ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಹೆಚ್ಚುತ್ತಿದೆ ಹೋಂ ಐಸೊಲೇಷನ್ ಪಡೆಯುವವರ ಸಂಖ್ಯೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 16: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ತುಂಬಾ ಅಗತ್ಯವಿದ್ದರೆ ಮಾತ್ರ ಹೋಂ ಐಸೊಲೇಷನ್ ‍ಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ.

Recommended Video

3 ತಿಂಗಳ ಬಳಿಕ ತಾಯ್ನಾಡಿಗೆ ಬಂದಿಳಿದ ಕರ್ನಾಟಕದ ವಿದ್ಯಾರ್ಥಿಗಳು | Oneindia Kannada

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹೋಂ ಐಸೊಲೇಷನ್ ಪಡೆಯುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. 2-3 ದಿನಗಳ ಹಿಂದೆ ಶೇ.20ರಷ್ಟಿದ್ದ ಹೋಂ ಐಸೊಲೇಷನ್ ಪಡೆಯುವವರ ಸಂಖ್ಯೆ, ನಿನ್ನೆ ಒಂದೇ ದಿನ ಶೇ50ಕ್ಕೆ ಏರಿದೆ. ಅಲ್ಲದೇ ಹೋಂ ಐಸೊಲೇಷನ್ ಗೆ ಹೆಚ್ಚು ಅವಕಾಶ ಕೊಟ್ಟರೆ ಸೋಂಕು ಹರಡುವ ಸಾಧ್ಯತೆ ಇದೆ. ಸದ್ಯ ಮೈಸೂರಿನಲ್ಲಿ ಕೊರೊನಾ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲೆ ಚಿಕಿತ್ಸೆ ನೀಡಲಾಗುತ್ತಿದ್ದು, ಮೈಸೂರಿನಲ್ಲಿ ಸಾವಿನ ಪ್ರಮಾಣ ಕೂಡ ಹೆಚ್ಚಾಗುತ್ತಿದೆ" ಎಂದು ತಿಳಿಸಿದರು.

Coronavirus Patients Preferring Home Isolation More In Mysuru

 ಮೈಸೂರಿನಿಂದ ಈ ಜಿಲ್ಲೆಗಳಿಗೆ KSRTC ಬಸ್ ಸಂಚಾರ ರದ್ದು ಮೈಸೂರಿನಿಂದ ಈ ಜಿಲ್ಲೆಗಳಿಗೆ KSRTC ಬಸ್ ಸಂಚಾರ ರದ್ದು

ಅಲ್ಲದೇ, ಹೋಂ ಐಸೊಲೇಷನ್ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೊರೊನಾ ಸೋಂಕಿತರಿಗೆ ಎಲ್ಲಾ ವ್ಯವಸ್ಥೆ ಸರಿ ಇದ್ದು, ತೀರ ಅಗತ್ಯ ಇದ್ದರೆ ಮಾತ್ರ ಹೋಂ ಐಸೊಲೇಷನ್ ಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.

English summary
Home isolation for corona patients allowed only if necessary said Mysuru dc Abhiram G. Shankar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X