ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಸಾರಿಗೆ ಸಂಸ್ಥೆ ವಿಭಾಗಕ್ಕೆ ನಷ್ಟ ತಂದಿತ್ತ ಕೊರೊನಾ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 25: ಕೊರೊನಾವೈರಸ್ ನ ತೀವ್ರತೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಮತ್ತು ಸರ್ಕಾರ ನಿರ್ಬಂಧಗಳನ್ನು ಹೇರಿದ್ದರಿಂದ, ಕೆಎಸ್ಆರ್ಟಿಸಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ.

ಇದು ಸಾರ್ವಜನಿಕರಿಗೆ ತಾತ್ಕಾಲಿಕ ತೊಂದರೆ ಮತ್ತು ಶಾಶ್ವತವಾಗಿ ಅನುಕೂಲವಾದರೂ ಕೂಡ, ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮವು ಲಾಕ್‌ ಔಟ್‌ ಹಿನ್ನೆಲೆಯಲ್ಲಿ ದೊಡ್ಡ ನಷ್ಟವನ್ನು ಭರಿಸಬೇಕಾಗಿದೆ.

ಮೈಸೂರು ಸಂಪೂರ್ಣ ಲಾಕ್‌ ಔಟ್‌; ಏನಿದೆ, ಏನೇನಿಲ್ಲ?ಮೈಸೂರು ಸಂಪೂರ್ಣ ಲಾಕ್‌ ಔಟ್‌; ಏನಿದೆ, ಏನೇನಿಲ್ಲ?

ರಾಜ್ಯದ ಪ್ರತಿಯೊಂದು ಮೂಲೆಯನ್ನು ಸಂಪರ್ಕಿಸಲು ಮೈಸೂರು ನಗರ ವಿಭಾಗವು 458 ಬಸ್‌ಗಳನ್ನು ಓಡಿಸುತ್ತದೆ. ಈ ವಿಭಾಗದಲ್ಲಿ ಒಂದೇ ದಿನದಲ್ಲಿ ಸರಾಸರಿ 30 ಲಕ್ಷ ರೂ. ನಷ್ಟವಾಗುತ್ತಿದೆ. ಮುಂದಿನ ಏಪ್ರಿಲ್‌ 14 ರ ವರೆಗೆ ಆಗುವ ನಷ್ಟ ಸುಮಾರು 8 ಕೋಟಿ ರುಪಾಯಿಗಳಿಗೂ ಅಧಿಕ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Coronavirus Effect: Crore Of Loss To Mysuru Transport Division

""ಕೊರೊನಾ ವೈರಸ್ ಹರಡಿದಾಗಿನಿಂದ, ಪ್ರಯಾಣಿಕರಿಗೆ ಅಪಾಯವಿದೆ ಎಂದು ನಾವು ಪ್ರತೀ ಬಸ್ಸನ್ನೂ ಸ್ವಚ್ಚ ಗೊಳಿಸುತ್ತಿದ್ದೇವೆ. ಆಸನಗಳು, ಬಾಗಿಲು ಹಿಡಿಕೆಗಳು ಮತ್ತು ಇತರ ಸ್ಥಳಗಳಲ್ಲಿ ಸೋಂಕು ನಿವಾರಕವನ್ನು ಬಳಸಲಾಗಿದೆ'' ಎಂದು ಕೆಎಸ್ಆರ್ಟಿಸಿ ನಗರ ವಿಭಾಗೀಯ ನಿಯಂತ್ರಕ, ಮೈಸೂರು ವಿಭಾಗದ ಎಸ್‌ಪಿ ನಾಗರಾಜ್ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಆದರೆ, ಸಂಸ್ಥೆಯ ಗ್ರಾಮೀಣ ವಿಭಾಗವು ದಿನಕ್ಕೆ 80 ಲಕ್ಷ ರೂಪಾಯಿಗಳಿಗೂ ಅಧಿಕ ನಷ್ಟ ಅನುಭವಿಸುತ್ತಿದೆ ."ನಾವು ಗ್ರಾಮೀಣ ವಿಭಾಗದಿಂದ ಅಂತರ ರಾಜ್ಯಗಳ ನಡುವೆ ಬಸ್ಸುಗಳನ್ನು ಓಡಿಸುತ್ತೇವೆ. 700 ಬಸ್‌ಗಳಿವೆ ಎಂದು ಮೈಸೂರು ವಿಭಾಗದ ವಿಭಾಗೀಯ ನಿಯಂತ್ರಕ ಅಶೋಕ್ ಕುಮಾರ್ ಹೇಳಿದರು. ಗ್ರಾಮೀಣ ವಿಭಾಗವು 20 ಕೋಟಿ ರೂಪಾಯಿಗಳಿಗೂ ಹೆಚ್ಚಿನ ನಷ್ಟ ಅನುಭವಿಸಲಿದೆ'' ಎಂದು ಅವರು ಹೇಳಿದರು.

ಮಾರ್ಚ್ 31ರ ತನಕ ಹೊರ ರಾಜ್ಯಗಳಿಗೆ ಕೆಎಸ್ಆರ್‌ಟಿಸಿ ಬಸ್ ಇಲ್ಲಮಾರ್ಚ್ 31ರ ತನಕ ಹೊರ ರಾಜ್ಯಗಳಿಗೆ ಕೆಎಸ್ಆರ್‌ಟಿಸಿ ಬಸ್ ಇಲ್ಲ

ಆದಾಗ್ಯೂ, ಈಗ ಸೋಂಕು ನಿವಾರಕಗಳೊಂದಿಗೆ ಬಸ್ಸುಗಳು ಮತ್ತು ಡಿಪೋಗಳನ್ನು ಸ್ವಚ್ಛಗೊಳಿಸಲು ವಿಭಾಗವು ಹೆಚ್ಚಿನ ಕಾಳಜಿ ವಹಿಸಿದೆ ಎಂದು ಅವರು ಹೇಳಿದರು.

English summary
Mysuru City Division operates 458 buses. Rs 30 lakhs Loss per Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X