ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸಾವಿನ ಸಂಖ್ಯೆ: ರಾಜಧಾನಿ ಬೆಂಗಳೂರನ್ನು ಮೀರಿಸುತ್ತಿರುವ ರಾಜ್ಯದ ಈ ನಗರ

|
Google Oneindia Kannada News

ಮೈಸೂರು, ಜೂನ್ 16: ಕೊರೊನಾ ಎರಡನೇ ಅಲೆಯ ಆರ್ಭಟ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ. ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಜೊತೆಗೆ, ಮೃತ ಪಡುತ್ತಿರುವವರ ಸಂಖ್ಯೆಯೂ ಇಳಿಮುಖವಾಗುತ್ತಿದೆ.

ಹನ್ನೊಂದು ಜಿಲ್ಲೆಗಳನ್ನು ಹೊರತು ಪಡಿಸಿ ರಾಜ್ಯವನ್ನು ಅನ್ ಲಾಕ್ - 1 ಮಾಡಿರುವುದರಿಂದ ಜನಜೀವನ ಮತ್ತು ವಾಣಿಜ್ಯ ಚಟುವಟಿಕೆಗಳು ನಿಧಾನವಾಗಿ ಸರಿದಾರಿಗೆ ಬರುತ್ತಿದೆ. ಮುಂದಿನ ವಾರ ಇನ್ನಷ್ಟು ಸಡಿಲಿಕೆ ಸಿಗುವ ಸಾಧ್ಯತೆಯಿದೆ.

ಫಸ್ಟ್ ಡೋಸ್ ಕೋವಿಶೀಲ್ಡ್, 2ನೇ ಡೋಸ್ ಕೊವ್ಯಾಕ್ಸಿನ್: ಅಪಾಯವೇ? ಸರಕಾರದ ಸ್ಪಷ್ಟನೆಫಸ್ಟ್ ಡೋಸ್ ಕೋವಿಶೀಲ್ಡ್, 2ನೇ ಡೋಸ್ ಕೊವ್ಯಾಕ್ಸಿನ್: ಅಪಾಯವೇ? ಸರಕಾರದ ಸ್ಪಷ್ಟನೆ

ಇನ್ನು, ಒಟ್ಟಾರೆಯಾಗಿ ದೇಶದಲ್ಲೂ ಕೊರೊನಾ ಹೊಸ ಸೋಂಕಿತರ ಸಂಖ್ಯೆ 62ಸಾವಿರದ ಆಸುಪಾಸಿಗೆ ಬಂದು ನಿಂತಿದೆ. ಮಂಗಳವಾರ (ಜೂನ್ 15) ಒಂದೇ ದಿನ 1.07ಲಕ್ಷ ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ನೆಮ್ಮದಿಯ ವಿಚಾರ.

 ಕೊರೊನಾದಿಂದ ಚೇತರಿಸಿಕೊಂಡಿದ್ದ ವ್ಯಕ್ತಿಯಲ್ಲಿ ಕೊರೊನಾದಿಂದ ಚೇತರಿಸಿಕೊಂಡಿದ್ದ ವ್ಯಕ್ತಿಯಲ್ಲಿ "ಹಸಿರು ಶಿಲೀಂಧ್ರ" ಪತ್ತೆ

ರಾಜ್ಯದಲ್ಲಿ ಸಾವಿನ ಸಂಖ್ಯೆ ಸತತವಾಗಿ 130ರೊಳಗೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಒಂದು ವಾರದ ಹಿಂದೆ ಐವತ್ತರ ಸಂಖ್ಯೆಯಲ್ಲಿದ್ದ ಸಾವಿನ ಪ್ರಮಾಣ ಈಗ ಇಪ್ಪತ್ತರ ಕೆಳಗೆಯಿದೆ. ಆದರೆ, ಬೆಂಗಳೂರಿಗಿಂತಲೂ ಹೆಚ್ಚು ಸಾವು ಸಾಂಸ್ಕೃತಿಕ ನಗರಿಯಲ್ಲಿ ವರದಿಯಾಗುತ್ತಿದೆ.

 ಬಿಬಿಎಂಪಿ ಆಯುಕ್ತರು ಈ ಹಿಂದೆ ಹೇಳಿದಂತೆ, ಹಳೆಯ ಸಾವಿನ ಸಂಖ್ಯೆ ಸೇರ್ಪಡೆ?

