ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕೊರೊನಾ ವೈರಸ್ ಸೋಂಕು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 24: ಮೈಸೂರಿನಲ್ಲಿ ಕೊರೊನಾ ವೈರಸ್ ಪಾಸಿಟಿವ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಮುದಾಯಕ್ಕೆ ವೈರಸ್ ಹರಡಲು ಆರಂಭಿಸಿದೆ. ಮೈಸೂರಿನಲ್ಲಿ ನಿನ್ನೆ ಮತ್ತೆ 21 ಮಂದಿಗೆ ಕೊರೊನಾ ವೈರಸ್ ತಗುಲಿದ್ದು, ಸೋಂಕಿತರ ಸಂಖ್ಯೆ ಒಟ್ಟು 79 ಕ್ಕೆ ಏರಿಕೆಯಾಗಿದೆ.

Recommended Video

New Married Couples Donated 50 Beds To A Mumbai Quarantine Centre | Oneindia Kannada

29 ವರ್ಷದ ಪುರುಷ ಆರ್‌ಬಿಐ ಸಿಬ್ಬಂದಿ, 50 ವರ್ಷದ ಮಹಿಳೆ ಗಾಯತ್ರಿಪುರಂ ಪೊಲೀಸ್ ಕ್ವಾರ್ಟರ್ಸ್, 28 ವರ್ಷದ ಪುರುಷ ಕೊತ್ವಾಲ್ ರಾಮಯ್ಯ ರಸ್ತೆ ದೇವರಾಜ ಮೊಹಲ್ಲಾ, 54 ವರ್ಷದ ಪುರುಷ ರಾಜ್‌ಕುಮಾರ್ ರಸ್ತೆ, 28 ವರ್ಷದ ಪುರುಷ, 60 ವರ್ಷದ ಪುರುಷ, 53 ವರ್ಷದ ಮಹಿಳೆ, 79 ವರ್ಷದ ಮಹಿಳೆ ರಾಘವೇಂದ್ರ ಬಡಾವಣೆಯಲ್ಲಿ ಸೋಂಕು ಕಾಣಿಸಿದೆ.

ಕಾನ್ ಸ್ಟೆಬಲ್ ಗೆ ಕೊರೊನಾ ವೈರಸ್; ಮೈಸೂರಿನಲ್ಲಿ 22 ಪೊಲೀಸರಿಗೆ ಕ್ವಾರಂಟೈನ್ಕಾನ್ ಸ್ಟೆಬಲ್ ಗೆ ಕೊರೊನಾ ವೈರಸ್; ಮೈಸೂರಿನಲ್ಲಿ 22 ಪೊಲೀಸರಿಗೆ ಕ್ವಾರಂಟೈನ್

ಅದೇ ರೀತಿ 29 ವರ್ಷದ ಮಹಿಳೆ ಮಾದೇಗೌಡ ವೃತ್ತ, 23 ವರ್ಷದ ಮಹಿಳೆ ಹೂಟಗಳ್ಳಿ ಹೌಸಿಂಗ್ ಬೋರ್ಡ್ ಕಾಲೋನಿ, 8 ವರ್ಷದ ಬಾಲಕ, 10 ವರ್ಷದ ಬಾಲಕಿ ಶ್ರೀರಾಂಪುರ ಎರಡನೇ ಹಂತ, 39 ವರ್ಷದ ಮಹಿಳೆ ಆರ್‌ಬಿಐ ನೋಟ್ ಮುದ್ರಣ ನಗರ, 15 ವರ್ಷದ ಬಾಲಕಿ. 20 ವರ್ಷದ ಯುವಕ, 93 ವರ್ಷದ ವೃದ್ದ ದಟ್ಟಗಳ್ಳಿ, ಪಿ-9399 ರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ,

Coronavirus Infection Cases Increasing Day By Day In Mysuru

11 ವರ್ಷದ ಬಾಲಕ, 33 ವರ್ಷ ಮಹಿಳೆ, 38 ವರ್ಷದ ಪುರುಷ ವಿಜಯನಗರ ರೈಲ್ವೆ ಬಡಾವಣೆ, 59 ವರ್ಷದ ಪುರುಷ ಕಾನ್ಸ ಟೆಬಲ್ ಜೆ.ಸಿ ನಗರ ಮೂರನೆ ಅಡ್ಡ ರಸ್ತೆ, 32 ವರ್ಷದ ಪುರುಷ ಶಿವರಾಂಪೇಟೆ ದೇವರಾಜ ಮೊಹಲ್ಲಾ ಇವರುಗಳಿಗೆ ಕೊರೊನಾ ವೈರಸ್ ತಗುಲಿದೆ.

ಇದು ಅತ್ಯಂತ ಮಹತ್ವದ ಸಮಯವಾಗಿದ್ದು, ಸ್ವಯಂ ಸೀಲ್ ಡೌನ್, ಲಾಕ್‌ಡೌನ್ ಆಗಬೇಕಿದೆ. ಕೊರೊನಾ ವೈರಸ್ ಮಹಾಮಾರಿ ಸಾಮಾಜಿಕವಾಗಿ ಹರಡಲು ಆರಂಭಿಸಿದ್ದು, ಈಗ ಸೋಂಕು ಪತ್ತೆಯಾಗಿರುವ ಬಡಾವಣೆಯವರು ಮಾತ್ರವಲ್ಲ, ಮೈಸೂರಿನ ಎಲ್ಲಾ ನಾಗರೀಕರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

ಕೋವಿಡ್ - 19 ಪರೀಕ್ಷೆ; ಮೈಸೂರು ಜಿಲ್ಲೆಯ ಜನರಿಗೊಂದು ಮನವಿಕೋವಿಡ್ - 19 ಪರೀಕ್ಷೆ; ಮೈಸೂರು ಜಿಲ್ಲೆಯ ಜನರಿಗೊಂದು ಮನವಿ

ನಿಮಗೆ ಅಥವಾ ನಿಮ್ಮ ಅಕ್ಕಪಕ್ಕದವರಿಗೆ ಸೋಂಕಿನ ಲಕ್ಷಣಗಳಿದ್ದರೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ. ಪಾಸಿಟಿವ್ ಆದ ಬಗ್ಗೆ ಕೀಳಿರಿಮೆ ಬೇಡ. ಇದು ಮುಚ್ಚಿಡುವ ವಿಷಯವಲ್ಲ. ದಯಮಾಡಿ ಅರ್ಥ ಮಾಡಿಕೊಂಡು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಜೊತೆ ಸಹಕರಿಸಿ. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ 08212423800/1077 ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

English summary
The number of coronavirus positives in Mysore is increasing day by day. The virus is beginning to spread to the community. In Mysore, 21 people were infected with coronavirus on Tuesday, and the total number of infected people has risen to 79.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X