ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ನಾಗರಿಕರಿಗೆ ಡಿಸಿಪಿ ಖಡಕ್ ಎಚ್ಚರಿಕೆ; ಸಂಜೆ 6ರ ನಂತರ ಓಡಾಡಿದರೆ ಜೋಕೆ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 3: ಇಂದಿನಿಂದ ಸಂಜೆ 6 ಗಂಟೆ ನಂತರ ಅನಗತ್ಯವಾಗಿ ಹೊರಬಂದಲ್ಲಿ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಎಚ್ಚರಿಕೆ ನೀಡಿದ್ದಾರೆ.

Recommended Video

Goa opens the gates for tourists,ಗೋವಾ ಪ್ರವಾಸಿಗರಿಗೆ ಸಿಹಿಸುದ್ದಿ ನೀಡಿದ ಸರ್ಕಾರ! | Goa | Oneindia Kannada

ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ಸೋಂಕು ಹೆಚ್ಚುತ್ತಿದೆ. ಅದನ್ನು ನಿಯಂತ್ರಿಸಲು ಇಂದಿನಿಂದ ಸಂಜೆ 6 ಗಂಟೆಯಿಂದ ಕರ್ಫ್ಯೂ ಜಾರಿಗೊಳಿಸಿ ಸಾರ್ವಜನಿಕರ ಅನಗತ್ಯ ತಿರುಗಾಟಕ್ಕೆ ಕಡಿವಾಣ ಹಾಕಲಾಗಿದೆ. ಅಗತ್ಯ ಸೇವೆ ಹೊರತುಪಡಿಸಿ ಮನೆಯಲ್ಲೇ ಸಾರ್ವಜನಿಕರು ಸೇಫ್ ಆಗಿರಬೇಕು. 6 ಗಂಟೆಗೆ ಅಂಗಡಿ ಮುಂಗಟ್ಟು ಮುಚ್ಚಲು ಸೂಚನೆ ನೀಡವಾಗಿದೆ ಎಂದು ಹೇಳಿದರು.

 ಇಂದಿನಿಂದ ಸಂಜೆ 6 ಗಂಟೆ ಬಳಿಕ ಕರ್ಫ್ಯೂ ಜಾರಿ

ಇಂದಿನಿಂದ ಸಂಜೆ 6 ಗಂಟೆ ಬಳಿಕ ಕರ್ಫ್ಯೂ ಜಾರಿ

ಇಂದಿನಿಂದ ಮೈಸೂರಿನಲ್ಲಿ ಸಂಜೆ 6ಗಂಟೆಯ ಬಳಿಕ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ಸೇವೆ, ತುರ್ತು ಆರೋಗ್ಯ ಸೇವೆ, ಮೆಡಿಕಲ್ ಸ್ಟೋರ್ ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 6 ಗಂಟೆ ಬಳಿಕ ಯಾವುದೇ ವಾಣಿಜ್ಯ ವಹಿವಾಟುಗಳು ನಡೆಯುವುದಿಲ್ಲ. ರಾಜ್ಯ ಸರ್ಕಾರದ ಮುಂದಿನ ಆದೇಶ ಬರುವವರೆಗೂ ಈ ನಿಯಮ ಜಾರಿಯಲ್ಲಿರುತ್ತದೆ. ಈಗಾಗಲೇ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ವಿರುದ್ಧ 44 ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

"ಮೈಸೂರಿನಲ್ಲಿ ಹೆಚ್ಚುತ್ತಿವೆ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು''

 ಪೊಲೀಸ್ ಠಾಣೆಗಳಿಗೆ ಪ್ರವೇಶವಿಲ್ಲ

ಪೊಲೀಸ್ ಠಾಣೆಗಳಿಗೆ ಪ್ರವೇಶವಿಲ್ಲ

ಇನ್ನು ಮುಂದೆ ನಗರ ಪೊಲೀಸ್ ಠಾಣೆಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಠಾಣೆಯ ಮುಂದೆ ಇರುವ ಹೆಲ್ಪ್ ಡೆಸ್ಕ್ ನಲ್ಲಿ ಒಬ್ಬರಿಗೆ ಮಾತ್ರ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