ಬಿಬಿಎಂಪಿ ಆಯುಕ್ತರು ಈ ಹಿಂದೆ ಹೇಳಿದಂತೆ, ಹಳೆಯ ಸಾವಿನ ಸಂಖ್ಯೆ ಸೇರ್ಪಡೆ?

ಸತತವಾಗಿ ಕಳೆದ ಮೂರು ದಿನಗಳಿಂದ ಬೆಂಗಳೂರಿಗಿಂತಲೂ ಹೆಚ್ಚು ಸಾವು ಮೈಸೂರಿನಲ್ಲಿ ವರದಿಯಾಗುತ್ತಿದೆ. ಹೊಸ ಸೋಂಕಿತರ ಸಂಖ್ಯೆ ನಿಯಂತ್ರಣದಲ್ಲಿದ್ದರೂ ಮೃತ ಪಡುತ್ತಿರುವವರ ಸಂಖ್ಯೆ ಬೆಂಗಳೂರಿಗಿಂತಲೂ ಜಾಸ್ತಿಯಿದೆ. ಬಿಬಿಎಂಪಿ ಆಯುಕ್ತರು ಈ ಹಿಂದೆ ಹೇಳಿದಂತೆ, ಅಲ್ಲೂ ಹಳೆಯ ಸಾವಿನ ಸಂಖ್ಯೆಯನ್ನು ಈಗ ಸೇರಿಸಲಾಗುತ್ತಿದೆಯಾ ಎನ್ನುವುದು ತಿಳಿಯಬೇಕಾಗಿದೆ.

 ಜೂನ್ 9-15ರ ಅವಧಿಯಲ್ಲಿ ಮೈಸೂರು ಮತ್ತು ಬೆಂಗಳೂರಿನ ಸಾವಿನ ಸಂಖ್ಯೆ

ಜೂನ್ 9-15ರ ಅವಧಿಯಲ್ಲಿ ಮೈಸೂರು ಮತ್ತು ಬೆಂಗಳೂರಿನ ಸಾವಿನ ಸಂಖ್ಯೆ

ಒಂದು ವಾರದಿಂದ ಅಂದರೆ ಜೂನ್ 9-15ರ ಅವಧಿಯಲ್ಲಿ ಮೈಸೂರು ಮತ್ತು ಬೆಂಗಳೂರಿನ ಸಾವಿನ ಸಂಖ್ಯೆ ಈ ರೀತಿಯಿದೆ:

ದಿನಾಂಕ: ಜೂನ್ 9
ಬೆಂಗಳೂರು: 50
ಮೈಸೂರು: 22

ದಿನಾಂಕ: ಜೂನ್ 10
ಬೆಂಗಳೂರು: 47
ಮೈಸೂರು: 18

 ಜೂನ್ ಹನ್ನೊಂದರಿಂದ ಹದಿಮೂರರ ಅವಧಿ

ಜೂನ್ ಹನ್ನೊಂದರಿಂದ ಹದಿಮೂರರ ಅವಧಿ

ದಿನಾಂಕ: ಜೂನ್ 11
ಬೆಂಗಳೂರು: 48
ಮೈಸೂರು: 20

ದಿನಾಂಕ: ಜೂನ್ 12
ಬೆಂಗಳೂರು: 21
ಮೈಸೂರು: 20

ದಿನಾಂಕ: ಜೂನ್ 13
ಬೆಂಗಳೂರು: 23
ಮೈಸೂರು: 25

Recommended Video

ಮುಂಜಾಗ್ರತೆ ಕ್ರಮವಾಗಿ ಮಕ್ಕಳಿಗೆ ಬೆಡ್ ಹಾಗೂ ವೆಂಟಿ ಲೆಟರ್ ವ್ಯವಸ್ಥೆ ಮಾಡಲಾಗಿದೆ!
 ದಿನಾಂಕ: ಜೂನ್ 14

ದಿನಾಂಕ: ಜೂನ್ 14

ಬೆಂಗಳೂರು: 12
ಮೈಸೂರು: 25

ದಿನಾಂಕ: ಜೂನ್ 15
ಬೆಂಗಳೂರು: 16
ಮೈಸೂರು: 26

English summary
Coronavirus in Mysuru; Covid-19 Death cases surpassing Bengaluru. Here is the comparison of data from June 9-15. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X