ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಎಫೆಕ್ಟ್: ಪರೀಕ್ಷೆ ಇಲ್ಲದೆ ಮಕ್ಕಳನ್ನು ಪಾಸ್ ಮಾಡಲು ನಿರ್ಧಾರ

|
Google Oneindia Kannada News

ಮೈಸೂರು, ಮಾರ್ಚ್ 11: ಹಳೇ ಮೈಸೂರು ಭಾಗದ ಜಿಲ್ಲೆಗಳ ಸಿಬಿಎಸ್ಇ ಶಾಲೆಗಳಲ್ಲಿ, ಈ ಬಾರಿ ಪರೀಕ್ಷೆ ನಡೆಸದೇ ಮಕ್ಕಳನ್ನು ಪಾಸ್ ಮಾಡಲು ನಿರ್ಧಾರ ಮಾಡಲಾಗಿದೆ. ಕೊರೊನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸಿಬಿಎಸ್ಇ ಖಾಸಗಿ ಶಾಲೆಗಳ ಒಕ್ಕೂಟ ಈ ನಿರ್ಧಾರಕ್ಕೆ ಬಂದಿದೆ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಶಾಲೆಗಳ ಭಾಗದ 240 ಶಾಲೆಗಳು ಈ ನಿಯಮ ಒಪ್ಪಿಕೊಂಡಿವೆ. ಈ ಬಗ್ಗೆ ಒಕ್ಕೂಟದ ಅಧ್ಯಕ್ಷ ಸುಧಾಕರ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

SSLC ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದರೆ ಜೈಲು ಶಿಕ್ಷೆSSLC ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದರೆ ಜೈಲು ಶಿಕ್ಷೆ

ಎಲ್‌ಕೆಜಿ, ಯುಕೆಜಿ, 1, 2, 3 ಹಾಗೂ 4ನೇ ತರಗತಿ ಮಕ್ಕಳು ಪರೀಕ್ಷೆ ನಡೆಸದೆ ಮುಂದಿನ ತರಗತಿಗೆ ಉತ್ತೀರ್ಣರಾಗಲಿದ್ದಾರೆ. 5 ರಿಂದ 9ನೇ ತರಗತಿಯ ವಿಧ್ಯಾರ್ಥಿಗಳಿಗೆ ಈಗಾಗಲೇ ಪೂರ್ವ ಸಿದ್ಧತಾ ಪರೀಕ್ಷೆ ನಡೆದಿದೆ. ಹೀಗಾಗಿ, ವಾರ್ಷಿಕ ಪರೀಕ್ಷೆ ಇಲ್ಲದೆ, ಪೂರ್ವ ಸಿದ್ಧತಾ ಪರೀಕ್ಷೆಯ ಫಲಿತಾಂಶವನ್ನೇ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Coronavirus Care: No Exam For Mysore CBSE students

ಉಳಿದಂತೆ, ಪ್ರತಿ ವರ್ಷದಂತೆ ಎಸ್ಎಸ್ಎಲ್‌ಸಿ ಮಕ್ಕಳಿಗೆ ಪ್ರೌಢ ಶಿಕ್ಷಣ ಇಲಾಖೆಯ ವತಿಯಿಂದ ಪರೀಕ್ಷೆ ನಡೆಯುತ್ತದೆ. ಮಾರ್ಚ್ 27 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಶುರು ಆಗಬೇಕಿದೆ.

ಬೆಂಗಳೂರು ಕರಗಕ್ಕೆ ಕೊರೊನಾ ಭೀತಿ ಇಲ್ಲ: ಮೇಯರ್ಬೆಂಗಳೂರು ಕರಗಕ್ಕೆ ಕೊರೊನಾ ಭೀತಿ ಇಲ್ಲ: ಮೇಯರ್

ಶಾಲಾ ಮಕ್ಕಳಿಗೆ ಈಗಾಗಲೇ ರಜೆ ನೀಡಲು ಆದೇಶ ಹೊರಡಿಸಿದ್ದಾರೆ. ಕೊರೊನಾ ಭೀತಿಯಿಂದ ಬೇಸಿಗೆ ರಜೆಯಲ್ಲಿ ಸಮ್ಮರ್ ಕ್ಯಾಂಪ್ ಮಾಡಲು ಕೂಡ ಅವಕಾಶವನ್ನು ನೀಡುತ್ತಿಲ್ಲ.

English summary
Coronavirus Care: Mysore CBSE schools organization decided to not conduct exam for LKG to 4th standard student.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X