 ನಗರ ಪ್ರದೇಶದಲ್ಲಿ 28 ಕಂಟೈನ್ ಮೆಂಟ್ ಝೋನ್

ನಗರ ಪ್ರದೇಶದಲ್ಲಿ 28 ಕಂಟೈನ್ ಮೆಂಟ್ ಝೋನ್

ನಗರಪ್ರದೇಶದಲ್ಲಿ 28 ಕಂಟೈನ್ ಮೆಂಟ್ ಝೋನ್ ಇದೆ. ಎಲ್ಲ ಝೋನ್ ಗಳಲ್ಲೂ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಹಗಲು ಹೊತ್ತಿನಲ್ಲಿ ಅವರು ಕಾರ್ಯ ನಿರ್ವಹಿಸಲಿದ್ದು, ರಾತ್ರಿ ವೇಳೆ ಬೀಟ್ ಪೊಲೀಸರು ತೆರಳಿ ಕರ್ತವ್ಯ ನಿರ್ವಹಿಸುತ್ತಾರೆ. ಕಂಟೈನ್ ಮೆಂಟ್ ಝೋನ್ ಇರುವಲ್ಲಿಂದ ಅನವಶ್ಯಕವಾಗಿ ಹೊರಗೆ ಹೋಗುವುದು ಕಂಡುಬಂದಲ್ಲಿ ಅವರ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ. ಅಲ್ಲಿನ ನಾಗರಿಕರಿಗೆ ಮೊದಲೇ ಅನವಶ್ಯಕ ತಿರುಗಾಡಬಾರದು ಎಂದು ಸೂಚನೆ ನೀಡಿದ್ದೇವೆ ಎಂದರು.

ಆಷಾಢ ಶುಕ್ರವಾರದಲ್ಲಿ ಭಕ್ತರಿಲ್ಲದೆ ಬಣಗುಡುತ್ತಿದೆ ಚಾಮುಂಡಿ ಬೆಟ್ಟಆಷಾಢ ಶುಕ್ರವಾರದಲ್ಲಿ ಭಕ್ತರಿಲ್ಲದೆ ಬಣಗುಡುತ್ತಿದೆ ಚಾಮುಂಡಿ ಬೆಟ್ಟ

 ಮೈಸೂರಿನಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇಲ್ಲ

ಮೈಸೂರಿನಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇಲ್ಲ

ಎಲ್ಲ ಠಾಣಾಧಿಕಾರಿಗಳು, ಎಸಿಪಿಗಳು ಮಾಸ್ಕ್ ಧರಿಸದೇ ಬರುವವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಿದ್ದೇವೆ. ಮಾಸ್ಕ್ ಧರಿಸದೇ ಹೊರಬಂದಲ್ಲಿ ದಂಡ ವಿಧಿಸಲಾಗುವುದು ಎಂದರು. ಮೈಸೂರಿನಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇಲ್ಲ. 55 ವರ್ಷ ಮೇಲ್ಪಟ್ಟ ಪೊಲೀಸರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಅಂತಹವರನ್ನು ಕೊರೊನಾ ಸೇವೆಗೆ ಬಳಸಿಕೊಳ್ಳುತ್ತಿಲ್ಲ. ಈಗಾಗಲೇ ಗೃಹರಕ್ಷಕ ಸಿಬ್ಬಂದಿ ಕಂಟೈನ್ಮೆಂಟ್ ಜೋನ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಗತ್ಯ ಬಿದ್ದರೆ ಸ್ವಯಂ ಸೇವಾ ಕಾರ್ಯಕರ್ತರನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದರು.

English summary
DCP Dr AN Prakash Gowda has warned that, a criminal case will be filed if people came out unnecessary after 6 pm
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X