸದಸ್ಯ ಪ್ರಶಾಂತ್ ಗೌಡರ ನಡುವೆ ಮಾತಿನ ಚಕುಮಕಿ ನಡೆದಿದ್ದು, ಪಶಾಂತ್ ಅವರ ವಿರುದ್ಧ ಕೊಲೆಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಾಗು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇನ್ನು ಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರವನ್ನು ಮಾಡಿದ್ದಾರೆ.

Corporator Prashant Gowda roughed up by a group of men

ಕೊಲೆ ಬೆದರಿಕೆ ಹಾಕಿರುವ ಪರಿಣಾಮ ಪ್ರಶಾಂತ್ ಗೌಡ ದೇವರಾಜ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ಬಂಧನಕ್ಕೆ ಒತ್ತಾಯ
ಮೈಸೂರು ಜಿಲ್ಲಾ ಒಕ್ಕಳಿಗರ ಯುವ ವೇದಿಕೆ ಮೈಸೂರು ಮಹಾ ನಗರಪಾಲಿಕ ಸದಸ್ಯ ಪ್ರಶಾಂತಗೌಡ ಮೇಲಿನ ಹಲ್ಲೆ ಯತ್ನವನ್ನು ಖಂಡಿದ್ದು ಆರೋಪಿಗಳನ್ನು ಬಂಧಿಸಿಲು ಒತ್ತಾಯಿಸಿದ್ದಾರೆ.

Corporator Prashant Gowda roughed up by a group of men

ಈ ಸಂಬಂಧ ವೇದಿಕೆಯ ರಾಜಕುಮಾರ್ ಮಾತನಾಡಿ, ಸಮಾಜ ಸೇವೆಯಲ್ಲಿ ತೊಡಗಿರುವವರ ಮೇಲೆ ಹಲ್ಲೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರಲ್ಲದೇ ಅವರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಒತ್ತಾಯಿಸಿದರು. ಹಲ್ಲೆ ಯತ್ನ ನಡೆಸಿದವರನ್ನು ಕೂಡಲೇ ಬಂಧಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದರು.

ಇನ್ನು ಮೈಸೂರಿನ ಭೈರವಿ ಮಠಕ್ಕೆ ಸೇರಿರುವ ಆಂಜನೇಯಸ್ವಾಮಿ ದೇಗುಲಕ್ಕೆ ಪಾಲಿಕೆ ಸದಸ್ಯ ಪ್ರಶಾಂತ್ ಗೌಡ ಶುಕ್ರವಾರ ಭೇಟಿ ನೀಡಿದ್ದು, ಸ್ಥಳೀಯರ ಜೊತೆ ಮಾತನಾಡಿದ್ದಾರೆ. ಯಾರೋ ಒಬ್ಬರು ತಪ್ಪು ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಶಿಕ್ಷೆ ವಿಧಿಸುವುದು ತಪ್ಪು. ನೀವು ನಿಮ್ಮ ಅಂಗಡಿಗಳ ಬಾಗಿಲು ತೆರೆದು ವ್ಯಾಪಾರ ಆರಂಭಿಸಿ ಎಂದಿದ್ದಾರೆ ಎನ್ನಲಾಗಿದೆ. ವಿವಾದಿತ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

English summary
A group of men allegedly attempted to attack Mysuru City Corporation (MCC) council member Prashanth Gowda during a clearance drive on illegal land grab, in the city on Thursday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X