ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಕೋವಿಡ್ ಸೋಂಕಿತ ಆಸ್ಪತ್ರೆಯಿಂದ ನಾಪತ್ತೆ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 27: ಕೋವಿಡ್-19 ಸೋಂಕಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧರೊಬ್ಬರು ನಾಪತ್ತೆಯಾಗಿರುವ ಘಟನೆ ಮೈಸೂರು ನಗರದಲ್ಲಿ ನಡೆದಿದೆ.

Recommended Video

EMISAT ಪ್ರಕಾರ India China Border ನಲ್ಲಿ ಇನ್ನು ಬೆಂಕಿ ಆರಿಲ್ಲ | Oneindia Kannada

ಕೆಲ ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ವೃದ್ಧರೊಬ್ಬರನ್ನು ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ನಂತರ ಇವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ವರದಿಯಲ್ಲಿ ಪಾಸಿಟಿವ್ ಬಂದಿತ್ತು.

ಮೈಸೂರಿನಲ್ಲಿ ಕೊರೊನಾ ಬಂದ 30ಕ್ಕೂ ಹೆಚ್ಚು ಮಂದಿ ನಾಪತ್ತೆ?ಮೈಸೂರಿನಲ್ಲಿ ಕೊರೊನಾ ಬಂದ 30ಕ್ಕೂ ಹೆಚ್ಚು ಮಂದಿ ನಾಪತ್ತೆ?

76 ವರ್ಷ ವಯಸ್ಸಿನ ಸೋಂಕಿತ ವೃದ್ಧ ಲಷ್ಕರ್ ಮೊಹಲ್ಲಾದ ಗರಡಿಕೇರಿ ನಿವಾಸಿಯಾಗಿದ್ದು, ಸ್ಮರಣ ಶಕ್ತಿ ಕಡಿಮೆಯಿತ್ತು ಎನ್ನಲಾಗಿದೆ. ಶನಿವಾರ ಬೆಳಿಗ್ಗೆ ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಹೊರ ಬಂದು ತಪ್ಪಿಸಿಕೊಂಡಿದ್ದಾನೆ. ಈ ವೇಳೆ ಸೋಂಕಿತನ ಪುತ್ರ ವಿಜಯ್​ ಎಂಬುವವರಿಗೆ ಸ್ನೇಹಿತರೊಬ್ಬರು ನಿಮ್ಮ ತಂದೆಯನ್ನು ಪಡುವಾರಹಳ್ಳಿಯಲ್ಲಿ ನೋಡಿದೆ ಎಂದಿದ್ದು, ಅನುಮಾನಗೊಂಡ ಪುತ್ರ ವಿಜಯ್,​​ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ನಾಪತ್ತೆ ಪ್ರಕರಣ ಬೆಳಕಿಗೆ ಬಂದಿದೆ.

Coronavirus Infected Is Missing From Hospital In Mysuru

ಆತಂಕಕ್ಕೆ ಒಳಗಾದ ಪುತ್ರ ವಿಜಯ್​ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಸ್ಪತ್ರೆ ಸಿಬ್ಬಂದಿ ಮತ್ತು ಭದ್ರತಾ ಕಾರ್ಯದಲ್ಲಿದ್ದ ಪೊಲೀಸರ ನಿರ್ಲಕ್ಷ್ಯದಿಂದ ನಮ್ಮ ತಂದೆ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಎಸ್ಕೇಪ್ ಆಗಲು ಮೈಸೂರು ಡಿಸಿ ನಂಬರ್ ಕೊಟ್ಟು ಯಾಮಾರಿಸಿದ ಸೋಂಕಿತಎಸ್ಕೇಪ್ ಆಗಲು ಮೈಸೂರು ಡಿಸಿ ನಂಬರ್ ಕೊಟ್ಟು ಯಾಮಾರಿಸಿದ ಸೋಂಕಿತ

ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವೃದ್ಧನ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಹಾಗೂ ವೃದ್ಧನ ಕುರಿತು ಯಾರಿಗಾದರೂ ಮಾಹಿತಿ ಲಭ್ಯವಾದಲ್ಲಿ ಕಂಟ್ರೋಲ್‌ ರೂಂಗೆ ಕರೆ ಮಾಡುವಂತೆ ಕೋರಿದ್ದಾರೆ.

English summary
The incident occurred in Mysuru city where an elder Covid-19 Infected person was Missing From hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X