ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಅರಮನೆಗೂ ತಟ್ಟಿತು ಕೊರೊನಾ ವೈರಸ್ ಭೀತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 10: ಮೈಸೂರಿನಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಖ್ಯಾತ ಪ್ರವಾಸಿ ತಾಣ ಮೈಸೂರು ಅರಮನೆಗೂ ಕೊರೊನಾ ವೈರಸ್ ಭೀತಿ ಆವರಿಸಿದೆ.

ಇಂದು ಸಂಪೂರ್ಣ ಅರಮನೆಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಅರಮನೆ ಬ್ರಹ್ಮಪುರಿ ದ್ವಾರದ ಬಳಿಯ ಕ್ವಾಟ್ರಸ್ ನಲ್ಲಿ ನೆಲೆಸಿ ಒಂಟೆ ಉಸ್ತುವಾರಿ ನೋಡಿಕೊಳ್ಳುತ್ತಿರವ ವ್ಯಕ್ತಿಯ ಪುತ್ರನಿಗೆ ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ.

Mysuru: Coronavirus Fear In The Palace

ಮೈಸೂರಿನಲ್ಲಿ ವಕೀಲರಿಗೆ ಸೋಂಕು; 2 ದಿನ ಕೋರ್ಟ್ ಬಾಗಿಲು ಬಂದ್ಮೈಸೂರಿನಲ್ಲಿ ವಕೀಲರಿಗೆ ಸೋಂಕು; 2 ದಿನ ಕೋರ್ಟ್ ಬಾಗಿಲು ಬಂದ್

ಇಂದು ಅರಮನೆಯ ಆವರಣ ಮತ್ತು ಅರಮನೆಯ ಒಳಾಂಗಣವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿ ಇಂದು ಸಾರ್ವಜನಿಕರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

Mysuru: Coronavirus Fear In The Palace

ಕೊರೊನಾ ವೈರಸ್ ಸೋಂಕಿತನ ಸಂಪರ್ಕದಲ್ಲಿ ಇದ್ದ ವ್ಯಕ್ತಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ಕೂಡ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧವಿದೆ. ಅರಮನೆಯ ಆಡಳಿತ ಮಂಡಳಿಯ ಕಚೇರಿಯೊಳಗೆ ಸ್ಯಾನಿಟೈಸ್ ಮಾಡಲಾಗಿದೆ.

English summary
Covid-19 cases in Mysore are increasing day by day and the interior of the palace is being sanitized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X