ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಭೆಯಲ್ಲೇ ಖಾಲಿ ಕೊಡ ಹಿಡಿದು ಪ್ರತಿಭಟಿಸಿದ ಪಾಲಿಕೆ ಸದಸ್ಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 22: ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯರೊಬ್ಬರು ಸಭೆಯಲ್ಲೇ ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ಖಾಲಿ ಕೊಡದೊಂದಿಗೆ ಬಂದ ಪಾಲಿಕೆಯ ಸದಸ್ಯ ಕುಡಿಯುವ ನೀರನ್ನು ಸರಿಯಾಗಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಘಟನೆ ಇಂದು ಪಾಲಿಕೆಯ ಸಭೆಯಲ್ಲಿ ನಡೆದಿದೆ.

ಮಾಸಲು ಬಟ್ಟೆಯ ರೈತರಿಗೆ ತೆರೆಯುವುದೇ ರಾಜಭವನದ ಭವ್ಯ ಗೇಟು?ಮಾಸಲು ಬಟ್ಟೆಯ ರೈತರಿಗೆ ತೆರೆಯುವುದೇ ರಾಜಭವನದ ಭವ್ಯ ಗೇಟು?

Recommended Video

ಕಾಂಗ್ರೆಸ್ ಹಿರಿಯ ನಾಯಕರು ಮಾಡಿದ್ದು ನೋಡಿ ಸಿದ್ದರಾಮಯ್ಯ ಶಾಕ್. | Siddaramaiah

ಮಂಗಳವಾರ ಮೈಸೂರು ಮಹಾನಗರ ಪಾಲಿಕೆಯಲ್ಲಿ ಸಾಮಾನ್ಯ ಸಭೆಯು ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆಯುತ್ತಿತ್ತು. ರಾಜ್ಯದಲ್ಲಿ ನೆರೆ ಪರಿಸ್ಥಿತಿ ‌ಇದ್ದರೂ ನಗರದಲ್ಲಿ ಕುಡಿಯುವ ‌ನೀರಿಗೆ ಜನರು ಪರದಾಡುವಂತಾಗಿದೆ. ಇದಕ್ಕೆ ಅಧಿಕಾರಿಗಳು ಸರಿಯಾಗಿ ಕೆಲಸ ‌ಮಾಡುತ್ತಿಲ್ಲ ಎಂದು ಪಾಲಿಕೆಯ ಸದಸ್ಯರು ಆಕ್ರೋಶ ವ್ಯಕ್ತಪಡಿಸುತಿದ್ದರು. ಆ ಸಂದರ್ಭದಲ್ಲಿ ಸದಸ್ಯ ಮ.ವಿ.ರಾಮ್ ಪ್ರಸಾದ್ ಅವರು ಖಾಲಿ ಕೊಡವನ್ನಿರಿಸಿಕೊಂಡು ನೀರು ನೀಡುವಂತೆ ಒತ್ತಾಯಿಸಿದರು. ನೀರಿನ ಕುರಿತು ಘೋಷಣೆ ಇರುವ ದಿರಿಸನ್ನು ಧರಿಸಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.

Corporation Member Protest With Empty Pot In Mysuru

ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಮೇಯರ್ ಪುಷ್ಪಲತಾ ಜಗನ್ನಾಥ್ ಭರವಸೆ ನೀಡಿದರು.

English summary
A corporation member has protested with empty pot in mysuru alleging that drinking water is not distributing properly in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X